ಹರಿಯಾಣ:One nation One uniform: ಪ್ರಧಾನಿ ಮೋದಿ ಅವರು ಇಂದು ಒಂದು ದೇಶ ಪೊಲೀಸರಿಗೆ ಒಂದು ಸಮವಸ್ತ್ರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದು ಕೇವಲ ನಾನು ಕೊಡುತ್ತಿರುವ ಸಲಹೆಯಷ್ಟೆ. ಅದನ್ನು ಯಾವುದೇ ರಾಜ್ಯಗಳ ಮೇಲೆ ಹೇರುವುದಿಲ್ಲ ಎಂದಿದ್ದಾರೆ.
ಹರ್ಯಾಣದಲ್ಲಿ ಆಯೋಜಿಸಲಾಗಿದ್ದ ಚಿಂತನಾ ಶಿಬಿರ ಉದ್ದೇಶಿಸಿ ವಿಡಿಯೋ ಸಂವಾದದಲ್ಲಿ ಮಾತನಾಡಿದ ಪ್ರಧಾನಿ, ರಾಜ್ಯಗಳು ಪರಸ್ಪರರಿಂದ ಕಲಿಯಬೇಕು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯ ಸ್ಫೂರ್ತಿ ಪಡೆಯಬೇಕು. ದೇಶದ ಅಭಿವೃದ್ಧಿಗಾಗಿ ಎಲ್ಲಾ ರಾಜ್ಯಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಒಂದು ರಾಷ್ಟ್ರ ಒಂದು ಸಮವಸ್ತ್ರದ ಪರಿಕಲ್ಪನೆಯನ್ನು ಅವರು ಪ್ರಸ್ತಾಪಿಸಿದರು. ದೇಶದ ಎಲ್ಲಾ ರಾಜ್ಯಗಳು ಒಂದೇ ಮಾದರಿಯ ಸಮವಸ್ತ್ರ ಧರಿಸುವಂತೆ ನಿಯಮ ಜಾರಿ ತರುವ ಸಂಬಂಧ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳೂ ಚರ್ಚಿಸಬೇಕು ಎಂದು ಪ್ರಧಾನಿ ಹೇಳಿದರು.
ಕೇಂದ್ರ ಭದ್ರತಾ ಪಡೆಗಳು, ಪೊಲೀಸ್ ಸಶಸ್ತ್ರಪಡೆಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಬೇಕೆಂದರೆ ಕೇಂದ್ರ ಹಾಗೂ ಎಲ್ಲಾ ರಾಜ್ಯಗಳು ಒಂದಾಗಬೇಕು ಎಂದರು. ಇದೇ ವೇಳೆ ಕಾನೂನು ಪರಿಪಾಲನೆ ಮಾಡುವ ನಾಗರಿಕರನ್ನು ಋಣಾತ್ಮಕ ಶಕ್ತಿಗಳಿಂದ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಒಂದೇ ಒಂದು ಸುಳ್ಳು ಸುದ್ದಿ ಇಡೀ ದೇಶವನ್ನೇ ಅಲ್ಲೋಲ ಕಲ್ಲೋಲವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಬರುವ ವಿಷಯಗಳನ್ನು ನಂಬುವ ಮೊದಲು ಯೋಚಿಸಬೇಕು ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದರು.
ಸಹಕಾರಿ ಒಕ್ಕೂಟ ಅನ್ನೋದು ಸಂವಿಧಾನದ ಭಾವನೆ ಮಾತ್ರವಲ್ಲ, ರಾಜ್ಯಗಳು, ಕೇಂದ್ರಗಳ ಹೊಣೆಯಾಗಿದೆ. ಕಾನೂನು ಸುವ್ಯವಸ್ಥೆ, ಭದ್ರತಾ ಸವಾಲುಗಳನ್ನು ಎದುರಿಸಲು ಎಲ್ಲಾ ಏಜೆನ್ಸಿಗಳ ಸಂಘಟಿತ ಕ್ರಮದ ಜೊತೆ ಕಾನೂನುಗಳನ್ನು ಪರಿಶೀಲಿಸಲು ಹಾಗೂ ಪ್ರಸ್ತುತ ಸನ್ನಿವೇಶಕ್ಕೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಗಳನ್ನು ಪ್ರಧಾನಿ ಒತ್ತಾಯಿಸಿದರು. ದಕ್ಷತೆ, ಉತ್ತಮ ಫಲಿತಾಂಶ ಹಾಗೂ ಜನರಿಗೆ ರಕ್ಷಣೆ ಒದಗಿಸಲು ಗುಪ್ತಚರ ಇಲಾಖೆ ಹಾಗೂ ಪೊಲೀಸರು ಪರಸ್ಪರ ಸಹಕರಿಸಬೇಕು ಎಂದು ಮೋದಿ ಹೇಳಿದರು.
ಇದನ್ನೂ ಓದಿ: Air Pollution: ಗೂಗಲ್ ಮ್ಯಾಪ್ಸ್ ಬಳಸಿ ನೀವು ವಾಸಿಸುವ ಪ್ರದೇಶದ ಗಾಳಿಯ ಗುಣಮಟ್ಟ ಪರೀಕ್ಷಿಸುವುದು ಹೇಗೆ ಗೊತ್ತಾ…
ಇದನ್ನೂ ಓದಿ: Robin Uthappa : ಟಿ20 ವಿಶ್ವಕಪ್‌ನಲ್ಲಿ ಮಿಂಚುತ್ತಿದ್ದಾರೆ ಕೊಡಗಿನ ವೀರ ರಾಬಿನ್ ಉತ್ತಪ್ಪ
One nation One uniform: pm modi proposes idea of one nation one uniform for police