Shanti Devi passes away : ಪದ್ಮಶ್ರೀ ಪುರಸ್ಕೃತೆ ಶಾಂತಿದೇವಿ ಇನ್ನಿಲ್ಲ

Shanti Devi passes away : ಒಡಿಶಾದ ಖ್ಯಾತ ಗಾಂಧಿವಾದಿ ಹಾಗೂ ಸಮಾಜ ಸೇವಕಿ ಮತ್ತು ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಓಡಿಶಾದ ರಾಯಗಢ ಜಿಲ್ಲೆಯ ಗುಣಪುರದಲ್ಲಿ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಇವರಿಗೆ 88 ವರ್ಷ ವಯಸ್ಸಾಗಿತ್ತು. ಮಾವೋವಾದಿಗಳ ಪ್ರಾಬಲ್ಯವೇ ಹೆಚ್ಚಿರುವ ರಾಯಗಢ ಜಿಲ್ಲೆಯಲ್ಲಿ ಶಾಂತಿದೇವಿ ಬಡವರ ಸೇವೆ ಮಾಡಿದ್ದಾರೆ.


ಶಾಂತಿದೇವಿ ಅವರಿಗೆ ಕೆಲ ದಿನಗಳ ಹಿಂದಷ್ಟೇ ದೇಶದ ಮೂರನೇ ಅತ್ಯುನ್ನತ ನಾಗರಿಗ ಸೇವಾ ಗೌರವವಾದ ಪ್ರದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್​​ ಬಡತನದ ಅಂಚಿನಲ್ಲಿರುವವರು, ಬುಡಕಟ್ಟು ಹೆಣ್ಣು ಮಕ್ಕಳ ಪ್ರಗತಿಗಾಗಿ ಬರೋಬ್ಬರಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಶಾಂತಿದೇವಿ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿದ್ದರು. ದೀರ್ಘಕಾಲದ ಬ್ಯಾಕ್ಟೀರಿಯಾ ಸೋಂಕಾದ ಯವ್ಸ್​​ ನಿರ್ಮೂಲನೆ ಮಾಡುವ ಕೆಲಸಕ್ಕೆ ಇವರು ಹೆಸರುವಾಸಿಯಾಗಿದ್ದರು.


1934ರ ಏಪ್ರಿಲ್​ 18ರಂದು ಜನಿಸಿದ್ದ ಶಾಂತಿ ದೇವಿ ತಮ್ಮ 17ನೇ ವಯಸ್ಸಿನಲ್ಲಿ ಡಾ. ರತನ್ ದಾಸ್​​ರನ್ನು ವಿವಾಹವಾಗಿ ಕೋರಪುತ್​ಗೆ ತೆರಳಿದ್ದರು. ಪತಿಯ ಬೆಂಬಲದೊಂದಿಗೆ ಶಾಂತಿ ದೇವಿ ಸಮಾಜ ಸುಧಾರಣಾ ಕಾರ್ಯವನ್ನು ನಡೆಸಲು ಆರಂಭಿಸಿದ್ದರು.


ಬುಡಕಟ್ಟು ಹೆಣ್ಣುಮಕ್ಕಳ ಪ್ರಗತಿಗಾಗಿ ಶ್ರಮಿಸಿದ್ದ ಶಾಂತಿದೇವಿ :
1995-96ರಲ್ಲಿ ವಿನೋಬಾ ಭಾವೆ ಅವರನ್ನು ಭೇಟಿಯಾದ ಬಳಿಕ ಅವರ ಸಿದ್ಧಾಂತಗಳಿಂದ ಪ್ರೇರಣೆ ಪಡೆದಿದ್ದ ಶಾಂತಿ ದೇವಿ ಆದಿವಾಸಿಗಳು, ನಿರ್ಗತಿಕ ಮಹಿಳೆಯರು ಹಾಗೂ ಅನಾಥ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡಲು ಆರಂಭಿಸಿದರು. ಭೂದಾನ ಚಳವಳಿಯಲ್ಲಿಯೂ ಅವರು ಭಾಗವಹಿಸಿದ್ದರು.


ರಾಯಗಡ ಜಿಲ್ಲೆಯ ಗೋಬರಪಲ್ಲಿಯಲ್ಲಿ ಆಶ್ರಮವನ್ನು ಸ್ಥಾಪಿಸುವ ಮೂಲಕ ಶಾಂತಿ ದೇವಿ ಸಾಮಾಜಿಕ ಕಾರ್ಯವನ್ನು ಪ್ರಾರಂಭಿಸಿದರು ಮತ್ತು ಬುಡಕಟ್ಟು ಹೆಣ್ಣುಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ ಶ್ರಮಿಸಿದರು. ನಂತರ, ಅವರು ಗುಣುಪುರಕ್ಕೆ ಸ್ಥಳಾಂತರಗೊಂಡರು ಮತ್ತು ಬುಡಕಟ್ಟು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು 1964 ರಲ್ಲಿ ಸೇವಾ ಸಮಾಜ ಆಶ್ರಮವನ್ನು ಸ್ಥಾಪಿಸಿದರು.


ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ನಿಧನಕ್ಕೆ ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ. ಶಾಂತಿ ದೇವಿ ಅವರು ಬಡವರು ಹಾಗೂ ಹಿಂದುಳಿದ ವರ್ಗಗಳಿಗೆ ಬೆನ್ನೆಲುಬಾಗಿ ಇದ್ದವು. ಆರೋಗ್ಯಯುತ ಹಾಗೂ ಸ್ವಾಸ್ಥ್ಯ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ನನಗೆ ನೋವಾಗಿದೆ. ಅವರ ಕುಟುಂಬದ ಜೊತೆ ನಾವಿದ್ದೇವೆ ಎಂದು ಟ್ವೀಟಾಯಿಸಿದ್ದಾರೆ .

Padma Shri awardee Shanti Devi passes away; PM Modi, Odisha CM mourn demise

ಇದನ್ನು ಓದಿ : CM Meeting : ಕೊರೋನಾ ತಡೆಗೆ ಮಾರ್ಗಸೂಚಿ : ಸಿಎಂ ಸಭೆಗೆ ತಾಂತ್ರಿಕ ಸಮಿತಿ ಶಿಫಾರಸ್ಸುಗಳ ವಿವರ ಇಲ್ಲಿದೆ

ಇದನ್ನೂ ಓದಿ : omicron and corona : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ

Comments are closed.