ಮುಂಬೈನಲ್ಲಿ ಆಸ್ಪತ್ರೆಯಲ್ಲಿ ಅಗ್ನಿದುರಂತ : 12 ಕೊರೊನಾ ಸೋಂಕಿತರ ದುರ್ಮರಣ

ಮುಂಬೈ : ನಾಸಿಕ್ ಆಸ್ಪತ್ರೆಯಲ್ಲಿ ನಡೆದ ಆಮ್ಲಜನಕ ಸೋರಿಕೆ ದುರಂತದ‌ ಕಹಿ ನೆನಪು ಮಾಸುವ ಮುನ್ನವೇ ಮುಂಬೈನ ವಿಜಯ್ ವಲ್ಲಭ್ ಆಸ್ಪತ್ರೆಯ ಅಗ್ನಿ ದುರಂತ ಸಂಭವಿಸಿದ್ದು, ದುರಂತದಲ್ಲಿ 12 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ಮುಂಬೈನ ವಿರಾರ್ ನಲ್ಲಿರುವ ವಿಜಯ್ ವಲ್ಲಭ್ ಆಸ್ಪತ್ರೆಯ ಐಸಿಯುನ ಎಸಿಯಲ್ಲಿ ಬೆಳಗಿನ‌ ಜಾವ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ಮಂದಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಈ ಪೈಕಿ 12 ಮಂದಿ‌ ಕೊರೊನಾ ಸೋಂಕಿತರು ಬೆಂಕಿಯ‌ ಕೆನ್ನಾಲಗೆಯಲ್ಲಿ ಸುಟ್ಟು ಕರಕಲಾಗಿದ್ದಾರೆ.

ಬದುಕುಳಿದಿರುವ ರೋಗಿಗಳನ್ನು ಸಮೀಪದಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂಧಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕಳೆದ ಎರಡು‌ ದಿನಗಳ ಹಿಂದೆಯಷ್ಟೇ ನಾಸಿಕ್ ನ  ಜಾಕೀರ್ ಹುಸೇನ್ ಆಸ್ಪತ್ರೆಯಲ್ಲಿ ಆಮ್ಲಜನಕ‌ ಸೋರಿಕೆಯಾಗಿ 22 ಮಂದಿ ರೋಗಿಗಳು ಸಾವನ್ನಪ್ಪಿದ್ದರು.

Comments are closed.