ಮೊದಲ ಬಾರಿಗೆ ಮೂರು ಸೋಂಕು ಪರೀಕ್ಷೆಗಾಗಿ ಒಂದೇ ಕಿಟ್‌ ಅಭಿವೃದ್ಧಿಪಡಿಸಿದ ಭಾರತ

ನವದೆಹಲಿ : ಇನ್ಪ್ಲುಯೆನ್ಸ ಎ, ಬಿ ಮತ್ತು ಸಾರ್ಸ್‌ಕೋವ್‌-2 ಸೋಂಕುಗಳನ್ನು ಪತ್ತೆ ಮಾಡುವ ಒಂದೇ ಕಿಟ್‌ ಅನ್ನು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್‌ ಆಫ್‌ ವೈರಾಲಜಿ (National Institute of Virology)‌ ಅಭಿವೃದ್ಧಿಪಡಿಸಿದೆ. ಆಸಕ್ತ ಕಂಪನಿಗಳು ಇವುಗಳನ್ನು ಸಮೂಹ ಮಾರುಕಟ್ಟೆಗೆ ಒಯ್ಯಬಹುದು ಎಂದು ಸಂಸ್ಥೆ ಸಲಹೆ ಮಾಡಿದೆ.

ಮಲ್ಟಿಪ್ಲೆಕ್ಸ್‌ ಸಿಂಗಲ್‌ ಟ್ಯೂಬ್‌ ರಿಯಲ್‌ ಟೈಮ್‌ ಆರ್ಟಿ ಪಿಸಿಆರ್‌ ಎಂಬ ಈ ಕಿಟ್‌ ಇನ್ಪ್ಲೂಯೆನ್ಝಾ ವಿಭಾಗದ ಮುಖ್ಯಸ್ಥರಾದ ಡಾ. ವರ್ಷಾ ಪೋದ್ದಾರ್‌ ಹೇಳಿದ್ದಾರೆ. “ಇದು ಒಂದೇ ಪರೀಕ್ಷೆಯಲ್ಲಿ ಮೂರು ಸೋಂಕುಗಳನ್ನು ಪತ್ತೆ ಮಾಡಬಹುದಾದ ಸುಲಭ, ಸಮಯ ಉಳಿತಾಯದ ಮತ್ತು ಸಮರ್ಥ ವಿಧಾನವಾಗಿದೆ. ಏಕ ಕೊಳವೆ ಸಹಜವಾಗಿಯೇ ವ್ಯಕ್ತಿಯ ಒಂದೇ ಮಾದರಿಯನ್ನು ಮೂರು ಸೋಂಕಗಳ ಪತ್ತೆಗೆ ಬ:ಳಸಿಕೊಳ್ಳುತ್ತದೆ. ಪ್ರಯೋಗಾಲಯ ತಂತ್ರಜ್ಞರು ಮಾದರಿಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : Beans For Diabetes Patients: ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡುವ ಬೀನ್ಸ್‌ ಡಯಾಬಿಟಿಸ್‌ ರೋಗಿಗಳಿಗೆ ವರದಾನ

ಇದನ್ನೂ ಓದಿ : ನಿದ್ರೆ ಬರ್ತಾ ಇಲ್ಲವೇ ? ನಿದ್ರಾಹೀನತೆಯನ್ನು ತಡೆಯಲು ಇಲ್ಲಿದೆ ಸುಲಭ ವಿಧಾನ

ಮೂರು ಸೋಂಕುಗಳ ರೋಗಲಕ್ಷಣಗಳು ಒಂದೇ ಆಗಿದ್ದು, ಫ್ಲೂ ಹೆಚ್ಚುವ ಸೀಸನ್ಸ್‌ನಲ್ಲಿ ರೋಗಪತ್ತೆಗೆ ಇದು ಅತ್ಯುಪಯುಕ್ತವಾಗಲಿದೆ. ಭಾರೆತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅಂಗಸಂಸ್ಥೆಯಾಗಿರುವ ಎನ್‌ಐಬಿ, ದೊಡ್ಡ ಪ್ರಮಾಣದಲ್ಲಿ ಈ ಕಿಟ್‌ಗಳನ್ನು ಉತ್ಪಾದಿಸಿ ಮಾರಾಟ ಮಾಡಲು ಕಂಪೆನಿಗಳಿಂದ ಆಸಕ್ತಿಯ ಅಭಿವ್ಯಕ್ತಿಯನ್ನು ಅಹ್ವಾನಿಸಿದೆ.

National Institute of Virology: India developed a single kit for testing three infections for the first time

Comments are closed.