ಒಡಿಶಾ : ವಿವಾಹಿತ ಮಹಿಳೆಯೋರ್ವರನ್ನ ಅಪಹರಿಸಿ ಸುಮಾರು 21 ದಿನಗಳ ಕಾಲ ಯುವಕರಿಬ್ಬರು ಅತ್ಯಾಚಾರವೆಸಗಿರುವ ಘಟನೆ ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದಿದೆ.
ಮಾರ್ಚ್ 24ರಂದು ಸಂತ್ರಸ್ತ ಮಹಿಳೆ ದಾಖಲೆ ಪತ್ರಗಳನ್ನು ಜೆರಾಕ್ಸ್ ಮಾಡಿಸುವ ಸಲುವಾಗಿ ಅಂಗಡಿಗೆ ಬಂದಿದ್ದಾಳೆ. ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಎಸ್ ಯುವಿ ಕಾರಿನಲ್ಲಿ ಬಂದ ಯುವಕರು ಮಹಿಳೆಯಲ್ಲಿ ವಿಳಾಸ ಕೇಳಿದ್ದಾರೆ. ಈ ವೇಳೆ ಕಾರಿನ ಹಿಂಭಾಗದ ಬಾಗಿಲನ್ನು ಜೋರಾಗಿ ತೆಗೆಯುತ್ತಿದ್ದಂತೆಯೇ ಬಾಗಿಲು ಮಹಿಳೆಯ ತಲೆಗೆ ಬಡಿದು ಪ್ರಜ್ಞೆ ತಪ್ಪಿದ್ದಾಳೆ.
ಮಹಿಳೆ ಪ್ರಜ್ಞಾ ಸ್ಥಿತಿಗೆ ಬರುವಾಗ ಆಕೆ ನಗ್ನ ಸ್ಥಿತಿಯಲ್ಲಿ ಟ್ರಕ್ ಸ್ಟೇಷನ್ ನ ಕ್ಯಾಬಿನ್ ವೊಂದರಲ್ಲಿ ಬೆತ್ತಲೆಯಾಗಿ ದ್ದಳು. ಅಲ್ಲಿಯೇ ಇದ್ದ ಯುವಕರಿಬ್ಬರು ಕೂಗಿದ್ರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಸುಮಾರು 21 ದಿನಗಳ ಕಾಲ ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಒಂದು ದಿನ ಟ್ರಕ್ ಬಾಗಿಲು ಯುವಕರು ಹಾಕಲು ಮರೆತಿದ್ದರು. ಇದನ್ನು ಅರಿತ ಮಹಿಳೆ ಅಲ್ಲಿಂದ ಪರಾರಿ ಯಾಗಿದ್ದಾಳೆ.
ಸುಮಾರು 5 ಕಿ.ಮೀ.ದೂರದಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾಳೆ. ನಂತರದ ಫತೇಗಢ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೊಲೀಸರು ಗಂಡನ ವಿಳಾಸ ಪಡೆದು ಮಾಹಿತಿ ನೀಡಿದಾಗ ಠಾಣೆಗೆ ಬಂದ ಆಕೆಯ ಪತ್ನಿ ಸಂತ್ರಸ್ತೆಯನ್ನು ಮನೆಗೆ ಕರೆ ದೊಯ್ದಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.