Eknath Shinde : ಸಿಎಂ ಗದ್ದುಗೆ ಏರಿದ ಬೆನ್ನಲ್ಲೇ ಟ್ವಿಟರ್​ ಪ್ರೊಫೈಲ್​ ಫೋಟೋ ಬದಲಾಯಿಸಿದ ಏಕನಾಥ್​ ಶಿಂಧೆ

ಮಹಾರಾಷ್ಟ್ರ : Eknath Shinde : ಮಹಾರಾಷ್ಟ್ರದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಏಕನಾಥ್​ ಶಿಂಧೆ ಪದಗ್ರಹಣಕ್ಕೂ ಮುನ್ನ ತಮ್ಮ ಟ್ವಿಟರ್​ ಖಾತೆಯ ಫ್ರೊಫೈಲ್​ ಚಿತ್ರವನ್ನು ಬದಲಾಯಿಸಿದ್ದು ಬಾಳ್​ ಠಾಕ್ರೆ ಜೊತೆಗಿರುವ ಫೋಟೋವನ್ನು ಶೇರ್​ ಮಾಡಿದ್ದಾರೆ. ಏಕನಾಥ್​ ಶಿಂಧೆ ಹೊಸ ಫೋಟೋದಲ್ಲಿ ಬಾಳ್​ ಠಾಕ್ರೆ ಪಕ್ಕದಲ್ಲಿ ಮಂಡಿಯೂರಿ ಕುಳಿತಿರುವುದನ್ನು ಕಾಣಬಹುದಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕೆಲವೇ ಗಂಟೆಗೂ ಮುನ್ನ ಶಿಂಧೆ ತಮ್ಮ ಟ್ವಿಟರ್​ ಪ್ರೊಫೈಲ್​ನ್ನು ಬದಲಾಯಿಸಿದ್ದಾರೆ, ಉದ್ಧವ್​ ಠಾಕ್ರೆ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ .

ಅದ್ಧೂರಿ ಸಮಾರಂಭದಲ್ಲಿ ಏಕನಾಥ್​ ಶಿಂಧೆ ಮಹಾರಷ್ಟ್ರದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರೆ, ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಂಬೈನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಭಗತ್​ ಸಿಂಗ್​ ಕೋಶ್ಯಾರಿ ಇವರಿಬ್ಬರಿಗೆ ಪ್ರಮಾಣ ವಚನ ಭೋದಿಸಿದರು.


ಮಹಾರಾಷ್ಟ್ರದ ನೂತನ ಸಿಎಂ ಆಗಿ ಪ್ರಮಾಣ ವಚನವನ್ನು ಸ್ವೀಕರಿಸುವ ಮುನ್ನ ಬಾಳ್​ ಠಾಕ್ರೆಯ ಹಿಂದುತ್ವ ತತ್ವಕ್ಕೆ ಬದ್ಧನಾಗಿ ನಾನು ಮಹಾ ಅಘಾಡಿ ಸರ್ಕಾರವನ್ನು ಉರುಳಿಸಿದ್ದೇನೆ ಎಂದು ಏಕನಾಥ್​ ಶಿಂಧೆ ಹೇಳಿದ್ದಾರೆ. ನಾವು ತೆಗೆದುಕೊಂಡಿರುವ ನಿರ್ಧಾರವು ಬಾಳಾ ಸಾಹೇಬರ ಹಿಂದುತ್ವಕ್ಕೆ ಹಾಗೂ ನಮ್ಮ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದೆ. ನಮ್ಮ ಜೊತೆ 50 ಮಂದಿ ಶಾಸಕರಿದ್ದಾರೆ ಎಂದು ಶಿಂಧೆ ಹೇಳಿದ್ದರು.
ಶಿವಸೇನೆಯ 40 ಶಾಸಕರು ಸೇರಿದಂತೆ ಒಟ್ಟು 50 ಮಂದಿ ಶಾಸಕರು ನಮ್ಮ ಬಣದಲ್ಲಿದ್ದಾರೆ. ಇವರೆಲ್ಲರ ಸಹಾಯದಿಂದ ನಾವು ಈ ಯುದ್ಧವನ್ನು ಗೆಲ್ಲಲು ಸಾಧ್ಯವಾಗಿದೆ. ಈ 50 ಮಂದಿ ಶಾಸಕರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಸಣ್ಣ ಬಿರುಕು ಬಾರದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಏಕನಾಥ್​ ಶಿಂಧೆ ಹೇಳಿದರು.


2014 ರಿಂದ 2019ರವರೆಗೆ ಮಹಾರಾಷ್ಟ್ರದ ಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್​​ ಈ ಬಾರಿ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನಿನ್ನೆ ರಾಜಭವನದಲ್ಲಿ ರಾಜ್ಯಪಾಲರ ಭೇಟಿ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ್ದ ದೇವೇಂದ್ರ ಫಡ್ನವಿಸ್​ ಏಕನಾಥ್​ ಶಿಂಧೆ ಮುಂದಿನ ಸಿಎಂ ಎಂದು ಘೋಷಣೆ ಮಾಡಿದ್ದರು. ಅಲ್ಲದೇ ನಾನು ಈ ಸರ್ಕಾರದ ಭಾಗವಾಗಿ ಇರೋದಿಲ್ಲ ಎಂದೂ ಹೇಳಿದ್ದರು. ಆದರೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಟ್ವೀಟ್​ ಮಾಡಿ ಫಡ್ನವಿಸ್​ ಈ ಸರ್ಕಾರದ ಭಾಗವಾಗಿರಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದರು. ಅದರಂತೆ ಫಡ್ನವಿಸ್​ ಡಿಸಿಎಂ ಆಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.

ಇದನ್ನು ಓದಿ : International Joke Day: ಮನ್ನಸ್ಸನ್ನು ಹಗುರಾಗಿಸುವ ಹಾಸ್ಯದ ದಿನವಿಂದು !

ಇದನ್ನೂ ಓದಿ : incredible fashion design : ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಅನುಕರಣೆ

Eknath Shinde Changes Twitter’s Profile Pic Featuring Bal Thackeray. Check Here

Comments are closed.