ಮಹಾರಾಷ್ಟ್ರದಲ್ಲಿ ಕೊರೋನಾ ಉಲ್ಬಣ…! ಶಾಪಿಂಗ್ ಮಾಲ್ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ..!!

ದೇಶದಾದ್ಯಂತ‌ ಕೊರೋನಾ ಎರಡನೇ ಅಲೆ ಆತಂಕ‌ ಸೃಷ್ಟಿಸಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕೈಮೀರುವ ಆತಂಕ ಎದುರಾಗಿದ್ದು ಸರ್ಕಾರ ಮಾಲ್ ಸೇರಿದಂತೆ ಸಾರ್ವಜನಿಕ‌ ಶಾಪಿಂಗ್ ಸ್ಥಳಗಳ ಪ್ರವೇಶಕ್ಕೆ ಕೊರೋನಾ ಟೆಸ್ಟ್ ರಿಪೋರ್ಟ್ ಕಡ್ಡಾಯಗೊಳಿಸಿದೆ.

ಮಹಾರಾಷ್ಟ್ರದಲ್ಲಿ ಅತ್ಯಂತ ವೇಗವಾಗಿ ಕೊರೋನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು ದಿನವೊಂದಕ್ಕೆ ೨೫ ಸಾವಿರ ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಮೂಡಿಸಿದೆ. ಹೀಗಾಗಿ ಇನ್ಮುಂದೆ ಮುಂಬೈ ನಲ್ಲಿ ಶಾಪಿಂಗ್ ಮಾಲ್ ಪ್ರವೇಶಕ್ಕೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯ ಎಂದು ಸರ್ಕಾರ ಆದೇಶಿಸಿದೆ.

ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಅಥವಾ ಆಂಟಿಜೆನ್ ವರದಿ ನೆಗೆಟಿವ್ ಇದ್ದರೆ ಮಾತ್ರ ಶಾಪಿಂಗ್ ಮಾಲ್ ಪ್ರವೇಶಿಸಬಹುದು. ಮಾರ್ಚ್ ೨೨ ರಿಂದ ಈ ನಿಯಮ ಜಾರಿಗೆ ಸರ್ಕಾರ ನಿರ್ಧರಿಸಿದೆ.

ಮಹಾರಾಷ್ಟ್ರ ರಾಜ್ಯದಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇರೋದರಿಂದ ಸರ್ಕಾರ ಕಂಗಾಲಾಗಿದ್ದು ರೋಗ ನಿಯಂತ್ರಣಕ್ಕೆ ಲಾಕ್ ಡೌನ್ ಅನಿವಾರ್ಯ ಎಂಬ ಸ್ಥಿತಿಗೆ ತಲುಪಿರೋದರಿಂದ ಸರ್ಕಾರ ಚಿಂತನೆಯಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಉದ್ಧವ್ ಠಾಕ್ರೆ, ರೋಗಪೀಡಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕ ತಂದಿದೆ. ಜನರು ತಮ್ಮ ಜವಾಬ್ದಾರಿ ಅರಿಯಬೇಕು. ಲಾಕ್ ಡೌನ್ ಬೇಡ ಎನ್ನುವವರು ಮಾಸ್ಕ್ ಧರಿಸಿ ನಿಯಮ ಪಾಲಿಸುತ್ತಾರೆ‌. ಲಾಕ್ ಡೌನ್ ಜಾರಿಯಾಗಲಿ ಎನ್ನುವವರು ಮಾಸ್ಕ್ ಧರಿಸುವುದಿಲ್ಲ ಎಂದಿದ್ದಾರೆ.

ಈಗಾಗಲೇ ಥಾನೆ ಸೇರಿದಂತೆ ಹಲವೆಡೆ ಲಾಕ್ ಡೌನ್ ಜಾರಿಯಾಗಿದ್ದು ಇನ್ಮುಂದೆ ಪ್ರಕರಣಗಳು ಏರಿಕೆಯಾಗುತ್ತಲೇ ಸಾಗಿದಲ್ಲಿ ಲಾಕ್ ಡೌನ್ ಅನಿವಾರ್ಯ ಎನ್ನಲಾಗಿದೆ. ಒಟ್ಟಿನಲ್ಲಿ ಮತ್ತೊಮ್ಮೆ ದೇಶದಲ್ಲಿ ಕೊರೋನಾ ಆತಂಕ ಜೋರಾಗಿದೆ.

Comments are closed.