Navjot Singh Sidhu : 1988ರ ರೋಡ್ ರೇಜ್ ಸಾವಿನ ಪ್ರಕರಣದಲ್ಲಿ ಒಂದು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಟಿಯಾಲ ಕೇಂದ್ರ ಕಾರಾಗೃಹದಲ್ಲಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಟಿಯಾಲಾ ಕೇಂದ್ರ ಕಾರಾಗೃಹದಿಂದ ಭಾರೀ ಭದ್ರತೆಯೊಂದಿಗೆ ನವಜೋತ್ ಸಿಂಗ್ ಸಿಧುರನ್ನು ಪಟಿಯಾಲದ ರಾಜೀಂದ್ರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ನವಜೋತ್ ಸಿಂಗ್ ಸಿಧು ಜೈಲಿನಲ್ಲಿ ತಮಗೆ ವಿಶೇಷ ಆಹಾರ ಕ್ರಮ ಬೇಕೆಂದು ಆಗ್ರಹಿಸಿದ್ದಾರೆಂದು ಸಿಧು ಪರ ವಕೀಲ ಎಚ್ಪಿಎಸ್ ವರ್ಮಾ ಹೇಳಿದ್ದಾರೆ. ವೈದ್ಯರ ಮಂಡಳಿಯು ಆಸ್ಪತ್ರೆಯಲ್ಲಿ ನವಜೋತ್ ಸಿಂಗ್ ಸಿಧುರ ವಿವರವಾದ ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ .
ವೈದ್ಯಕೀಯ ಪರೀಕ್ಷೆಯ ಬಳಿಕ ವೈದ್ಯರ ಮಂಡಳಿಯು ಯಾವ ವಿಶೇಷ ಆಹಾರದ ಅಗತ್ಯವಿದೆ ಎಂಬುದನ್ನು ತಿಳಿಸಲಿದೆ. ಈ ವರದಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ವಕೀಲ ವರ್ಮಾ ಮಾಹಿತಿ ನೀಡಿದರು.
ವಕೀಲರು ನೀಡಿರುವ ಮಾಹಿತಿಯ ಪ್ರಕಾರ ನವಜೋತ್ ಸಿಂಗ್ ಸಿಧು ಸಕ್ಕರೆ, ಮೈದಾ ಸೇರಿದಂತೆ ಕೆಲವೊಂದು ಪದಾರ್ಥಗಳನ್ನು ಸೇವನೆ ಮಾಡುವಂತಿಲ್ಲ. ಸಿಧು ಪಪ್ಪಾಯಿ, ಪೇರಲೆ, ಡಬಲ್ ಟೋನ್ಡ್ ಹಾಲು ಮತ್ತು ಫೈಬರ್ ಹಾಗೂ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರದ ಆಹಾರ ಪದಾರ್ಥಗಳನ್ನು ಸೇವಿಸಬಹುದು ಎನ್ನಲಾಗಿದೆ.
ವೈದ್ಯರ ಮಂಡಳಿಯು ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
58 ವರ್ಷದ ನವಜೋತ್ ಸಿಂಗ್ ಸಿಧು ಎಂಬಾಲಿಸಮ್ನಂತಹ ವೈದ್ಯಕೀಯ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ. ಅಲ್ಲದೇ ಯಕೃತ್ತು ಸಂಬಂಧಿ ಕಾಯಿಲೆ ಕೂಡ ಇವರಿಗಿದೆ. 2015ರಲ್ಲಿ ಸಿಧು ದೆಹಲಿಯ ಆಸ್ಪತ್ರೆಯಲ್ಲಿ ರಕ್ತನಾಳದ ಥ್ರಂಬೋಸಿಸ್ಗಾಗಿ ಚಿಕಿತ್ಸೆ ಪಡೆದಿದ್ದರು.
ಮೇ 20 ರಂದು ಪಂಜಾಬ್ ಮಾಜಿ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಶರಣಾದ ನಂತರ ಪಟಿಯಾಲ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. 1988 ರ ರೋಡ್ ರೇಜ್ ಸಾವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ : KL Rahul Captain : IND vs SA ENG ಸರಣಿಗೆ ಟೀಂ ಇಂಡಿಯಾ ಆಯ್ಕೆ : T20 ಸರಣಿಗೆ ಕನ್ನಡಿಗ ರಾಹುಲ್ ನಾಯಕ
Navjot Singh Sidhu brought to Rajindra hospital in Patiala for medical examination