56inch Modi Ji Thali : ಮೋದಿ ಬರ್ತಡೇಗೆ ಬನ್ನಿ: ಊಟ ಮಾಡಿ 8.5 ಲಕ್ಷ ಬಹುಮಾನ ಗೆಲ್ಲಿ….!

ನವದೆಹಲಿ : ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ (PM Narendra Modi Birthday 2022) ಸಂಭ್ರಮ ಮನೆಮಾಡಿದೆ. ಬಿಜೆಪಿ ನಾಯಕರೂ ಸೇರಿದಂತೆ ಮೋದಿ ಅಭಿಮಾನಿಗಳು ವಿಭಿನ್ನವಾಗಿ, ವಿಶಿಷ್ಠವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ. ಈ ಮಧ್ಯೆ ಮೋದಿ ಅಭಿಮಾನಿ ಹೊಟೇಲ್ ವೊಂದು ಮೋದಿ ಹುಟ್ಟುಹಬ್ಬಕ್ಕೆ ವಿಶೇಷ ಥಾಲಿ ( ’56inch Modi Ji’ Thali ) ಸಿದ್ಧಪಡಿಸಿದ್ದು, ಮುಂದಿನ ಹತ್ತು ದಿನಗಳ ಕಾಲ ಮೋದಿ ಅಭಿಮಾನಿಗಳಿಗೆ ಈ ವಿಶೇಷ ಊಟ ಸವಿಯುವ ಅವಕಾಶ ಸಿಗಲಿದೆ.

ನವದೆಹಲಿಯ ಆರ್ಡರ್ (ARDOR 2.1) ಎಂಬ ಮೋದಿ ಅಭಿಮಾನಿ ರೆಸ್ಟೋರೆಂಟ್ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಕ್ಕಾಗಿ ಬರೋಬ್ಬರಿ 56 ಇಂಚ್ ಮೋದಿ ಥಾಲಿ ಸಿದ್ಧಪಡಿಸಿದೆ. ಮಾತ್ರವಲ್ಲ ಈ ಥಾಲಿಯನ್ನು ನಿಗದಿತ ಸಮಯ ಮಿತಿಯೊಳಗೆ ತಿಂದು ಮುಗಿಸಿದವರಿಗೆ ಬರೋಬ್ಬರಿ 8.5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ವಿಶೇಷ ಅಂದ್ರೇ ಈ ಐವತ್ತಾರು ಇಂಚಿನ ಥಾಲಿ ಖಾರ,ಸಿಹಿ,ಪಲ್ಯ ಸೇರಿದಂತೆ ಒಟ್ಟು 56 ಐಟಂಗಳನ್ನು ಹೊಂದಿರಲಿದ್ದು, ಇದರಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಎರಡೂ ಥಾಲಿಗಳು ಲಭ್ಯವಿದೆ.

ಅಲ್ಲದೇ ಈ ಐವತ್ತಾರು ಇಂಚಿನ ಥಾಲಿಯಲ್ಲಿ ಊಟ ಮಾಡುವ ಸ್ಪರ್ಧೆಯನ್ನು ಗೆದ್ದವರಿಗೆ ರೆಸ್ಟೋರೆಂಟ್ ಮಾಲೀಕರು ಉಚಿತವಾಗಿ ಕೇದಾರನಾಥಕ್ಕೆ ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಿದ್ದಾರಂತೆ. ಸಪ್ಟೆಂಬರ್ 17 ರಿಂದ ಸಪ್ಟೆಂಬರ್ 26 ರವರೆಗೆ ರೆಸ್ಟೋರೆಂಟ್ ಗೆ ಭೇಟಿ ನೀಡಿ ಈ ಭೋಜನ ಸವಿಯುವವರಲ್ಲಿ ಇಬ್ಬರನ್ನು ಕೇದಾರನಾಥ ದೇಗುಲಕ್ಕೆ ಉಚಿತವಾಗಿ ಭೇಟಿ ನೀಡುವ ಅವಕಾಶವನ್ನು ಒದಗಿಸುವುದಾಗಿ ರೆಸ್ಟೋರೆಂಟ್ ಮಾಲಿಕ ಸುವೀತ್ ಕಾಲ್ರಾ ಹೇಳಿದ್ದಾರೆ.

ಭೋಜನವೂ 20 ವೈರೈಟಿ ಪಲ್ಯ, ವಿವಿಧ ರೀತಿಯ ಬ್ರೆಡ್ ಗಳು ಹಾಗೂ ದಾಲ್, ಸಬ್ಜಿ, ಜಾಮೂನ್,ಕುಲ್ಪಿಯನ್ನು ಒಳಗೊಂಡಿರುತ್ತದೆ ಎಂದು ರೆಸ್ಟೋರೆಂಟ್ ಮಾಹಿತಿ ನೀಡಿದೆ. ವೆಜ್ ಥಾಲಿಗೆ 2600 ರೂಪಾಯಿ ಹಾಗೂ ಮಾಂಸಾಹಾರ ಕ್ಕೆ 2900 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಈ ಊಟವನ್ನು ಕೇವಲ 40 ನಿಮಿಷದಲ್ಲಿ ಮುಗಿಸುವ ಗ್ರಾಹಕರಿಗೆ 8.5 ಲಕ್ಷ ರೂಪಾಯಿ ಬಹುಮಾನವೂ ಸಿಗಲಿದೆ. ಈ ರೆಸ್ಟೋರೆಂಟ್ ಈ ಹಿಂದೆಯೂ ಗ್ರಾಹಕರಿಗೆ ಇಂಥಹ ವಿಶೇಷ ಆಫರ್ ಗಳನ್ನು ನೀಡಿದ್ದ ರೆಸ್ಟೋರೆಂಟ್ ಬಾಹುಬಲಿ ಥಾಲಿ,ಪುಷ್ಪ ಥಾಲಿಗಳನ್ನು ನೀಡಿತ್ತು. ಈಗ ಮೋದಿಗಾಗಿ 56 ಇಂಚಿನ್ ಥಾಲಿ ಆಫರ್ ನೀಡಿ ಅಭಿಮಾನಿಗಳ ಗಮನ ಸೆಳೆದಿದೆ.

ಇದನ್ನೂ ಓದಿ : HDK couple :ಬಿಜೆಪಿ ಆಡಳಿತವಿದ್ದರೂ ವಿಶೇಷ ಅನುದಾನ ಪಡೆಯುವಲ್ಲಿ ಸಕ್ಸಸ್ ಆದ ಎಚ್ಡಿಕೆ ದಂಪತಿ

ಇದನ್ನೂ ಓದಿ : KS Eshwarappa :‘ನನ್ನನ್ನು ಮತ್ತೆ ಸಚಿವನನ್ನಾಗಿ ಮಾಡದ್ದಕ್ಕೆ ಪಕ್ಷದ ಮೇಲೆ ಬೇಸರವಿದೆ ’ : ಕೆ.ಎಸ್​ ಈಶ್ವರಪ್ಪ

PM Narendra Modi Birthday 2022 restaurant to launch ’56inch Modi Ji’ Thali

Comments are closed.