ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ನಿಧನದ ಬಳಿಕ ಸಿಡಿಎಸ್ ಜನರಲ್ ಹುದ್ದೆ ತೆರವಾಗಿದೆ.ಹೀಗಾಗಿ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ (MM Naravane )ಮೂವರು ಸೇನಾ ಮುಖ್ಯಸ್ಥರನ್ನು ಒಳಗೊಂಡ ಸಿಬ್ಬಂದಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ ಎನ್ನಲಾಗಿದೆ.
ಮೂವರು ಸೇನಾ ಮುಖ್ಯಸ್ಥರಲ್ಲಿ ಜನರಲ್ ಎಂ ಎಂ ನರವಾಣೆ ಹಿರಿಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಸಮಿತಿಯ ಅಧ್ಯಕ್ಷರ ಸ್ಥಾನವನ್ನು ನೀಡಲಾಗಿದೆ. ಭಾರತೀಯ ವಾಯುಪಡೆಯ ಮುಖ್ಯಸ್ಥ ವಿ ಆರ್ ಚೌಧರಿ ಸೆಪ್ಟೆಂಬರ್ 30ರಂದು ಹಾಗೂ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ನವೆಂಬರ್ 30ರಂದು ಅಧಿಕಾರ ವಹಿಸಿಕೊಂಡಿದ್ದರು. ಸೇವೆಯಲ್ಲಿ ನರವಾಣೆ ಇವರಿಬ್ಬರಿಗಿಂತ ಹಿರಿಯವರಾಗಿದ್ದಾರೆ.ಇದೇ ಕಾರಣಕ್ಕೆ ಎಂ ಎಂ ನರವಾಣೆಯವರನ್ನು ಮೂವರು ಸೇನಾ ಮುಖ್ಯಸ್ಥರನ್ನು ಒಳಗೊಂಡ ಸಿಬ್ಬಂದಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಡಿಸೆಂಬರ್ 8ರಂದು ತಮಿಳುನಾಡಿನ ಕುನೂರಿನಲ್ಲಿ ಎಂಐ 17 ವಿ5 ಹೆಲಿಕಾಪ್ಟರ್ ಪತನಗೊಂಡಿತ್ತು . ಈ ಅವಘಡದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ರನ್ನು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೂ ಸಹ ಅವರು ಚಿಕಿತ್ಸೆ ಫಲಕಾರಿಯಾದೇ ಬುಧವಾರ ನಿಧನರಾಗಿದ್ದಾರೆ. ಹಲವು ದಶಕಗಳ ಬಳಿಕ ದೇಶದಲ್ಲಿ ನಡೆದ ಅತ್ಯಂತ ಭೀಕರ ವಾಯುಪಡೆಯ ದುರಂತ ಇದಾಗಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ
ಬೆಂಗಳೂರು : ಡಿಸೆಂಬರ್ 8ರಂದು ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಇತರೆ 12 ಮಂದಿಯನ್ನು ಬಲಿತೆಗೆದುಕೊಂಡಿದ್ದ ಹೆಲಿಕಾಪ್ಟರ್ ( Chopper Crash ) ದುರಂತದಲ್ಲಿ ಬದುಕುಳಿದಿದ್ದ ಏಕೈಕ ಸೇನಾನಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್(Group Captain Varun Singh) ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಿಸಲ್ಪಟ್ಟಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ರನ್ನು ಮೊದಲು ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಮಿಲಿಟರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ವರುಣ್ ಸಿಂಗ್ರನ್ನು ಲೈಫ್ ಸಪೋರ್ಟ್ನಲ್ಲಿ ಇಡಲಾಗಿತ್ತು.
ಡಿಸೆಂಬರ್ 8ರಂದು ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡು ಇಂದು ಬೆಳಗ್ಗೆ ನಿಧನರಾದ ಕೆಚ್ಚೆದಯ ವೀರ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನ ವಾರ್ತೆಯನ್ನು ತಿಳಿಸಲು ಭಾರತೀಯ ವಾಯುಪಡೆಯು ದುಃಖಿತವಾಗಿದೆ. ವರುಣ್ ಸಿಂಗ್ ನಿಧನಕ್ಕೆ ಭಾರತೀಯ ವಾಯುಪಡೆ ಸಂತಾಪ ಸೂಚಿಸುತ್ತಿದೆ. ಹಾಗೂ ದುಃಖತೃಪ್ತ ಕುಟುಂಬದವರ ಜೊತೆಯಲ್ಲಿ ಐಎಫ್ ದೃಢವಾಗಿ ನಿಂತಿದೆ ಎಂದು ಟ್ವೀಟ್ ಮಾಡಲಾಗಿದೆ. ಶೌರ್ಯ ಚಕ್ರ ಪ್ರಶಸ್ತಿ ವಿಜೇತ ವರುಣ್ ಸಿಂಗ್ ಬದುಕುಳಿಯಲೆಂದು ದೇಶದ ಮೂಲೆ ಮೂಲೆಯ ಜನರು ಪ್ರಾರ್ಥಿಸಿದ್ದರು. ಮೊನ್ನೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕೈಕ ಸೇನಾನಿ ಇವರಾಗಿದ್ದರು.
MM Naravane becoame the new chief of army staff committee president
ಇದನ್ನು ಓದಿ: marriage age of women : ಮಹಿಳೆಯರ ಮದುವೆಯ ಕನಿಷ್ಟ ವಯಸ್ಸು 18 ರಿಂದ 21 ವರ್ಷಕ್ಕೆ ಏರಿಸಲು ಸಂಪುಟ ಅಸ್ತು..!
ಇದನ್ನೂ ಓದಿ: Kerala High Court :‘ಮಗಳ ಮದುವೆಗೆ ಪೋಷಕರು ನೀಡುವ ಉಡುಗೊರೆ ವರದಕ್ಷಿಣೆಯಲ್ಲ’ : ಕೇರಳ ಹೈಕೋರ್ಟ್ ಮಹತ್ವದ ಆದೇಶ