Harshal Patel injured : ಆರ್‌ಸಿಬಿ ತಂಡಕ್ಕೆ ಬಿಗ್‌ ಶಾಕ್‌ : ಖ್ಯಾತ ಬೌಲರ್‌ ಹರ್ಷಲ್‌ ಪಟೇಲ್‌ಗೆ ಗಾಯ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL 2022 )ಅಂತಿಮ ಹಂತ ತಲುಪಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಪ್ಲೇ ಆಫ್‌ ಪ್ರವೇಶಿಸಿದೆ. ಮೇ 25 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣೆಸಾಡಲಿದೆ. ಆದರೆ ಈ ನಡುವಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌ ಹೊರಬಿದ್ದಿದ್ದು, ಆರ್‌ಸಿಬಿ ತಂಡದ ಖ್ಯಾತ ಬೌಲರ್‌ ಹರ್ಷಲ್‌ ಪಟೇಲ್‌ (Harshal Patel injured) ಗಾಯಗೊಂಡಿದ್ದಾರೆ. ಹೀಗಾಗಿ ಅವರು ಎಲಿಮಿನೇಟರ್‌ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಅನ್ನೋ ಅನುಮಾನ ವ್ಯಕ್ತವಾಗಿದೆ.

31 ವರ್ಷ ವಯಸ್ಸಿನ ಹರ್ಷಲ್‌ ಪಟೇಲ್ ಫೀಲ್ಡಿಂಗ್ ಮಾಡುವ ವೇಳೆಯಲ್ಲಿ ಅವರ ಬಲಗೈ ಗಾಯ ಮಾಡಿಕೊಂಡಿದ್ದರು. ಇದರಿಂದಾಗಿ ತೀವ್ರ ರಕ್ತಶ್ರಾವವಾಗಿತ್ತು. ಹೀಗಾಗಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಫಿಸಿಯೋ ತ್ವರಿತವಾಗಿ ಪರಿಶೀಲನೆ ನಡೆಸಿದ್ದಾರೆ. ಗಾಯಕ್ಕೆ ಹೊಲಿಗೆಯನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಹರ್ಷಲ್‌ ಪಟೇಲ್‌ IPL 2021 ರಲ್ಲಿ ಪರ್ಪಲ್ ಕ್ಯಾಪ್ ವಿಜೇತರಾಗಿದ್ದರು. 15 ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೇ ಅವರು ಈ ಋತುವಿನಲ್ಲಿ 13 ಪಂದ್ಯಗಳಿಂದ ಒಟ್ಟು 18 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಅವರು ಇದೀಗ ಐಪಿಎಲ್ ವಿಕೆಟ್‌ಗಳ ಶತಕದ ಹೊಸ್ತಿಲಲ್ಲಿದ್ದಾರೆ. ವಿಕೆಟ್‌ಗಳಿಗಿಂತ ಹೆಚ್ಚು, ಅವರು ತಮ್ಮ ಸ್ಪೆಲ್‌ಗಳಲ್ಲಿ (7.68) ಅತ್ಯಂತ ಮಿತವ್ಯಯವನ್ನು ಹೊಂದಿದ್ದಾರೆ. ಇದೀಗ 100 ಐಪಿಎಲ್ ವಿಕೆಟ್‌ಗಳನ್ನು ಪಡೆಯಲು ಕೇವಲ ನಾಲ್ಕು ವಿಕೆಟ್‌ ಅಗತ್ಯವಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಪಂದ್ಯಾವಳಿಯಲ್ಲಿ ಆರಂಭದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೂಡ, ನಂತರದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಆದ್ರೆ ಅಂತಿಮವಾಗಿ ಮುಂಬೈ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಅಂತಿಮ ಲೀಗ್‌ ಪಂದ್ಯದಲ್ಲಿ ಸೋಲಿಸುವ ಮೂಲಕ ಬೆಂಗಳೂರು ತಂಡ ಪ್ಲೇ ಆಫ್‌ ಪ್ರವೇಶ ಮಾಡುವಂತೆ ಮಾಡಿದೆ. ಲಕ್ನೋ ವಿರುದ್ದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಕಾಣುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : IPL Mumbai Indians ಕ್ರೀಡಾ ತಪಸ್ವಿ ಕಾರ್ತೀಕೇಯ

ಇದನ್ನೂ ಓದಿ : IND vs SA ENG ಸರಣಿಗೆ ಟೀಂ ಇಂಡಿಯಾ ಆಯ್ಕೆ : T20 ಸರಣಿಗೆ ಕನ್ನಡಿಗ ರಾಹುಲ್‌ ನಾಯಕ

RCB top player Harshal Patel injured, will he play or not in Eliminator

Comments are closed.