ರಾಷ್ಟ್ರೀಯ ವೈದ್ಯರ ದಿನಾಚರಣೆ : ವೈದ್ಯರಿಗಾಗಿ ಪ್ರಧಾನಿ ಮೋದಿ ವಿಶೇಷ‌ ಭಾಷಣ

ನವದೆಹಲಿ : ಇಂದು ದೇಶದಾದ್ಯಂತ ರಾಷ್ಟ್ರೀಯ ವೈದ್ಯರ‌ ದಿನ.‌ ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯರ ಸಂಘ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ‌ ಮಾಡಲಿದ್ದಾರೆ‌

ಖ್ಯಾತ ವೈದ್ಯ ಹಾಗೂ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬಿಧನ್‌ ಚಂದ್ರ ರಾಯ್‌ ಅವರ ಜನ್ಮದಿನಾಚರಣೆ ಯನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಧಾನಿ‌ ಮೋದಿ ಅವರು ವೈದ್ಯರ ಸೇವೆಯ ಗುಣಗಾನ ಮಾಡಲಿದ್ದಾರೆ.

ಕೊರೊನಾ ಸಂಮಷ್ಟದ ಕಾಲದಲ್ಲಿಯೂ ಜನರ ಸೇವೆಗೆ ತಮ್ಮ ಪ್ರಾಣ ವನ್ನೇ ಮುಡಿಪಿಟ್ಟ ವೈದ್ಯರಿಗೆ ವಿಶೇಷ‌ ಶ್ರದ್ದಾಂಜಲಿ ಸಮರ್ಪಿಸಲಿದ್ದಾರೆ. ವೈದ್ಯರ ‌ದಿನಾಚರಣೆಯ‌ ಹಿನ್ನೆಲೆಯಲ್ಲಿಂದು ದೇಶದಾದ್ಯಂತ ವೈದ್ಯರ ಸೇವೆಯನ್ನು ಸ್ಮರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. 

Comments are closed.