ಮಂಗಳವಾರ, ಏಪ್ರಿಲ್ 29, 2025
HomeNationalModi tops most popular : ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ...

Modi tops most popular : ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಪ್ರಧಾನಿ ಮೋದಿ

- Advertisement -

Modi tops most popular : ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಗ್ರಸ್ಥಾನವನ್ನು ಗಳಿಸಿದ್ದಾರೆ; ಮಾರ್ನಿಂಗ್​ ಕನ್ಸಲ್ಟ್ಸ್​ ನಡೆಸಿರುವ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಶೇಕಡಾ 75ರಷ್ಟು ಅನುಮೋದನೆಗಳನ್ನು ಗಳಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಬಳಿಕ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್​ ಮ್ಯಾನುಯೆಲ್​​ ಲೋಪೆಜ್​ ಒಬ್ರಡಾರ್​ ಹಾಗೂ ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ ತಲಾ 63 ಹಾಗೂ 54 ಪ್ರತಿಶತ ರೇಟಿಂಗ್​ ಪಡೆಯುವ ಮೂಲಕ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.


22 ವಿಶ್ವ ನಾಯಕರನ್ನು ಒಳಗೊಂಡಿರುವ ಪಟ್ಟಿ ಇದಾಗಿದ್ದು 41 ಪ್ರತಿಶತ ರೇಟಿಂಗ್​ಗಳನ್ನು ಪಡೆಯುವ ಮೂಲಕ ಅಮೆರಿಕ ಅಧ್ಯಕ್ಷ ಜೋ ಬಿಡೆನ್​​​ ಐದನೇ ಸ್ಥಾನದಲ್ಲಿದ್ದಾರೆ. ಮಾರ್ನಿಂಗ್​ ಕನ್ಸಲ್ಟ್​ ಪಾಲಿಟಿಕಲ್​ ಇಂಟೆಲಿಜೆನ್ಸ್​ ಸಮೀಕ್ಷೆಯ ಪ್ರಕಾರ ಜೋ ಬಿಡೆನ್​ ಬಳಿಕ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೊ ಶೇ.39 ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಶೇ.38 ರೇಟಿಂಗ್​ ಮೂಲಕ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.

ಇದು ಪ್ರಸ್ತುತ ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸರ್ಕಾರದ ನಾಯಕರು ಮತ್ತು ದೇಶದ ಪಥಗಳ ಅನುಮೋದನೆ ರೇಟಿಂಗ್‌ಗಳನ್ನು ಟ್ರ್ಯಾಕ್ ಮಾಡುತ್ತಿದೆ.


ಇದಕ್ಕೂ ಮುನ್ನ 2022ರ ಜನವರಿ ಹಾಗೂ 2021ರ ನವೆಂಬರ್​ ತಿಂಗಳಲ್ಲಿಯೂ ಪ್ರಧಾನಿ ಮೋದಿ ವಿಶ್ವದ ಅತ್ಯಂತ ಜನಪ್ರಿಯ ವಿಶ್ವ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದ್ದರು.
ಈ ವೇದಿಕೆಯಲ್ಲಿ ಚುನಾವಣೆಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಮತದಾನದ ಸಮಸ್ಯೆಗಳ ಕುರಿತು ನೈಜ ಮತದಾನ ಡೇಟಾವನ್ನು ಒದಗಿಸುತ್ತದೆ. ಇಂತಹ ಸಮೀಕ್ಷೆಗಳನ್ನು ನಡೆಸಲೆಂದೇ ಮಾರ್ನಿಂಗ್​ ಕನ್ಸಲ್ಟ್​ ಪ್ರತಿದಿನ 20 ಸಾವಿರಕ್ಕೂಅಧಿಕ ಜಾಗತಿಕ ಸಂದರ್ಶನಗಳನ್ನು ನಡೆಸುತ್ತದೆ.

ಇದನ್ನು ಓದಿ : DK Shivakumar : ಮತ್ತೊಮ್ಮೆ ಸಿಎಂ ಸ್ಥಾನದ ಅಭಿಲಾಷೆ ಹೊರಹಾಕಿದ ಡಿಕೆಶಿ : ಒಕ್ಕಲಿಗರ ಬಳಿ ಆಶೀರ್ವಾದ ಬೇಡಿದ ಕನಕಪುರ ಬಂಡೆ

ಇದನ್ನೂ ಓದಿ : bs yeddiyurappa : ಸಂಸದೀಯ ಮಂಡಳಿ ಆಯ್ಕೆ ಬಳಿಕ ಮೊದಲ ಬಾರಿಗೆ ದೆಹಲಿಗೆ ಹಾರಿದ ಬಿಎಸ್​ವೈ : ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಸುಳಿವು

PM Modi tops most popular world leaders list with 75% rating: Survey

RELATED ARTICLES

Most Popular