ಯುದ್ಧ ಬಿಕ್ಕಟ್ಟು ನಿವಾರಣೆಗೆ 7 ಉನ್ನತ ಮಟ್ಟದ ಸಶಕ್ತ ಗುಂಪುಗಳ ರಚನೆ : ಕೊರೊನಾ ಮಾದರಿಯಲ್ಲಿ ಪರಿಸ್ಥಿತಿ ನಿರ್ವಹಣೆ
middle east war crisis: ಇಂಧನ ಪೂರೈಕೆ, ರಸಗೊಬ್ಬರಗಳ ಕಾರ್ಯತಂತ್ರಗಳು ಸೇರಿದಂತೆ ಪರಿಸ್ಥಿತಿ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು 7 ಉನ್ನತ ಮಟ್ಟದ ಸಶಕ್ತ ಗುಂಪುಗಳನ್ನು ರಚಿಸಿದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.
ನವದೆಹಲಿ : ಮಧ್ಯ ಪ್ರಾಚ್ಯದಲ್ಲಿ ಉಂಟಾಗುತ್ತಿರುವ ಯುದ್ಧದಿಂದಾಗಿ (middle east war crisis) ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾಗುತ್ತಿರುವ ಬಿಕ್ಕಟ್ಟುಗಳನ್ನು ನಿಭಾಯಿಸಲು, ಇಂಧನ ಪೂರೈಕೆ, ರಸಗೊಬ್ಬರಗಳ ಕಾರ್ಯತಂತ್ರಗಳು ಸೇರಿದಂತೆ ಪರಿಸ್ಥಿತಿ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು 7 ಉನ್ನತ ಮಟ್ಟದ ಸಶಕ್ತ ಗುಂಪುಗಳನ್ನು ರಚಿಸಿದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ದೇಶದ ರೈತರೊಂದಿಗೆ ನಾವಿದ್ದೇವೆ. ಜಾಗತಿಕವಾಗಿ ಈ ಯುದ್ಧವು ಇಂಧನ ಬಿಕ್ಕಟ್ಟನ್ನು ಉಂಟುಮಾಡಿದೆ. ಇದು ಭಾರತದ ಮೇಲೂ ಪರಿಣಾಮ ಬೀರಿದೆ. ಭಾರತವು ಲಭ್ಯವಿರುವ ಎಲ್ಲಾ ಮೂಲಗಳಿಂದ ಇಂಧನವನ್ನು ತರಿಸಿಕೊಳ್ಳುತ್ತಿದೆ. ಕೃಷಿಕರಿಗೆ ಯಾವುದೇ ತೊಂದರೆಯಾಗದಂತೆ ರಸಗೊಬ್ಬರಗಳ ಪೂರೈಕೆಗೂ ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದರು.
ಇದನ್ನೂ ಓದಿ: ಇರಾನ್‌ಗೆ ಟ್ರಂಪ್ ಡೆಡ್‌ಲೈನ್, 24 ಗಂಟೆ ಬಾಕಿ
ಅಂತರ್ ಸಚಿವಾಲಯದ ಅಧಿಕಾರಿಗಳ ಗುಂಪು ಇದಾಗಿದ್ದು, ದೇಶದಲ್ಲಿ ಇಂಧನ ಪೂರೈಕೆ, ರಸಗೊಬ್ಬರ ಸರಬರಾಜು ನಿರ್ವಹಣೆ ಹಣದುಬ್ಬರ ಸೇರಿದಂತೆ ಎಲ್ಲಾ ಸಮಸ್ಯೆಗಳ ನಿರ್ವಹಣೆಗೆ ಈ ತಂಡವು ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.



