Super Sub Rules in Domestic Cricket: ಸೈಯದ್ ಮುಷ್ತಾಕ್ ಅಲಿ ಟಿ20ಗೆ ಸೂಪರ್ ಸಬ್ ವಾಪಸ್: ಐಪಿಎಲ್‌ಗೂ ಬರಲಿದೆ ಬಿಸಿಸಿಐನ ಹೊಸ ರೂಲ್ಸ್?


ಬೆಂಗಳೂರು: (Super Sub Rules in Domestic Cricket
)ಹಿಂದೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರೀ ಸದ್ದು ಮಾಡಿದ ‘ಸೂಪರ್ ಸಬ್’ ನಿಯಮ ದೇಶೀಯ ಟಿ20 ಟೂರ್ನಿಗೆ ಮತ್ತೆ ಬಂದಿದೆ. ಮುಂದಿನ ದಿನಗಳು ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ (Syed Mushtaq Ali T20) ‘ಸೂಪರ್ ಸಬ್’ ನಿಯಮವನ್ನು ಜಾರಿಗೆ ತಂದಿದೆ.


(Super Sub Rules in Domestic Cricket)ಫುಟ್ಬಾಲ್, ಬಾಸ್ಕೆಟ್’ಬಾಲ್, ಬೇಸ್’ಬಾಲ್ ಮತ್ತು ರಗ್ಬಿ ಕ್ರೀಡೆಗಳಲ್ಲಿ ಈಗಾಗಲೇ ಈ ‘ಸೂಪರ್ ಸಬ್’ ನಿಯಮ ಜಾರಿಯಲ್ಲಿದೆ. ಅದನ್ನು ದೇಶಿಯ ಕ್ರಿಕೆಟ್’ನಲ್ಲಿ ಪರಿಣಾಮಕಾರಿಯಾಗಿ ಬಳಸಲು ಬಿಸಿಸಿಐ (BCCI)ಮುಂದಾಗಿದೆ. ‘ಇಂಪ್ಯಾಕ್ಟ್ ಪ್ಲೇಯರ್’ ಎಂಬ ಹೆಸರಲ್ಲಿ ಈ ಸೂಪರ್ ಸಬ್ ನಿಯಮ ಜಾರಿಗೆ ಬರಲಿದೆ.

ಸೂಪರ್ ಸಬ್ ನಿಯಮ ಏನು ಹೇಳುತ್ತೆ?

  • ಟಾಸ್ ಸಂದರ್ಭದಲ್ಲಿ ತಂಡ ಪ್ಲೇಯಿಂಗ್ XI ಹಾಗೂ 4 ಮಂದಿ ಬದಲಿ ಆಟಗಾರರ ಹೆಸರು ನೀಡಬೇಕು.
  • 4 ಮಂದಿ ಬದಲಿ ಆಟಗಾರರಲ್ಲಿ ಒಬ್ಬ ಆಟಗಾರನನ್ನಷ್ಟೇ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಬಳಸಿಕೊಳ್ಳಬಹುದು.
  • 14 ಓವರ್’ಗಳ ಒಳಗೆ ಈ ‘ಇಪ್ಯಾಂಕ್ಟ್ ಪ್ಲೇಯರ್’ನನ್ನು ತಂಡ ಮೈದಾನಕ್ಕಿಳಿಸಬೇಕು.
  • ‘ಇಪ್ಯಾಂಕ್ಟ್ ಪ್ಲೇಯರ್’ಗಾಗಿ ಸ್ಥಾನ ಬಿಟ್ಟುಕೊಡುವ ಆಟಗಾರ ಮತ್ತೆ ಆ ಪಂದ್ಯದಲ್ಲಿ ಆಡುವಂತಿಲ್ಲ.

2005ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಏಕದಿನ ಕ್ರಿಕೆಟ್’ನಲ್ಲಿ ‘ಸೂಪರ್ ಸಬ್’ ನಿಯಮವನ್ನು ಜಾರಿಗೆ ತಂದಿತ್ತು. ಆದರೆ ಒಂದೇ ವರ್ಷದಲ್ಲಿ ಈ ನಿಯಮವನ್ನು ವಾಪಸ್ ಪಡೆಯಲಾಗಿತ್ತು. ಆದರೆ ಬಿಸಿಸಿಐ (BCCI) ಈ ‘ಸೂಪರ್ ಸಬ್’ ನಿಯಮವನ್ನು ಐಪಿಎಲ್’ನಲ್ಲಿ ಜಾರಿಗೆ ತರಲು ಮುಂದಾಗಿದ್ದು, ಅದಕ್ಕೆ ಪೂರ್ವಭಾವಿಯಾಗಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪ್ರಯೋಗಾತ್ಮಕವಾಗಿ ಬಳಸಲು ಮುಂದಾಗಿದೆ.

