ಸೋಮವಾರ, ಜೂನ್ 16, 2025
HomeNationalNitish Kumar : ಮತ್ತೊಮ್ಮೆ ಬಿಹಾರ ಸಿಎಂ ಆಗಿ ನಿತೀಶ್​ ಕುಮಾರ್​ ಪ್ರಮಾಣ ವಚನ : ಪ್ರಧಾನಿ...

Nitish Kumar : ಮತ್ತೊಮ್ಮೆ ಬಿಹಾರ ಸಿಎಂ ಆಗಿ ನಿತೀಶ್​ ಕುಮಾರ್​ ಪ್ರಮಾಣ ವಚನ : ಪ್ರಧಾನಿ ಮೋದಿಗೆ ಎಚ್ಚರಿಕೆ ಸಂದೇಶ

- Advertisement -

ಬಿಹಾರ : Nitish Kumar :ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೆಎನ್​ಯು ನಾಯಕ ನಿತೀಶ್​ ಕುಮಾರ್​ ಪ್ರಧಾನಿ ಮೋದಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸಿದ್ದಾರೆ. ಬಿಜೆಪಿಯ ವಿರುದ್ಧ ಮುಸುಕಿನ ಗುದ್ದಾಟ ನಡೆಸುತ್ತಿರುವ ಜೆಎನ್​ಯು ನಾಯಕ ನಿತೀಶ್​ ಕುಮಾರ್​​ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಗಂಭೀರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ವಾರ್ನಿಂಗ್​ ನೀಡಿದ್ದಾರೆ.

2014ರಲ್ಲಿ ಅಧಿಕಾರಕ್ಕೆ ಬಂದವರು 2024ರಲ್ಲಿಯೂ ಗೆಲ್ಲುತ್ತಾರಾ..? 2024ರ ಚುನಾವಣೆ ವೇಳೆಗೆ ವಿರೋಧ ಪಕ್ಷದವರೆಲ್ಲರೂ ಒಂದಾಗಬೇಕೆಂದು ನಾನು ಬಯಸುತ್ತೇನೆಂದು ನಿತೀಶ್​ ಕುಮಾರ್​ ಹೇಳಿದ್ದಾರೆ. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ತಾವು ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ ಎಂದು ನಿತೀಶ್​ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.


ಇದಕ್ಕೂ ಮುನ್ನ ಪಾಟ್ನಾದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಹಾರ ರಾಜ್ಯಪಾಲ ಫಾಗು ಚೌಹಾಣ್​ ನಿತೀಶ್​ ಕುಮಾರ್​​ರಿಗೆ ಪ್ರಮಾಣ ವಚನ ಬೋಧಿಸಿದರು. ಆರ್​ಜೆಡಿಯ ತೇಜಸ್ವಿ ಯಾದವರ್​ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ .


77 ಶಾಸಕರೊಂದಿಗೆ ವಿಧಾನಸಭೆಯ ಎರಡನೇ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯ ನಾಯಕರು ಪ್ರಮಾಣ ವಚನ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ಇದಕ್ಕೂ ಮುನ್ನ ಬಿಜೆಪಿಯು ಹಿರಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿ ತಮ್ಮೊಂದಿಗೆ ಮೈತ್ರಿ ಮುರಿದುಕೊಂಡ ಪಕ್ಷವು ನಮಗೆ ಯಾವುದೇ ಆಹ್ವಾನ ನೀಡಿಲ್ಲ ಎಂದು ಹೇಳಿದ್ದರು .


ನಿತೀಶ್​ ಕುಮಾರ್​ ಬಿಜೆಪಿಯೊಂದಿನ ಮೈತ್ರಿಯನ್ನು ಮಂಗಳವಾರ ಕೊನೆಗೊಳಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೆಲವೇ ಗಂಟೆಗಳ ನಂತರ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ಜೆಡಿಯು ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಆರ್​ಜೆಡಿ, ಕಾಂಗ್ರೆಸ್, ಹಿಂದೂಸ್ತಾನಿ ಅವಾಮ್​ ಮೋರ್ಚಾ, ಎಡಪಕ್ಷಗಳು ಹಾಗೂ ಒಂದು ಸ್ವತಂತ್ರ ಪಕ್ಷ ಸೇರಿದಂತೆ ಏಳು ಪಕ್ಷಗಳಿಗೆ ಸೇರಿದ 164 ಶಾಸಕರ ಪಟ್ಟಿಯನ್ನು ನಿತೀಶ್​ರಿಗೆ ಬೆಂಬಲಿಸಿದ್ದಾರೆ.

ಇದನ್ನು ಓದಿ : Long Sword : ಕೈಯಲ್ಲಿ ತಲವಾರ್​ ಹಿಡಿದು ಗ್ರಾಮದ ಸುತ್ತೆಲ್ಲ ಓಡಾಡಿದ ಯುವಕ : ಸುಳ್ಯ ತಾಲೂಕಿನಲ್ಲಿ ವಿಚಿತ್ರ ಘಟನೆ

ಇದನ್ನೂ ಓದಿ : Mukesh Ambani Ravi Shastri : ರವಿಶಾಸ್ತ್ರಿ ಜೊತೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡ ಮುಕೇಶ್ ಅಂಬಾನಿ, ಏನಿದರ ಗುಟ್ಟು?

Nitish Kumar sworn in as Bihar CM for eighth time, asks BJP to ‘worry’ about 2024 polls

RELATED ARTICLES

Most Popular