jote joteyali serial : ‘ಜೊತೆ ಜೊತೆಯಲಿ’ ಧಾರವಾಹಿ ವೀಕ್ಷಕರಿಗೆ ಬಿಗ್​ ಅಪ್ಡೇ​​ಟ್​​ : ಸೀರಿಯಲ್​​ನಿಂದ ನಟ ಅನಿರುದ್ಧಗೆ ಕೊಕ್​​

jote joteyali serial : ಸಾಹಸ ಸಿಂಹ ವಿಷ್ಣುವರ್ಧನ್​ ಹಾಗೂ ಭಾರತಿ ದಂಪತಿಯ ಅಳಿಯ ಅನಿರುದ್ಧ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಯಶಸ್ಸನ್ನು ಸಾಧಿಸಬೇಕೆಂದು ಸಾಕಷ್ಟು ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೂ ಸಹ ಅವರಿಗೆ ಸಿನಿಮಾ ಒಲಿದು ಬರಲಿಲ್ಲ. ನಟಿಸಿದ ಸಿನಿಮಾಗಳೆಲ್ಲ ಸಾಲು ಸಾಲಾಗಿ ಸೋತು ಚಂದನವನದಿಂದ ಅನಿರುದ್ಧರ ಹೆಸರೇ ಮರೆಯಾಗ್ತಿದೆ ಅನ್ನೋವಷ್ಟರಲ್ಲಿ ಅವರ ಕೈ ಹಿಡಿದಿದ್ದು ಕಿರುತೆರೆ . ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ ’ ಸೀರಿಯಲ್​ನಲ್ಲಿ ಆರ್ಯವರ್ಧನ್​ ಆಗಿ ಬಂದ ನಟ ಅನಿರುದ್ಧ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿದ್ದಾರೆ.


ಜೊತೆ ಜೊತೆಯಲಿ ಎಂಬ ಸೀರಿಯಲ್​ ಸಂಪೂರ್ಣವಾಗಿ ಆರ್ಯವರ್ಧನ್​ ಪಾತ್ರದ ಮೇಲೆಯೇ ಹೆಣೆಯಲಾಗಿದ್ದ ಒಂದು ಕತೆಯಾಗಿತ್ತು. ಆರ್ಯವರ್ಧನ್​ ಪಾತ್ರ ಅನಿರುದ್ಧಗೆ ಎಷ್ಟರ ಮಟ್ಟಿಗೆ ಹೆಸರು ತಂದುಕೊಟ್ಟಿತ್ತು ಅಂದರೆ ಕರುನಾಡ ಜನತೆ ಇವರನ್ನು ಅನಿರುದ್ಧ ಎಂದು ಗುರುತಿಸೋದಕ್ಕಿಂತ ಆರ್ಯವರ್ಧನ್​ ಎಂದೇ ಗುರುತಿಸಲು ಆರಂಭಿಸಿದ್ದರು. ಅಲ್ಲದೇ ಬಹಳ ಸಮಯಗಳ ಕಾಲ ಈ ಧಾರವಾಹಿ ಕನ್ನಡದ ಸೀರಿಯಲ್​ನಲ್ಲಿಯೇ ನಂಬರ್​ 1 ಎನಿಸಿತ್ತು.


ಮನುಷ್ಯನಿಗೆ ಯಶಸ್ಸು ಸಿಗುವುದು ಮುಖ್ಯವಲ್ಲ. ಯಶಸ್ಸು ಕಂಡ ಬಳಿ ಆತ ಹೇಗೆ ವರ್ತಿಸುತ್ತಾನೆ ಅನ್ನೋದು ಬಹಳ ಮುಖ್ಯ ಅಂತಾ ತಿಳಿದವರು ಹೇಳ್ತಾರೆ. ಈಗ ಈ ಮಾತನ್ನು ಹೇಳೋಕೆ ಕಾರಣ ಕೂಡ ಇದೆ. ಅದೇನೆಂದರೆ ಜೊತೆ ಜೊತೆಯಲಿ ಸೀರಿಯಲ್​ನ ಯಶಸ್ಸಿಗೆ ದೊಡ್ಡ ಮಟ್ಟದಲ್ಲಿ ಕಾರಣರಾಗಿರುವ ಅನಿರುದ್ಧಗೆ ಧಾರವಾಹಿ ತಂಡ ಗೇಟ್​ ಪಾಸ್​ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಧಾರವಾಹಿ ನಿರ್ದೇಶಕ ಆರೂರು ಜಗದೀಶ್​ ಆಗಲಿ ಅಥವಾ ಜೀ ಕನ್ನಡ ವಾಹಿನಿಯಾಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.


ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಈ ಧಾರವಾಹಿಯ ಮೂಲಕ ಯಶಸ್ಸನ್ನು ಗಳಿಸಿರುವ ಅನಿರುದ್ಧ ಸೆಟ್​ನಲ್ಲಿ ತೀರಾ ಗರ್ವದಿಂದ ವರ್ತಿಸುತ್ತಿದ್ದರು ಎನ್ನಲಾಗಿದೆ. ತಂತ್ರಜ್ಞರೊಂದಿಗೆ ಸರಿಯಾಗಿ ಹೊಂದಿಕೊಳ್ಳದೇ ಚಿಕ್ಕ ಚಿಕ್ಕ ವಿಚಾರಕ್ಕೂ ಕಿರಿಕ್​ ತೆಗೆದು ಶೂಟಿಂಗ್​​ಗೆ ಅಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ. ಅನಿರುದ್ಧ ಕಾಟವನ್ನು ಈವರೆಗೆ ಸಹಿಸಿಕೊಂಡಿದ್ದ ಧಾರವಾಹಿ ತಂಡ ಇದೀಗ ಅವರಿಗೆ ಮನೆ ಕಡೆ ಕಳುಹಿಸಿದೆ ಎನ್ನಲಾಗಿದೆ .


ಧಾರವಾಹಿ ಕತೆಯಲ್ಲಿ ಪದೇ ಪದೇ ಮೂಗು ತೂರಿಸುತ್ತಿದ್ದ ಅನಿರುದ್ಧ ತಮ್ಮ ಪಾತ್ರದ ವಿಚಾರ ಬಂದಾಗ ಯಾರ ಅನುಮತಿಯನ್ನೂ ಕೇಳದೇ ತಾನಾಗೇ ಕತೆ ಬದಲಾಯಿಸುವುದು, ತನಗೆ ಅನುಕೂಲವಾಗುವಂತಹ ಡೈಲಾಗ್​ಗಳನ್ನು ಹೇಳುವುದು ಈ ರೀತಿಯ ತೊಂದರೆಯನ್ನು ಕೊಡುತ್ತಿದ್ದರು ಎನ್ನಲಾಗಿದೆ. ಕಳೆದೊಂದು ವರ್ಷದಿಂದ ಅನಿರುದ್ಧ ಕಾಟ ತಡೆದುಕೊಂಡು ಹೈರಾಣಾಗಿರುವ ಧಾರವಾಹಿ ತಂಡ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ .


ಇನ್ನೊಂದು ಮಾಹಿತಿಯ ಪ್ರಕಾರ ಅನಿರುದ್ಧರನ್ನು ಕಿರುತೆರೆಯಿಂದಲೇ ಬ್ಯಾನ್​ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದೂ ಹೇಳಲಾಗ್ತಿದೆ. ಜೀ ಕನ್ನಡ ಹಾಗೂ ಕಿರುತೆರೆ ನಿರ್ಮಾಪಕರ ಸಂಘ ಈ ಬಗ್ಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಇತ್ತ ನಟ ಅನಿರುದ್ಧ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇದನ್ನು ಓದಿ : Uttarakhand Flood : ಉತ್ತರಾಖಂಡ್ ನಲ್ಲಿ ಮತ್ತೆ ಜಲಪ್ರಳಯ..!

ಇದನ್ನೂ ಓದಿ : threw eggs at the savarkar : ಸಾವರ್ಕರ್​ ಫೋಟೋ ತುಳಿದು, ಮೊಟ್ಟೆ ಹೊಡೆದು ಅಗ್ನಿಗಾಹುತಿ : ಸ್ವಾತಂತ್ರ್ಯ ಹೋರಾಟಗಾರನ ಫೋಟೋಗೆ ಭಾರೀ ಅವಮಾನ

actor aniruddh was removed from the jote joteyali serial

Comments are closed.