ಸೈಯದ್ ಮುಷ್ತಾಕ್ ಅಲಿ (Syed Mushtaq Ali)ಟಿ20 ಟೂರ್ನಿ ಅಕ್ಟೋಬರ್ 11ರಂದು ಆರಂಭವಾಗಲಿದ್ದು, 2 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಮಹಾರಾಷ್ಟ್ರ, ಕೇರಳ, ಮೇಘಾಲಯ, ಅರುಣಾಚಲ ಪ್ರದೇಶ, ಸರ್ವಿಸಸ್ ಹಾಗೂ ಹರ್ಯಾಣ ತಂಡಗಳ ಜೊತೆ ಗ್ರೂಪ್-‘ಸಿ’ನಲ್ಲಿ ಸ್ಥಾನ ಪಡೆದಿದೆ. ಕರ್ನಾಟಕದ ಎಲ್ಲಾ ಪಂದ್ಯಗಳು ಪಂಜಾಬ್’ನ ಮೊಹಾಲಿಯಲ್ಲಿ ನಡೆಯಲಿವೆ. ಈ ಟೂರ್ನಿಯ ನಂತರ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ನಡೆಯಲಿದ್ದು, ಪ್ರತಿಷ್ಠಿತ ರಣಜಿ ಟ್ರೋಫಿ (Ranji Trophy)ಟೂರ್ನಿ ಡಿಸೆಂಬರ್’ನಲ್ಲಿ ಆರಂಭವಾಗಲಿದೆ. (Ranji Trophy)ರಣಜಿ ಟ್ರೋಫಿಯಲ್ಲಿ (Team Karnataka)ಕರ್ನಾಟಕ ತಂಡ ಈ ವರ್ಷ ಮೂರು ಪಂದ್ಯಗಳನ್ನು ತವರು ನೆಲದಲ್ಲೇ ಆಡಲಿದೆ.

ಇದನ್ನೂ ಓದಿ : ವೆಂಕಟೇಶ್ ಅಯ್ಯರ್ ತಲೆಗೆ ಗಾಯ; ಆಸ್ಪತ್ರೆಗೆ ಹೊತ್ತೊಯ್ಯಲು ಮೈದಾನಕ್ಕೇ ನುಗ್ಗಿದ ಆ್ಯಂಬುಲೆನ್ಸ್

ಇದನ್ನೂ ಓದಿ : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

ಇದನ್ನೂ ಓದಿ : ಪಂಜಾಬ್​ ಕಿಂಗ್ಸ್​ ಮುಖ್ಯ ಕೋಚ್​ ಸ್ಥಾನದಿಂದ ಅನಿಲ್​ ಕುಂಬ್ಳೆ ಔಟ್​ : ಟ್ರೆವೋರ್​ ಬೇಲಿಸ್​ ಇನ್​

ಇದನ್ನೂ ಓದಿ : ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಔಟಾದ್ರೆ ಟಿ20ಯಲ್ಲಿ ಭಾರತ 60 ರನ್ನಿಗೆ ಆಲೌಟ್

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಕರ್ನಾಟಕ ತಂಡದ ವೇಳಾಪಟ್ಟಿ:

  • ಅಕ್ಟೋಬರ್ 11: ಕರ್ನಾಟಕ Vs ಮಹಾರಾಷ್ಟ್ರ (ಮೊಹಾಲಿ)
  • ಅಕ್ಟೋಬರ್ 12: ಕರ್ನಾಟಕ Vs ಕೇರಳ (ಮೊಹಾಲಿ)
  • ಅಕ್ಟೋಬರ್ 14: ಕರ್ನಾಟಕ Vs ಮೇಘಾಲಯ (ಮೊಹಾಲಿ)
  • ಅಕ್ಟೋಬರ್ 16: ಕರ್ನಾಟಕ Vs ಅರುಣಾಚಲ ಪ್ರದೇಶ (ಮೊಹಾಲಿ)
  • ಅಕ್ಟೋಬರ್ 20: ಕರ್ನಾಟಕ Vs ಸರ್ವಿಸಸ್ (ಮೊಹಾಲಿ)
  • ಅಕ್ಟೋಬರ್ 22: ಕರ್ನಾಟಕ Vs ಹರ್ಯಾಣ (ಮೊಹಾಲಿ)

Syed Mushtaq Ali returns Super Sub for T20: Will BCCI’s new rules come to IPL?

Comments are closed.