Army Uniform :ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇನಾ ಸಮವಸ್ತ್ರವನ್ನು ಧರಿಸಿದ್ದು ನಿಮಗೆಲ್ಲ ನೆನಪಿರಬಹುದು. ಸೇನಾ ಸಮವಸ್ತ್ರವನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದ ಪ್ರಧಾನಿ ಮೋದಿಗೆ ಇದೀಗ ನೋಟಿಸ್ ಜಾರಿಯಾಗಿದೆ. ಉತ್ತರ ಪ್ರದೇಶದ ಜಿಲ್ಲಾ ನ್ಯಾಯಾಲಯವು ಪ್ರಧಾನ ಮಂತ್ರಿ ಕಚೇರಿಗೆ ಈ ನೋಟಿಸ್ನ್ನು ಕಳುಹಿಸಿದೆ. ಕಾಶ್ಮೀರದಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸುವ ವೇಳೆಯಲ್ಲಿ ತಾವು ಕೂಡ ಸೇನಾ ಸಮವಸ್ತ್ರವನ್ನು ಧರಿಸುವ ಮೂಲಕ ಪ್ರಧಾನಿ ಮೋದಿ ಹೈಲೈಟ್ ಆಗಿದ್ದರು.
ಭಾರತೀಯ ಕಾನೂನಿನ ಪ್ರಕಾರ ಸೇನೆಯ ಸಿಬ್ಬಂದಿಯನ್ನು ಹೊರತುಪಡಿಸಿ ಮಿಕ್ಕವರು ಸೇನಾ ಸಮವಸ್ತ್ರವನ್ನು ಧರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆಗೆ ಸೇರಿದ ಸಮವಸ್ತ್ರಗಳನ್ನು ಸಿಬ್ಬಂದಿ ಹೊರತುಪಡಿಸಿ ಮಿಕ್ಕವರು ಬಳಕೆ ಮಾಡುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಕಾನೂನನ್ನು ಉಲ್ಲಂಘನೆ ಮಾಡಿದ ಪ್ರಧಾನಿ ಮೋದಿಗೆ ಇದೀಗ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲಾ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದೆ.
ಪ್ರಯಾಗ್ರಾಜ್ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ನಳೀನ್ ಕುಮಾರ್ ಶ್ರೀ ವಾತ್ಸವ ಪ್ರಧಾನಿ ಮೋದಿ ಕಚೇರಿಗೆ ಹಾಗೂ ವಕೀಲ ರಾಕೇಶ್ನಾಥ್ ಪಾಂಡೆಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪಾಂಡೆ ಕಳೆದ ಡಿಸೆಂಬರ್ನಲ್ಲಿಯೇ ಕೋರ್ಟ್ಗೆ ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿರುವ ಬಗ್ಗೆ ಸ್ಪಷ್ಟನೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ಹರೇಂದ್ರ ನಾಥ್ ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆ ಸಾಧ್ಯವಿಲ್ಲ. ನ್ಯಾಯವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟ್ನಲ್ಲಿ ನೀವು ಈ ಅರ್ಜಿ ಸಲ್ಲಿಸಬಹುದು ಎಂದು ಹೇಳುವ ಮೂಲಕ ಅರ್ಜಿಯನ್ನು ತಿರಸ್ಕರಿಸಿದ್ದರು. ಇದಾದ ಬಳಿಕ ಪಾಂಡೆ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಆಲಿಸಿದ ಜಿಲ್ಲಾ ನ್ಯಾಯಾಲಯವು ಪಿಎಂಓಗೆ ನೋಟಿಸ್ ಕಳುಹಿಸಿದ್ದು ಮುಂದಿನ ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿದೆ.
PM Modi in Indian Army Uniform is Punishable Offence, UP Court Told; Notice Sent to PMO
ಇದನ್ನು ಓದಿ : Chinese Soldiers : ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ತನಿಖಾ ವರದಿಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ
ಇದನ್ನೂ ಓದಿ : Rahul Gandhi hits out at Modi govt :‘ಭಾರತವನ್ನು ಸಾಮ್ರಾಜ್ಯದಂತೆ ಆಳಲು ಸಾಧ್ಯವಿಲ್ಲ’ : ಮೋದಿ ಸರ್ಕಾರಕ್ಕೆ ರಾಹುಲ್ ಟಾಂಗ್