Manipur Violence : ಮಣಿಪುರ ಹಿಂಸೆ – ಪ್ರೀತಿ ಏಕೆ ಆ ಭೂಮಿ ಮೇಲಿದೆ ?

ಮಣಿಪುರ : Manipur Violence : ಬಿಟ್ಟು ಹೋಗುವ ಭೂಮಿಗಾಗಿ ಬೆಟ್ಟದ ತಪ್ಪಲಿಗೆ ಬೆಂಕಿ ಬಿದ್ದಿದೆ. ಮಣಿಪುರ ಹೊತ್ತಿ ಉರಿಯುತ್ತಿದೆ. ಅಪಾರ ಹಾನಿ, ಸಾವು ನೋವುಗಳು ಸಂಭವಿಸಿವೆ. ಅಪಾರ ಆಸ್ತಿ ನಷ್ಟವಾಗಿದೆ. ಭೂಮಿಯ ಮೇಲಿನ ಅಧಿಕಾರ ಇನ್ನಾರದ್ದೋ ಕೈಗೆ ಸಿಗುತ್ತದೆ ಎಂಬ ಆಕ್ರೋಷ ಸಮುದಾಯಗಳ ನಡುವಿನ ವೈಷಮ್ಯಕ್ಕೆ ಕಾರಣವಾಗಿ, ದಂಗೆಯಾಗಿದೆ. ಒಂದು ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವ ಪ್ರಸ್ತಾವನೆಯಿಂದ ಹುಟ್ಟಿದ ದಂಗೆಗೆ ಕಂಡಲ್ಲಿ ಗುಂಡಿಕ್ಕುವ ರೂಪ ಪಡೆದುಕೊಂಡಿದೆ. ಅಷ್ಟಕ್ಕೂ ಈ ದ್ವೇಷ ಹಾಗೂ ದಂಗೆಗೆ ಕಾರಣವೇನೆಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಮೇತಿ ಜನಾಂಗಕ್ಕೆ ಪರಿಶಿಷ್ಠ ಸ್ಥಾನ ಮಾನದ ಬೇಡಿಕೆ ವಿರೋಧಿಸಿ ನಡೆದ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿದೆ. ಬಹುಸಂಖ್ಯಾತ ಮೈತಿ ಜನಾಂಗದ ವಿರುದ್ಧ ಕುಕಿ ಬುಡಕಟ್ಟು ಸಮುದಾಯ ಬಂಡೆದ್ದಿದೆ. ಮಣಿಪುರದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. 144 ಸೆಕ್ಷನ್‌ ಜಾರಿಗೆ ತರಲಾಗಿದೆ. 18,00,000 ಜನಸಂಖ್ಯೆಯನ್ನು ಹೊಂದಿರುವ ಮೇತಿ ಸಮುದಾಯ ಮಣಿಪುರದಲ್ಲಿನ ಒಟ್ಟು ಜನಸಂಖ್ಯೆಯ 53% ಭಾಗವನ್ನು ಹೊಂದಿದೆ. ತಮ್ಮನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಿ ಎಂಬುದು ಈ ಸಮುದಾಯದ ಬಹಳ ಸಮಯದ ಹಿಂದಿನ ಬೇಡಿಕೆಯಾಗಿತ್ತು. ಆದರೆ ಇದಕ್ಕೆ ಬುಡಕಟ್ಟು ಜನಾಂಗದವರಿಂದ ಇದಕ್ಕೆ ವಿರೋಧ ಇದ್ದಿತ್ತು. ಹಾಗೆ ಈ ಬಲಿಷ್ಠ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವುದರಿಂದ ತಮ್ಮ ಅಸ್ಥಿತ್ವ ಕಳೆದುಕೊಂಡಂತಾಗುತ್ತದೆ ಎಂಬುದು ನಾಗ ಮತ್ತು ಕುಕಿ ಸಮುದಾಯದ ಯೋಚನೆಯಾಗಿದೆ. ಹಾಗಾಗಿ ಅಖಿಲ ಬುಡಕಟ್ಟು ವಿದ್ಯಾರ್ಥಿ ಒಕ್ಕೂಟ ಮಣಿಪುರ ಇದು ಪ್ರತಿಭಟನಾ ಜಾಥವನ್ನು ಆಯೋಜಿಸಿತ್ತು. ಇಲ್ಲಿ ಹುಟ್ಟಿಕೊಂಡ ಹಿಂಸಾಚಾರ ನಗರದ ವಿವಿಧ ಭಾಗಗಳಿಗೆ ಹಬ್ಬಿತು. ಸುಮಾರು 9 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದಾರೆ.

