Shashi Tharoor : ‘ಓಮಿಕ್ರಾನ್​​’ಗಿಂತಲೂ ಅಪಾಯಕಾರಿ ವೈರಸ್​ ‘ ಓ ಮಿತ್ರೋ’ : ಪ್ರಧಾನಿ ವಿರುದ್ಧ ಶಶಿ ತರೂರ್​ ವ್ಯಂಗ್ಯ

Shashi Tharoor : ಕಾಂಗ್ರೆಸ್​ ಹಿರಿಯ ನಾಯಕ ಶಶಿ ತರೂರ್​​ ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಬಳಕೆ ಮಾಡುವ ಮಿತ್ರೋ ಎಂಬ ಪದದ ಬಗ್ಗೆ ಲೇವಡಿ ಮಾಡಿದ್ದಾರೆ. ಓ ಮಿತ್ರೋ ಎಂಬುದು ಓಮಿಕ್ರಾನ್​ಗಿಂತಲೂ ಹೆಚ್ಚು ಅಪಯಾಕರಿ ಎಂದು ಶಶಿ ತರೂರ್​ ಕುಟುಕಿದ್ದಾರೆ.


ಓಮಿಕ್ರಾನ್​ ರೂಪಾಂತರಿಗಿಂತಲೂ ಹೆಚ್ಚು ಅಪಾಯಕಾರಿದದ್ದು ಈ ‘ ಓ ಮಿತ್ರೋ’ ಎಂಬ ಪದವಾಗಿದೆ. ದ್ವೇಷ, ಧರ್ಮಾಂಧತೆಯ ಪ್ರಚಾರ, ಸಂವಿಧಾನದ ಮೇಲಿನ ಕಪಟ ದಾಳಿ ಇವೆಲ್ಲವೂ ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರೋದನ್ನು ನಾವು ಪ್ರತಿದಿನ ಕಾಣುತ್ತಿದ್ದೇವೆ . ಈ ವೈರಸ್​ಗೆ ಯಾವುದೇ ಸೌಮ್ಯ ರೂಪಾಂತರಗಳು ಇಲ್ಲ ಎಂದು ಶಶಿ ತರೂರ್​ ಟ್ವೀಟ್​ ಮಾಡಿದ್ದಾರೆ.


ಸಂಸದ ಶಶಿ ತರೂರ್​ ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರಿಗೆ ಟಾಂಗ್​ ನೀಡುತ್ತಲೇ ಇದ್ದಾರೆ. ಜನವರಿ 29ರಂದು ಯೋಗಿ ಆದಿತ್ಯನಾಥ್​ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದ ತಿರುವನಂತಪುರಂ ಸಂಸದ ಶಶಿ ತರೂರ್​ ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಅವರು ದೇಶಕ್ಕೆ ಎಷ್ಟು ಹಾನಿ ಮಾಡಿದ್ದಾರೆ ಎಂಬುದು ತಿಳಿದಿಲ್ಲ . ಈ ದೇಶವನ್ನು ಸ್ಮಶಾನವನ್ನಾಗಿ ಬದಲಾಯಿಸಲಾಗಿದೆ ಎಂದು ಶಶಿ ತರೂರ್​ ಕುಟುಕಿದ್ದರು.

ಇದಕ್ಕೂ ಮುನ್ನ ಅಂದರೆ ಜನವರಿ 26ರಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಶಶಿ ತರೂರ್​ ಕಾಂಗ್ರೆಸ್​ ನಾಯಕರಿಂದ ಕೂಡಿದ ಪಕ್ಷವೇ ಬಿಜೆಪಿ ಎಂದು ವ್ಯಂಗ್ಯವಾಡಿದ್ದರು.
ಕಾಂಗ್ರೆಸ್​ ನಾಯಕರಿಂದ ಕೂಡಿದ ಬಿಜೆಪಿ ಎಂಬ ಪದವನ್ನು ಶಶಿ ತರೂರ್​ ಬಳಕೆ ಮಾಡಿದ್ದರು. ಪ್ರಧಾನಿ ಮೋದಿಯ ಕಾಂಗ್ರೆಸ್​ ಮುಕ್ತ ಭಾರತ ಎಂಬ ಘೋಷಣೆಯನ್ನು ಟೀಕಿಸುತ್ತಾ ಶಶಿ ತರೂರ್​ ಈ ಪದ ಬಳಕೆ ಮಾಡಿದ್ದರು .

‘O Mitron’ much more dangerous than Omicron: Shashi Tharoor

ಇದನ್ನು ಓದಿ : Gungun Upadhyay : ಹೋಟೆಲ್‌ನ 6ನೇ ಮಹಡಿಯಿಂದ ಜಿಗಿದು ಖ್ಯಾತ ಮಾಡೆಲ್‌ ಗುಂಗುನ್‌ ಉಪಾಧ್ಯಾಯ ಆತ್ಮಹತ್ಯೆ ಯತ್ನ

ಇದನ್ನೂ ಓದಿ : Badava Rascal : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್

Comments are closed.