ಮುಂಬೈ : ಕೊರೊನಾ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ಮಹಾ ಸ್ಪೋಟಗೊಂಡಿದೆ. ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 25,681 ಪ್ರಕರಣ ದಾಖಲಾಗಿದ್ದು, 70 ಮಂದಿ ಸಾವನ್ನಪ್ಪಿದ್ದಾರೆ.

ಕಳೆದ ಕೆಲ ದಿನಗಳಿಂದಲೂ ಕೊರೊನಾ ಮಹಾಮಾರಿ ಮಹಾರಾಷ್ಟ್ರದ ನಿದ್ದೆಗೆಡಿಸಿದೆ. ನಿನ್ನೆಯಷ್ಟೇ 25 ಸಾವಿರದ ಗಡಿದಾಟಿದ್ದ ಕೊರೊನಾ ಸೋಂಕು ಇಂದೂ ಕೂಡ ಅದೇ ಹಾದಿಯಲ್ಲಿ ಮುನ್ನಡೆದಿದೆ. ಮುಂಬೈ ಮಹಾನಗರದಲ್ಲಕ 3,062 ಮಂದಿಗೆ ಕೋವಿಡ್ ಸೋಂಕು ತಗುಲಿದ್ದರೆ, ನಾಗ್ಪುರ್ನಲ್ಲಿ 3,235 ಕೋವಿಡ್ ಕೇಸ್ ದಾಖಲಾಗಿದೆ.

ಮಹಾರಾಷ್ಟ್ರದಲ್ಲಿ ಒಟ್ಟು 53,208 ಮಂದಿ ಕೊರೊನಾಬ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಲ್ಲದೇ ಇದುವರೆಗೆ 24,22,021 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, 21,89,965 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಳಿದಂತೆ ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಹೆಮ್ಮಾರಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಾಗಿ ಇನ್ನಷ್ಟು ಕಠಿಣ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ.
