ಮಹಾರಾಷ್ಟ್ರ : MVA Moves SC : ಮಹಾರಾಷ್ಟ್ರದ ರಾಜಕೀಯದಲ್ಲಿ ದಿನಕ್ಕೊಂದು ತಿರುವು ಎದುರಾಗುತ್ತಲೇ ಇದೆ. ಕರ್ನಾಟಕ ಮಾದರಿಯಲ್ಲಿಯೇ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿದ್ದು ಅಚ್ಚರಿಯ ಬೆಳವಣಿಗೆಯಲ್ಲಿ ನೂತನ ಸಿಎಂ ಆಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸರ್ಕಾರ ಪತನದ ಬಳಿಕ ಸುಮ್ಮನೇ ಕೂರದ ಮಹಾ ವಿಕಾಸ್ ಅಘಾಡಿ ಬಂಡಾಯ ಶಾಸಕರ ವಿರುದ್ಧ ಕಾನೂನು ಸಮರವನ್ನು ಮುಂದುವರಿಸಿದೆ. ಸುಪ್ರಿಂ ಕೋರ್ಟ್ ಮೆಟ್ಟಿಲೇರಿರುವ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು 16 ಬಂಡಾಯ ಶಿವಸೇನೆ ಶಾಸಕರ ವಿರುದ್ಧ ಸಲ್ಲಿಸಲಾದ ಅನರ್ಹತೆ ಅರ್ಜಿಗಳನ್ನು ಉಪಸಭಾಪತಿ ನಿರ್ಧರಿಸುವವರೆಗೆ ಅಮಾನತುಗೊಳಿಸುವಂತೆ ಕೋರಿದೆ.
ನೂತನವಾಗಿ ಮಹಾರಾಷ್ಟ್ರ ಸಿಎಂ ಗದ್ದುಗೆ ಏರಿರುವ ಏಕನಾಥ್ ಶಿಂಧೆ ಹಾಗೂ 15 ಮಂದಿ ಬಂಡಾಯ ಶಾಸಕರ ವಿರುದ್ಧ ಅನರ್ಹತಾ ಅರ್ಜಿಗಳ ಸಲ್ಲಿಕೆಯಾಗಿದ್ದು ಇವರ ಅನರ್ಹತೆಯ ಬಗ್ಗೆ ಉಪ ಸಭಾಪತಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಅವರನ್ನು ಅಮಾನತುಗೊಳಿಸುವತೆ ಶಿವಸೇನಾ ಮುಖ್ಯ ಸಚೇತಕ ಸುನೀಲ್ ಪ್ರಭು ಕೋರಿದ್ದಾರೆ.
ಶಿವಸೇನಾ ಬಂಡಾಯ ಶಾಸಕರ ಅನರ್ಹತೆ ಪ್ರಕ್ರಿಯೆಗಳ ಅಂತಿಮ ತೀರ್ಪು ಬರುವವರೆಗೂ ಮಹಾರಾಷ್ಟ್ರ ವಿಧಾನಸಭೆಗೆ ಏಕನಾಥ್ ಶಿಂಧೆ ಸೇರಿದಂತೆ ಎಲ್ಲಾ ಬಂಡಾಯ ಶಾಸಕರು ಪ್ರವೇಶಿಸದಂತೆ ಅಥವಾ ಸದನಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಅವರನ್ನು ನಿರ್ಬಂಧಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಈ ಮೂಲಕ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಪತನಗೊಳಿಸಿ ಸಿಎಂ ಗದ್ದುಗೆಯನ್ನು ಏರಿರುವ ಏಕನಾಥ್ ಶಿಂಧೆಯನ್ನು ಕಟ್ಟಿ ಹಾಕಲು ಶಿವಸೇನೆ ಪ್ಲಾನ್ ರೂಪಿಸಿದೆ. ಇತ್ತ ಏಕನಾಥ್ ಶಿಂಧೆ ಶನಿವಾರದಂದು ಮಹಾರಾಷ್ಟ್ರ ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡುವ ತಯಾರಿಯಲ್ಲಿದ್ದಾರೆ. 40 ಮಂದಿ ಶಿವಸೇನೆ ಶಾಸಕರು ಸೇರಿದಂತೆ ಒಟ್ಟು 50 ಮಂದಿ ಏಕನಾಥ್ ಶಿಂಧೆ ಬಣದಲ್ಲಿದ್ದಾರೆ. ಇದರ ಜೊತೆಯಲ್ಲಿ ಬಿಜೆಪಿಯ ಬಲವೂ ಶಿಂಧೆ ಬೆನ್ನಿಗಿದೆ.
ಇದನ್ನು ಓದಿ : incredible fashion design : ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಅನುಕರಣೆ
ಇದನ್ನೂ ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ
MVA Moves SC, Seeks Suspension of 16 Rebel MLAs Till Disqualification Decision