ಮಂಗಳೂರು : ಪ್ರಸಿದ್ದ ಐಸ್‌ಕ್ರೀಂ ಕಫೆ ಪಬ್ಬಾಸ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿಗೆ ಐಸ್‌ಕ್ರೀಂ ಆಫ್ ಕೊಟ್ಟಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಬಂದಲ್ಲಿ ಒಟ್ಟಾಗಿ ಕುಳಿತು ಐಸ್‌ಕ್ರೀಂ ಸವಿಯೋಣ ಎಂದು ಆಫರ್ ನೀಡಿದ್ದರು. ಅದರಂತೆಯೇ ಪಿ.ವಿ.ಸಿಂಧು ಅವರು ಕಂಚಿನ ಪದಕ ವನ್ನು ಜಯಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿ ಐಸ್‌ಕ್ರೀಂ ಸವಿಯುವ ವಿಚಾರವನ್ನು ನೆನಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಐಸ್‌ಕ್ರೀಂ ಕುರಿತು ಟ್ವೀಟ್ ಮಾಡುತ್ತಿದ್ದಂತೆಯೇ ಮಂಗಳೂರಿನ ಪಬ್ಬಾಸ್ ಕಫೆ ಟ್ವೀಟ್ ಮಾಡಿದೆ. ಆತ್ಮೀಯ ಮೋದಿಯವರೇ, ತಾವು ಪಿ.ವಿ.ಸಿಂಧೂ ಅವರಿಗೆ ನೀವು ಭರವಸೆ ಕೊಟ್ಟಿದ್ದೀರಿ, ಅದರಂತೆ ಸಿಂಧು ಪದಕ ಗೆದ್ದು ಬಂದಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿಯ ಜೊತೆಗೆ ನಿಮಗೂ ಅತ್ಯುತ್ತಮ ಐಸ್‌ಕ್ರೀಂ ಒದಗಿಸಲು ನಾವು ಉತ್ಸುಕರಾಗಿದ್ದೇವೆ ಎಂದಿದೆ.
ಪಬ್ಬಾಸ್ ಮಾಡಿರುವ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮೋದಿಜೀ ಪಬ್ಬಾಸ್ ಐಸ್‌ಕ್ರೀಂ ಸವಿಯುತ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.