Haripriya: ಮತ್ತೊಮ್ಮೆ ಹುಟ್ಟಿ ಬಾ ಲಕ್ಕಿ….! ನಟಿ ಹರಿಪ್ರಿಯಾ ಭಾವುಕ ವಿದಾಯ ಕೋರಿದ್ದ್ಯಾರಿಗೆ ಗೊತ್ತಾ…!!

ನಟ-ನಟಿಯರಿಗೆ ಸಾಕುಪ್ರಾಣಿಗಳು ಅಂದ್ರೇ ತುಂಬ ಇಷ್ಟ.  ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಂದ ಆರಂಭಿಸಿ ಮೇಘನಾರಾಜ್ ತನಕ ಎಲ್ಲರೂ ಪ್ರಾಣಿಪ್ರಿಯರೇ.  ಈ ಸಾಲಿಗೆ ಸೇರಿರೋ ತಮ್ಮ ಮುದ್ದಿನ ನಾಯಿ ಕಳೆದುಕೊಂಡು ಕಣ್ಣೀರಿಟ್ಟಿದ್ದು, ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಭಾವುಕ ವಿದಾಯ ಕೋರಿದ್ದಾರೆ.

ಇತ್ತೀಚಿಗಷ್ಟೇ ನಟಿ ಮೇಘನಾ ರಾಜ್ ತಮ್ಮ ಬಹುಕಾಲದ ಒಡನಾಡಿ ಬ್ರೌನಿ ಕಳೆದುಕೊಂಡು ಕಣ್ಣೀರಿಟ್ಟಿದ್ದರು. ಇದೀಗ ಹರಿಪ್ರಿಯಾ ಸರದಿ. ತಮ್ಮೊಂದಿಗೆ ಬರೋಬ್ಬರಿ 8.5 ವರ್ಷಗಳ ಕಾಲ ಇದ್ದ ಸಾಕುನಾಯಿ ಲಕ್ಕಿಯನ್ನು ಕಳೆದುಕೊಂಡಿರೋ ಹರಿಪ್ರಿಯಾ ಭಾವುಕರಾಗಿದ್ದಾರೆ.

ಸದಾ ತಮ್ಮೊಂದಿಗೆ ಇರುತ್ತಿದ್ದ ಹಾಗೂ ಕುಟುಂಬದೊಂದಿಗೆ ಪ್ರವಾಸಕ್ಕೂ ಬರುತ್ತಿದ್ದ ಲಕ್ಕಿಯನ್ನು ಕಳೆದುಕೊಂಡು ಹರಿಪ್ರಿಯಾ ಕಣ್ಣೀರಿಟ್ಟಿದ್ದಾರೆ. ಹಲವಾರು ಭಾರಿ ಲಕ್ಕಿ ಜೊತೆಗಿನ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡಿದ್ದ ಹರಿಪ್ರಿಯಾ ಈ ಭಾರಿ ಭಾವುಕ ಪೋಸ್ಟ್ ಹಾಕಿದ್ದಾರೆ.

ಲಕ್ಕಿ ಒಂದು ಅದ್ಭುತವಾದ ಜೀವ. ಲಕ್ಕಿ ನಮ್ಮೊಂದಿಗೆ 8.5 ವರ್ಷ ಇದ್ದ. ನಮಗೆಲ್ಲ ಬಹಳ ಖುಷಿ ಹಾಗೂ ನೆನಪಿನಲ್ಲಿರುವಂತ ಕ್ಷಣಗಳನ್ನು ನೀಡಿ ಹೋಗಿದ್ದಾನೆ. ಅವನಿದ್ದಾಗ ನಾವೆಲ್ಲ ಸುರಕ್ಷಿತ ಎಂದು ಭಾವಿಸುತ್ತಿದ್ದೇವು. ಒಟ್ಟಿಗೆ ಆಟ,ಪ್ರವಾಸಕ್ಕೂ ಹೋಗುತ್ತಿದ್ದೇವು ಎಂದು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ ಮತ್ತೊಮ್ಮೆ ನನ್ನ ಸುತ್ತಮುತ್ತಲು ಹುಟ್ಟಿಬಾ ಎಂದಿರುವ ಹರಿಪ್ರಿಯಾ ಈ ಜನುಮದ ನೆನಪುಗಳ ಜೊತೆ ನನ್ನನ್ನು ಮಾತನಾಡಿಸು. ನಿನಗೆ ಗುಡ್ ಬೈ ಹೇಳಲು ನನಗೆ ನೋವಾಗುತ್ತದೆ ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.   ಹರಿಪ್ರಿಯಾ ದುಃಖದ ಪೋಸ್ಟ್ ಅಭಿಮಾನಿಗಳು ಸಾಂತ್ವನ ಹೇಳಿದ್ದಾರೆ.

ಸದ್ಯ ಬೆಲ್ ಬಾಟಂ -2 ರಿಲೀಸ್ ಗೆ ಸಿದ್ಧವಾಗಿದ್ದು, ಇದನ್ನು ಹೊರತುಪಡಿಸಿ ಲಗಾಮ್ ಹಾಗೂ ದಿಗಂತ ಜೊತೆಗೊಂದು ಸಿನಿಮಾದಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ.

Comments are closed.