ಮುಂಬೈ : 2008ರಲ್ಲಿ ವಿಶ್ವವನ್ನೇ ತಲ್ಲಣಗೊಳಿಸಿದ್ದ ಮುಂಬೈನಲ್ಲಿ ನಡೆದ ಉಗ್ರ ದಾಳಿಯ(26/211)ಮಾದರಿಯಲ್ಲೇ ಮತ್ತೊಂದು ದಾಳಿ (Mumbai terrorist attack threat) ನಡೆಸುತ್ತೇವೆ ಅಂತಾ ಬೆದರಿಕೆ ಸಂದೇಶವೊಂದು ಬಂದಿದೆ.
ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಂನ ವಾಟ್ಸಾಪ್ ನಂಬರ್ ಗೆ ಈ ಬೆದರಿಕೆ ಸಂದೇಶ ಬಂದಿದ್ದು, ಮುಂಬೈ ದಾಳಿಯ ಮಾದರಿಯಲ್ಲೇ ದಾಳಿ ನಡೆಸೋದಾಗಿ ವಾಟ್ಸಾಪ್ ಸಂದೇಶದಲ್ಲಿ ಎಚ್ಚರಿಕೆ ಕೊಡಲಾಗಿದೆ. ಪಾಕಿಸ್ತಾನ ಮೂಲದ ನಂಬರ್ ನಿಂದ ವಾಟ್ಸಾಪ್ ಸಂದೇಶ ಬಂದಿದೆ ಅಂತಾ ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಷ್ಟೇ ಅಲ್ದೆ ಈ ಉಗ್ರ ದಾಳಿಯನ್ನ ಆರು ಜನರ ತಂಡ ನಡೆಸುತ್ತೆ ಅಂತಾ ಬೆದರಿಕೆ ಸಂದೇಶದಲ್ಲಿ ಕಳುಹಿಸಲಾಗಿದೆ.
ಸದ್ಯ ಮುಂಬೈ ಪೊಲೀಸರು ವಾಟ್ಸಾಪ್ ಸಂದೇಶದ ಜಾಡನ್ನ ಹಿಡಿದು ಬೆದರಿಕೆ ಸಂದೇಶವನ್ನ ಕಳುಹಿಸಿದವರಿಗಾಗಿ ಶೋಧ ನಡೆಸ್ತಿದ್ದಾರೆ. ಅಲ್ದೆ ಮುಂಜಾಗ್ರತಾ ಕ್ರಮವಾಗಿ ರೈಲು ನಿಲ್ದಾಣ, ಬಸ್ ನಿಲ್ದಾಣ, ಏರ್ ಪೋರ್ಟ್ ಸೇರಿದಂತೆ ಮುಂಬೈನ ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ತೀವ್ರ ತಪಾಸಣೆಗೆ ಒಳಪಡಿಸಲಾಗ್ತಿದೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರದ ರಾಯಗಢ ಕರಾವಳಿ ತೀರದಲ್ಲಿ ಶಸ್ತ್ರಾಸ್ತ್ರ ತುಂಬಿದ ಎರಡು ಅನುಮಾನಾಸ್ಪದ ಬೋಟ್ ಗಳನ್ನ ವಶಕ್ಕೆ ಪಡೆಯಲಾಗಿತ್ತು. ಬೋಟ್ ನಲ್ಲಿ 3 AK47 ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿತ್ತು. ಮತ್ತೊಂದು ಬೋಟ್ ನಲ್ಲಿ ಮ್ಯಾಪ್ ಸೇರಿದಂತೆ ಕೆಲ ದಾಖಲೆಗಳನ್ನೂ ಸಹ ಜಪ್ತಿಮಾಡಲಾಗಿತ್ತು. ಶಸ್ತ್ರಾಸ್ತ್ರ ತುಂಬಿದ ಬೋಟ್ ಜಪ್ತಿ ಪ್ರಕರಣದಿಂದ ಮಹಾರಾಷ್ಟ್ರದಲ್ಲಿ ಉಗ್ರದಾಳಿಯ ಆತಂಕ ಮನೆ ಮಾಡಿತ್ತು. ಇದರ ಬೆನ್ನಲ್ಲೇ ಈಗ 26/11 ಮುಂಬೈ ಉಗ್ರ ದಾಳಿಯ ಮಾದರಿಯಲ್ಲಿ ವಿಧ್ವಂಸಕ ಕೃತ್ಯ ನಡೆಸೋದಾಗಿ ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಂನ ವಾಟ್ಸಾಪ್ ಗೆ ಬಂದಿರೋ ಬೆದರಿಕೆ ಸಂದೇಶ ಆತಂಕವನ್ನ ಇಮ್ಮಡಿಗೊಳಿಸಿದೆ.
ಇದನ್ನೂ ಓದಿ : Uttarakhand Flood : ಉತ್ತರಾಖಂಡ್ ನಲ್ಲಿ ಮತ್ತೆ ಜಲಪ್ರಳಯ..!
ಇದನ್ನೂ ಓದಿ : Meghana Raj Sarja Emotional answer : ನಿಮಗೀಗ ಚಿರು ನೆನಪಿಲ್ಲವಾ ? ಪ್ರಶ್ನೆಗೆ ಮೇಘನಾ ಕೊಟ್ರು ಭಾವುಕ ಉತ್ತರ
Mumbai terrorist attack threat Terror threat message warning-Mumbai 26/11 like attack –Mumbai alert