Karun Nair : ಐಪಿಎಲ್‌ನಿಂದ ಕೆ.ಎಲ್ ರಾಹುಲ್ ಔಟ್, ಕನ್ನಡಿಗನ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ ?

ಬೆಂಗಳೂರು: Karun Nair : ಬಲ ತೊಡೆಯ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕ, ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಐಪಿಎಲ್’ನ ಮುಂದಿನ ಪಂದ್ಯಗಳಿಗೆ ರಾಹುಲ್ ಅಲಭ್ಯರಾಗಿದ್ದಾರೆ. ಮೇ 1ರಂದು ಲಕ್ನೋದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಫೀಲ್ಡಿಂಗ್ ನಡೆಸುವ ಸಂದರ್ಭದಲ್ಲಿ ಸ್ನಾಯು ಸೆಳೆತದಿಂದ ಬಳಲಿದ್ದರು. ಗಾಯದ ಪ್ರಮಾಣ ಗಂಭೀರವಾಗಿರುವ ಕಾರಣ ಐಪಿಎಲ್ ಟೂರ್ನಿಯಿಂದ ರಾಹುಲ್ ಹೊರ ಬಿದ್ದಿದ್ದಾರೆ.

ರಾಹುಲ್ ಅವರ ಬದಲು ಕರ್ನಾಟಕದ ಮತ್ತೊಬ್ಬ ಆಟಗಾರ ಕರುಣ್ ನಾಯರ್ (Karun Nair) ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರುವ ಸಾಧ್ಯತೆಗಳಿವೆ. ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಇಂಥದ್ದೊಂದು ಸುದ್ದಿ ರಾಜ್ಯ ಕ್ರಿಕೆಟ್ ಸರ್ಕಲ್’ನಲ್ಲಿ ಹರಿದಾಡುತ್ತಿದೆ. 32 ವರ್ಷದ ಕರುಣ್ ನಾಯರ್ ಅವರನ್ನ ಕಳೆದ ಐಪಿಎಲ್ ಹರಾಜಿನಲ್ಲಿ ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. 50 ಲಕ್ಷ ರೂ.ಗಳ ಮೂಲಬೆಲೆ ಹೊಂದಿದ್ದ ಕರುಣ್ ಐಪಿಎಲ್ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದರು. ಇದೀಗ ರಾಹುಲ್ ಗಾಯಗೊಂಡಿರುವ ಕಾರಣ, ಕರುಣ್ ನಾಯರ್’ಗೆ ಅದೃಷ್ಟ ಖುಲಾಯಿಸುವ ಸಾಧ್ಯತೆಯಿದೆ.

Karun Nair : ಐದು ವರ್ಷದ ನಂತರ ಭಾರತ ತಂಡ ಪ್ರತಿನಿಧಿಸ್ತಾರಾ ನಾಯರ್‌

ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ ಭಾರತದ ಕೇವಲ 2ನೇ ಆಟಗಾರನೆಂಬ ದಾಖಲೆ ಹೊಂದಿರುವ ಕರುಣ್ ನಾಯರ್ ಅವರಿಗೆ 2017ರ ನಂತರ ಭಾರತ ಪರ ಆಡುವ ಅವಕಾಶ ಸಿಕ್ಕಿಲ್ಲ. ವೃತ್ತಿಜೀವನದ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿರುವ ಕರುಣ್ ನಾಯರ್, ಕರ್ನಾಟಕ ತಂಡದಿಂದಲೂ ಹೊರ ಬಿದ್ದಿದ್ದಾರೆ.

ಗಾಯಾಳು ಕೆ.ಎಲ್ ರಾಹುಲ್ ಮುಂಬರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final – WTC final 2023) ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆಯಿದೆ. ಒಂದು ವೇಳೆ ರಾಹುಲ್ WTC ಫೈನಲ್ ಪಂದ್ಯಕ್ಕೆ ಅಲಭ್ಯರಾದರೆ ಅವರ ಬದಲು ಕರ್ನಾಟಕದ ಮತ್ತೊಬ್ಬ ಆರಂಭಿಕ ಬ್ಯಾಟ್ಸ್’ಮನ್ ಮಯಾಂಕ್ ಅಗರ್ವಾಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ : India WTC final: ಭಾರತ ಈ ಬಾರಿಯೂ ಟೆಸ್ಟ್ ವಿಶ್ವಕಪ್ ಗೆಲ್ಲೋದು ಡೌಟ್.. ಕಾರಣ ಇಲ್ಲಿದೆ..!

ಇದನ್ನೂ ಓದಿ : Commentators in RCB team: ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡುತ್ತಿದ್ದಾರೆ ಇಬ್ಬರು ಕಾಮೆಂಟೇಟರ್ಸ್ !

Comments are closed.