ನೆರೆಯ ರಾಜ್ಯಗಳಿಗೂ ಹಬ್ಬುವ ಆತಂಕ :

ಅಸ್ಸಾಂ, ನಾಗಾಲ್ಯಾಂಡ್‌, ಮಿಜೋರಾಂ, ಮ್ಯಾನ್ಮಾರ್‌ ಇವು ಮಣಿಪುರದ ನೆರೆಯ ರಾಜ್ಯಗಳು. ಇಲ್ಲಿಯೂ ಕೂಡ ಮೇತಿ ಸಮುದಾಯದ ಜನ ಸಂಖ್ಯೆ ಸಾಕಷ್ಟಿದೆ. ಈ ದಂಗೆ ನೆರೆಯ ರಾಜ್ಯಗಳಿಗೂ ಹಬ್ಬುವ ಆತಂಕ ಹೆಚ್ಚಿದೆ. ಇದರಿಂದಾಗಿ ಕರ್ನಾಟಕ ಚುನಾವಣೆ ಪ್ರಚಾರದಲ್ಲಿದ್ದ ಕೇಂದ್ರ ಗೃಹ ಸಚಿನ ಅಮಿತ್‌ ಶಾ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿ ಮಣಿಪುರದ ಮುಖ್ಯಮಂತ್ರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಭೂಮಿ ಮೇಲಿನ ಪ್ರೀತಿ:

ಯಾವುದೇ ಒಂದು ಜಾತಿ ಅಥವಾ ಸಮುದಾಯವನ್ನು ಎಸ್‌ಸಿ ಅಥವಾ ಎಸ್‌ಟಿಗೆ ಸೇರಿಸಿದಾಗ ಅವರಿಗೆ ಸರಕಾರದ ಸೌಲಭ್ಯಗಳ ಜೊತೆಯಲ್ಲಿ ಭೂಮಿಯ ಮೇಲಿನ ಕೆಲವು ಹಕ್ಕುಗಳು ಸಹಜವಾಗಿಯೇ ಸಿಗುತ್ತವೆ. ಮಣಿಪುರದ ಬುಡಕಟ್ಟು ಸಮುದಾಯಗಳು ಹೀಗೆ ಬಲಿಷ್ಠ ಮೇತಿ ಸಮುದಾಯವನ್ನು ಪರಿಶೀಷ್ಠ ಗುಂಪಿಗೆ ಸೇರಿಸುವುದರಿಂದ ಅವರಿಗೆ ಭೂಮಿಯ ಮೇಲೆ ಹೆಚ್ಚಿನ ಅಧಿಕಾರ ಸಿಗುತ್ತದೆ. ಹಾಗಾಗಬಾರದು ಎಂಬುದು ಅವರ ವಿರೋಧ.

ನೈಸರ್ಗಿಕ ಸಂಪತ್ತು:

