Robin Uthappa : ಟಿ20 ವಿಶ್ವಕಪ್‌ನಲ್ಲಿ ಮಿಂಚುತ್ತಿದ್ದಾರೆ ಕೊಡಗಿನ ವೀರ ರಾಬಿನ್ ಉತ್ತಪ್ಪ

ಸಿಡ್ನಿ: (Robin Uthappa) ಕೊಡಗಿನ ವೀರ ರಾಬಿನ್ ಉತ್ತಪ್ಪ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ (T20 World Cup 2022) ಗೆದ್ದ ಭಾರತ ತಂಡದ ಸದಸ್ಯ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಮೊದಲ ಅರ್ಧಶತಕ ದಾಖಲಿಸಿದ್ದ ದಾಖಲೆವೀರ(Robin Uthappa).

15 ವರ್ಷಗಳ ಹಿಂದೆ ಎಂ.ಎಸ್ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ರಾಬಿನ್ ಉತ್ತಪ್ಪ(Robin Uthappa), ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್’ನಲ್ಲೂ ಮಿಂಚುತ್ತಿದ್ದಾರೆ. ಆದರೆ ಆಟಗಾರನಾಗಿ ಅಲ್ಲ, ಕಾಮೆಂಟೇಟರ್ ಆಗಿ.

ಅಂತಾರಾಷ್ಟ್ರೀಯ ಕ್ರಿಕೆಟ್, ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್’ಗೆ ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ್ದ ರಾಬಿನ್ ಉತ್ತಪ್ಪ, ವೃತ್ತಿಪರ ಕಾಮೆಂಟೇಟರ್ ಆಗುವತ್ತ ಗಮನ ಹರಿಸಿದ್ದಾರೆ. ಭಾರತ ತಂಡದ ಜಿಂಬಾಬ್ವೆ ಪ್ರವಾಸದ ವೇಳೆ ಆ ಸರಣಿಯಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡಿದ್ದ ರಾಬಿನ್ ಉತ್ತಪ್ಪ, ಇದೀಗ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : RPSC FSO Recruitment 2022 : RPSC ಆಯೋಗದ FSO ಹುದ್ದೆಗೆ ನೇಮಕಾತಿ ಆರಂಭ ; 200 ಹುದ್ದೆಗಳಿಗೆ ಅರ್ಜಿ ಅಹ್ವಾನ

36 ವರ್ಷದ ರಾಬಿನ್ ಉತ್ತಪ್ಪ ತಮ್ಮ ಸ್ಫೋಟಕ ಆಟಕ್ಕೆ ಹೆಸರಾಗಿದ್ದವರು. ಕ್ರಿಕೆಟ್ ಜಗತ್ತಿನಲ್ಲಿ “ದಿ ವಾಕಿಂಗ್ ಅಸಾಸಿನ್” ಎಂದೇ ಖ್ಯಾತರಾಗಿದ್ದ ಉತ್ತಪ್ಪ, 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೆಲ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್’ಗಳನ್ನಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಉತ್ತಪ್ಪ 39 ಎಸೆತಗಳಲ್ಲಿ 50 ರನ್ ಬಾರಿಸಿ ಗಮನ ಸೆಳೆದಿದ್ದರು. ಟೈನಲ್ಲಿ ಅಂತ್ಯಗೊಂಡಿದ್ದ ಆ ಪಂದ್ಯವನ್ನು ಭಾರತ ಬೌಲ್ ಔಟ್ ಮೂಲಕ ಗೆದ್ದುಕೊಂಡಿತ್ತು.

ಇದನ್ನೂ ಓದಿ : 13 year old Girl Dies Heart Attack: ಕುಂದಾಪುರ : ಓದುತ್ತಿದ್ದಾಗ 13 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು

2007ರ ಟಿ20 ವಿಶ್ವಕಪ್ ವಿಜೇತ ಆಟಗಾರ ರಾಬಿನ್ ಉತ್ತಪ್ಪ, 2009ರ ಟಿ20 ವಿಶ್ವಕಪ್’ನಲ್ಲಿ ಆಡಿದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

ಇದನ್ನೂ ಓದಿ : Air Pollution: ಗೂಗಲ್‌ ಮ್ಯಾಪ್ಸ್‌ ಬಳಸಿ ನೀವು ವಾಸಿಸುವ ಪ್ರದೇಶದ ಗಾಳಿಯ ಗುಣಮಟ್ಟ ಪರೀಕ್ಷಿಸುವುದು ಹೇಗೆ ಗೊತ್ತಾ…

ಬಲಗೈ ಬ್ಯಾಟ್ಸ್’ಮನ್ ರಾಬಿನ್ ಉತ್ತಪ್ಪ ಭಾರತ ಪರ ಒಟ್ಟು 46 ಏಕದಿನ ಪಂದ್ಯಗಳನ್ನಾಡಿದ್ದು, 6 ಅರ್ಧಶತಕಗಳ ಸಹಿತ 934 ರನ್ ಕಲೆ ಹಾಕಿದ್ದಾರೆ. ಟೀಮ್ ಇಂಡಿಯಾ ಪರ 13 ಟಿ20 ಪಂದ್ಯಗಳನ್ನೂ ಆಡಿರುವ ಉತ್ತಪ್ಪ, ಏಕೈಕ ಅರ್ಧಶತಕ ಸಹಿತ 249 ರನ್ ಗಳಿಸಿದ್ದಾರೆ.

ಐಪಿಎಲ್’ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 2014ರಲ್ಲಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಉತ್ತಪ್ಪ ಪಾತ್ರ ಮಹತ್ವದ್ದಾಗಿತ್ತು. 2021ರಲ್ಲಿ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ ಚೆನ್ನೈ ತಂಡ 4ನೇ ಬಾರಿ ಚಾಂಪಿಯನ್ ಆಗಿತ್ತು.

(Robin Uthappa) Kodagu hero Robin Uthappa is a member of the Indian team that won the inaugural T20 World Cup (T20 World Cup 2022) in 2007. Robin Uthappa is the record player who scored the first fifty for India in T20 international cricket.

Comments are closed.