ಗಂಗಾನದಿಯಲ್ಲಿ ಮರದ ಪೆಟ್ಟಿಯಲ್ಲಿ ಮಗುವನ್ನು ತೇಲಿಬಿಟ್ಟ ಪೋಷಕರು

ಗಾಜಿಪುರ : ಮಗು ಬೇಕು ಅಂತಾ ಜನರು ನಾನಾ ಹರಿಕೆಗಳನ್ನು ಹೊತ್ತುಕೊಳ್ತಾರೆ, ಕಂಡ ಕಂಡ ದೇವರಲ್ಲಿ ಪ್ರಾರ್ಥನೆ ಮಾಡ್ತಾರೆ. ಆದ್ರೆ ಇಲ್ಲೊಬ್ಬರು ದಂಪತಿ ತನ್ನ 22 ದಿನದ ಮಗುವನ್ನು ನದಿಯಲ್ಲಿ ತೇಲಿಬಿಟ್ಟ ಘಟನೆ ಗಂಗಾ ನದಿಯಲ್ಲಿ ನಡೆದಿದೆ.

ಗಾಜಿಪುರದ ದಾದ್ರಿ ಘಾಟ್‌ನಲ್ಲಿ ನಾವಿಕನೋರ್ವ ಎಂದಿನಂತೆ ತನ್ನ ದೋಣಿಯ ಮೂಲಕ ಗಂಗಾ ನದಿ ಯಲ್ಲಿ ಸಾಗುತ್ತಿದ್ದ. ಈ ವೇಳೆಯಲ್ಲಿ ಮರದ  ಪೆಟ್ಟಿಗೆ ಯೊಂದು ತೇಲಿಬಂದಿತ್ತು. ಪೆಟ್ಟಿಗೆ ತೆಗೆದು ನೋಡಿದಾಗ ಅದರಲ್ಲಿ ದುಪ್ಪಟ್ಟಾದಲ್ಲಿ ಸುತ್ತಿದ ರೀತಿಯಲ್ಲಿ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ.

ಮರದ‌ ಪೆಟ್ಟಿಗೆಯಲ್ಲಿ ಮಗುವಿ‌ನ ಜೊತೆಗೆ ದೇವರ ಪೋಟೊ, ಪೂಜಾ ಸಾಮಗ್ರಿ, ಮಗುವಿನ ಕುಂಡಲಿ ಪತ್ತೆಯಾಗಿದೆ. ಜಾತಕದಲ್ಲಿ ಮಗುವಿನ ಹೆಸರು ಗಂಗಾ ಎಂದು ಬರೆಯಲಾಗಿದ್ದು, ಸುಮಾರು 22 ದಿನಗಳ ಮಗು ಎಂದು ತಿಳಿದುಬಂದಿದೆ.

ಮಗುವನ್ನು ರಕ್ಷಿಸಿದ ನಾವಿಕನಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಧನ್ಯವಾದ ಸಲ್ಲಿಸಿದ್ದಾರೆ. ಮಾತ್ರವಲ್ಲ ಮಗುವಿನ ಸಂಪೂರ್ಣ ಹೊಣೆಯನ್ನು ಉತ್ತರ ಪ್ರದೇಶ ಸರಕಾರ ವಹಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

Comments are closed.