Organ transplant surgery: ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ನವದೆಹಲಿ: (Organ transplant surgery) ಕೆಲವು ಸಿನಿಮಾ ತಾರೆಯರ ಸ್ಪೂರ್ತಿಯಿಂದ ರಾಜ್ಯದಲ್ಲಿ ಅಂಗಾಂಗ ದಾನಕ್ಕೆ ಜನರಿಂದ ಉತ್ತಮ ಪ್ರೇರಣೆ ಸಿಗುತ್ತಿದ್ದು, ಭಾರತದಾದ್ಯಂತ ಯಶಸ್ವಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಳವಾಗಿದೆ. ಇದೀಗ ಭಾರತದಾದ್ಯಂತ ಅಂಗಾಂಗ ದಾನ ಕಸಿ ಶಸ್ತ್ರಚಿಕಿತ್ಸೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಲಭಿಸಿದೆ.

2022 ನೇ ಸಾಲಿನಲ್ಲಿ ದೇಶದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಅಂಗಾಂಗ ಕಸಿ ನೆರವೇರಿಸಲಾಗಿದ್ದು, ಕೋವಿಡ್‌ ನಂತರದಲ್ಲಿ ಅಂಗಾಂಗ ದಾನದಲ್ಲಿ ಜನರ ಉತ್ಸಾಹ ಹೆಚ್ಚಾಗಿರುವುದು ಕಂಡುಬಂದಿದೆ. ಕಳೆದ ವರ್ಷ ಅಂಗಾಂಗ ದಾನದಲ್ಲಿ 27% ಏರಿಕೆ ಕಂಡುಬಂದಿದ್ದು,ಹಲವರಿಗೆ ಇದು ಮರುಹುಟ್ಟು ನೀಡಿದೆ.

ದೇಶದ ಪ್ರಪ್ರಥಮ ಗ್ಯಾಸ್ಟ್ರೋಎಂಟೆರೋಲಾಜಿ ಮತ್ತು ಅಂಗಾಂಗ ಮರುಜೋಡಣೆಗೆ ಸಮರ್ಪಿತವಾದ ಸರ್ಕಾರಿ ಇನ್ಸ್ಟಿಟ್ಯೂಟ್‌ ಆಫ್‌ ಗ್ಯಾಸ್ಟ್ರೋಎಂಟೆರೋಲಾಜಿ ಆಂಡ್‌ ಆರ್ಗಾನ್‌ ಟ್ರಾನ್ಸ್‌ ಪ್ಲಾಂಟ್‌ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೀವನ ಸಾರ್ಥಕತೆ ಸಂಸ್ಥೆಯ ಮೂಲಕ 151 ದೇಹಗಳನ್ನು ಸಂಗ್ರಹಿಸಿದ್ದು, 503 ರೋಗಿಗಳಿಗೆ ಸಹಾಯಕವಾಗಿದೆ.

“ಮೊದಮೊದಲು ನಮ್ಮಲ್ಲಿ ಅಂಗಾಂಗ ದಾನದ ಬಗ್ಗೆ ಹೆಚ್ಚು ತಿಳುವಳಿಕೆ ಇರಲಿಲ್ಲ. ಇದ್ದರೂ ಕೂಡ ಅಂತಮ ಸಂಸ್ಕಾರದೊಂದಷ್ಟು ವಿಧಿವಿಧಾನಗಳು ಇದಕ್ಕೆ ಅಡ್ಡಿಯಾಗುತ್ತಿದ್ದವು. ಆದರೆ ಕಾಲಕ್ರಮೇಣ ಜನರ ಮನಸ್ಥಿತಿ ಬದಲಾಗುತ್ತಿದೆ. ಅಂಗಾಂಗ ದಾನದ ಕಡೆಗೆ ಜನರು ಒಲವು ತೋರಿಸುತ್ತಿದ್ದಾರೆ.” ಎಂದು ಕೆಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದರು.

”ಅಂಗಾಂಗ ದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದಕ್ಕೆ ಆರೋಗ್ಯ ವಲಯದ ಎನ್‌ಜಿಒಗಳೂ ಕೈಜೋಡಿಸಿವೆ.ಹೀಗಿದ್ದರೂ ಕೂಡ ಬೇಡಿಕೆಗೆ ತಕ್ಕಷ್ಟು ಅಂಗಾಂಗಗಳು ಸಿಗದೇ ಅದೆಷ್ಟೋ ಜನರು ಜೀವ ಕಳೆದುಕೊಂಡಿರುವುದು ಇದೆ. ದೇಶಾದ್ಯಂತ 640 ಕ್ಕೂ ಹೆಚ್ಚು ವೈದ್ಯಕೀಯ ಆಸ್ಪತ್ರೆಗಳು ಮತ್ತು ಕಾಲೇಜುಗಳಿದ್ದರೂ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಕೈಗೊಳ್ಳುವಂತಹ ತಾಂತ್ರಿಕ ಸೌಕರ್ಯ ಮತ್ತು ತಜ್ಞರ ತಂಡವಿದೆ. ಈ ನಿಟ್ಟಿನಲ್ಲಿ ಸುಧಾರಣೆಗೆ ಒತ್ತುಕೊಡುವ ಅಗತ್ಯವಿದೆ,” ಎಂದರು.

ಇದನ್ನೂ ಓದಿ : ಬೃಹತ್ ಹವಾಮಾನ ವೈಪರಿತ್ಯವನ್ನು ಎದುರಿಸುತ್ತಿರುವ ವಿಶ್ವದ ಟಾಪ್ 100 ಪಟ್ಟಿಯಲ್ಲಿ 14 ಭಾರತೀಯ ರಾಜ್ಯಗಳು

ಇದನ್ನೂ ಓದಿ : God bless india: ನೆರವಿಗೆ ಬಂದ ಭಾರತಕ್ಕೆ ಮನದುಂಬಿ ಕೃತಜ್ಞತೆ ಸಲ್ಲಿಸಿದ ಟರ್ಕಿ: `ಆಪರೇಷನ್‌ ದೋಸ್ತ್‌’ ಗೆ ಸಿಕ್ತು ಶ್ಲಾಘನೆ

Organ transplant surgery: 2nd position for the state in organ transplant surgery

Comments are closed.