ನವದೆಹಲಿ : ಕೊರೊನಾ ಮಹಾಮಾರಿಯ ಅಬ್ಬರದ ನಡುವಲ್ಲೇ ರಾಷ್ಟ್ರರಾಜಧಾನಿಯಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದ್ದು, ದೆಹಲಿ ಸೇರಿದಂತೆ ಹರಿಯಾಣದ ರೋಹ್ಟಕ್ ನಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪನದಿಂದಾಗಿ ದೆಹಲಿಯ ಜನರು ಭಯಭೀತರಾಗಿದ್ದಾರೆ.

ಕಳೆದೊಂದುವರೆ ತಿಂಗಳಲ್ಲಿ ದೆಹಲಿಯಲ್ಲಿ ಸಂಭವಿಸುತ್ತಿರುವ ಇದು 4ನೇ ಭೂಕಂಪನದ ಅನುಭವ. ಈ ಹಿಂದೆ ಮೇ 12ರಂದು ಮೊದಲ ಬಾರಿಗೆ ಭೂಕಂಪನ ಸಂಭವಿಸಿತ್ತು. ನಂತರ ಮೇ 15ರಂದು ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 2.2 ತೀವ್ರತೆ ದಾಖಲಾಗಿತ್ತು. ಆದ್ರೀಗ ಅತೀ ಹೆಚ್ಚಿನ ಪ್ರಮಾಣದಲ್ಲಿ ಭೂಕಂಪನ ಸಂಭವಿಸಿದೆ ಎನ್ನಲಾಗುತ್ತಿದೆ.