ಮಣಿಪುರ ಪರ್ವತ ತಪ್ಪಲಿನಿಂದ ಕೂಡಿದ ರಾಜ್ಯವಾಗಿದೆ. ಇಲ್ಲಿ ಫಲವತ್ತಾದ ಕಣಿವೆ ಪ್ರದೇಶವಿದೆ. ಹತ್ತು ಜಿಲ್ಲೆಗಳಲ್ಲಿ ವಿವಿಧ ಬುಡಕಟ್ಟು ಸಮುದಾಯದ ಜನ ವಾಸಿಸುತ್ತಿದ್ದಾರೆ. 28 ಲಕ್ಷ ಜನಸಂಖ್ಯೆ (2011ರ ಜನಗಣತಿ ಪ್ರಕಾರ)ಯಲ್ಲಿ 40% ಜನಸಂಖ್ಯೆ ಪರ್ವತ ತಪ್ಪಲಿನಲ್ಲಿ ವಾಸಿಸುತ್ತಿದ್ದಾರೆ. ಮೇತಿ ದೊರೆಗಳು ಆಳುತ್ತಿರುವ ಕಾಲದಿಂದಲೂ ಈ ಜನರು ಪರ್ವತ ತಪ್ಪಲಿನಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದಲ್ಲಿ ಮಾನ್ಯತೆ ಪಡೆದ 34 ಪರಿಶಿಷ್ಟ ಪಂಗಡಗಳಿವೆ. 2013ರಲ್ಲಿ ಮೇತಿ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಮಣಿಪುರದ ಪರಿಶಿಷ್ಠ ಪಂಗಡದ ಬೇಡಿಕೆ ಸಮಿತಿಯನ್ನು ರಚನೆ ಮಾಡಲಾಗಿತ್ತು. ಅಲ್ಲಿಂದ ಈ ಬಗ್ಗೆ ಇತರ ಬುಡಕಟ್ಟು ಪಂಗಡಗಳಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಮೇತಿ ಸಮುದಾಯ ಈ ರೀತಿ ಬೇಡಿಕೆ ಸಲ್ಲಿಸಿರುವುದು ನಮಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯುವುದಕ್ಕಾಗಿ ಅಲ್ಲ, ಬದಲಾಗಿ ನಮ್ಮ ಹಿರಿಯರ ಭೂಮಿಯನ್ನು ಇನ್ನೊಬ್ಬರ ಪಾಲಾಗದಂತೆ ಉಳಿಸಿಕೊಳ್ಳಲು. ಇಲ್ಲಿ ಮ್ಯಾನ್ಮಾರ್‌ ಸೇರಿದಂತೆ ಬೇರೆ ಪ್ರದೇಶಗಳಿಂದ ವಲಸೆ ಬಂದು ನೆಲೆಸಿದವರಿಂದ ಆತಂಕವಿದೆ. ಇದರಿಂದ ಮುಕ್ತಿ ಪಡೆಯುವ ಸಲುವಾಗಿ ನಾವು ಬೇಡಿಕೆ ಇಟ್ಟಿದ್ದೇವೆ ಎನ್ನುತ್ತಾರೆ.

ಕಳೆದ ಮಾರ್ಚ್‌ ತಿಂಗಳಲ್ಲಿ ಮಣಿಪುರ ಹೈಕೋರ್ಟ್‌ ಮೇತಿ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸುವಂತೆ ಅಲ್ಲಿನ ರಾಜ್ಯ ಸರಕಾರವನ್ನು ಕೇಳಿಕೊಂಡಿದ್ದು. ಈ ಆದೇಶ ಹೊರಬಂದ ದಿನದಿಂದ ಮಣಿಪುರದಲ್ಲಿ ಅಶಾಂತಿ ನಿರ್ಮಾಣವಾಗಿ, ಎರಡು ದಿನಗಳ ಹಿಂದೆ ತೀವ್ರ ರೂಪ ಪಡೆಯಿತು. ಮೇ 2 ರಂದು ಅಖಿಲ ಬುಡಕಟ್ಟು ವಿದ್ಯಾರ್ಥಿ ಒಕ್ಕೂಟ ಮಣಿಪುರ All Tribal Students Union of Manipur (ATSUM) ಮೇತಿ ಸಮುದಾಯದ ಬೇಡಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದು ಹಿಂಸಾಚಾರಕ್ಕೆ ತಿರುಗಿತು.

ಇದನ್ನೂ ಓದಿ : ಮಣಿಪುರ ಹಿಂಸಾಚಾರ: ಕಂಡಲ್ಲಿ ಗುಂಡಿಕ್ಕಲು ರಾಜ್ಯಪಾಲರ ಸಮ್ಮತಿ

ಇದನ್ನೂ ಓದಿ : ಮಣಿಪುರದಲ್ಲಿ ಹಿಂಸಾಚಾರ : ಅಮಿತ್‌ ಶಾ ಕರ್ನಾಟಕ ಕಾರ್ಯಕ್ರಮ ರದ್ದು

Comments are closed.