ನವದೆಹಲಿ : ಉದ್ಯೋಗಿಗಳ ನೇಮಕಕ್ಕೆ ಹೊಸ ಗೈಡ್ ಲೈನ್ಸ್ ರೂಪಿಸಿದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಇಂಡಿಯನ್ ಬ್ಯಾಂಕ್ (Indian Bank) ಈಗ ಸಾರ್ವಜನಿಕರ ಹಾಗೂ ವಿಶೇಷವಾಗಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಉದ್ಯೋಗಿಗಳ ನೇಮಕಕ್ಕೆ ಹೊಸ ಗೈಡ್ ಲೈನ್ಸ್ ರೂಪಿಸಿರುವ ಇಂಡಿಯನ್ ಬ್ಯಾಂಕ್ ಗರ್ಭಿಣಿ ಸ್ತ್ರೀಯರನ್ನು ಅನ್ ಫಿಟ್ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದೆ.
ಇಂಡಿಯನ್ ಬ್ಯಾಂಕ್ ತನ್ನ ಸಂಸ್ಥೆಯಲ್ಲಿ ಉದ್ಯೋಗಕ್ಕಾಗಿ ಹೊಸ ಗೈಡ್ ಲೈನ್ಸ್ ಸಿದ್ಧಪಡಿಸಿದ್ದು, ಅದರಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಗರ್ಭಿಣಿಯರನ್ನು ಹೊರತುಪಡಿಸಿ ಉಳಿದವರಿಗೆ ಅವಕಾಶ ಎಂದಿದೆ. ಅಲ್ಲದೇ ಗರ್ಭಿಣಿಯರು ಮೆಡಿಕಲ್ ಟರ್ಮ್ ಗಳ ಕೆಲಸಕ್ಕೆ ಯೋಗ್ಯರಲ್ಲದೇ ಇರೋದರಿಂದ ಪ್ರಕಾರ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಾರದೆಂದು ಸೂಚಿಸಲಾಗಿದೆ. ಇನ್ನು ಇಂಡಿಯನ್ ಬ್ಯಾಂಕ್ ದೆಹಲಿಯಲ್ಲಿ ಇಂತಹದೊಂದು ರೂಲ್ಸ್ ಸಿದ್ಧಪಡಿಸಿ ಸುತ್ತೊಲೆ ಹೊರಡಿಸಿದ್ದು, ಈಗ ಬ್ಯಾಂಕ್ ಆದೇಶ ವಿವಾದಕ್ಕೆ ಕಾರಣವಾಗಿದೆ.
ಇಂಡಿಯನ್ ಬ್ಯಾಂಕ್ ನ ಈ ಸ್ತ್ರಿ ವಿರೋಧಿ ನಿಯಮವನ್ನು ಖಂಡಿಸಿರುವ ದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ವೇತಾ ಮಲಿವಾಲ್ ಬ್ಯಾಂಕ್ ಗೆ ನೊಟೀಸ್ ಜಾರಿ ಮಾಡಿದ್ದಾರೆ. ಅಲ್ಲದೇ ಬ್ಯಾಂಕ್ ನ ಈ ನಿಯಮ ಸ್ತ್ರಿ ವಿರೋಧಿಯಾಗಿದ್ದು, ಅಲ್ಲದೇ ಮಹಿಳೆಯರ ತಾಯ್ತನದ ಹಕ್ಕು ಹಾಗೂ ಸೌಲಭ್ಯಗಳನ್ನು ಕಸಿಯುವಂತದ್ದಾಗಿದೆ ಎಂದು ಅಭಿಪ್ರಾಯಿಸಿದೆ. ಅಲ್ಲದೇ ತಕ್ಷಣ ಇಂಡಿಯನ್ ಬ್ಯಾಂಕ್ ತನ್ನ ಈ ನೇಮಕಾತಿ ನಿಯಮವನ್ನು ಹಿಂಪಡೆಯಬೇಕೆಂದು ಸೂಚಿಸಿದೆ.
ಈಗಾಗಲೇ ಬ್ಯಾಂಕ್ ನೇಮಕಾತಿಗೆ ನಿಯಮ ರೂಪಿಸಿದ್ದ ಬ್ಯಾಂಕ್, ತನ್ನ ಬ್ಯಾಂಕ್ ನೇಮಕಾತಿ ವೇಳೆ ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ತಿಂಗಳ ಗರ್ಭಿಣಿಯರನ್ನು ಕೆಲಸಕ್ಕೆ ತಾತ್ಕಾಲಿಕವಾಗಿ ಅನರ್ಹರು ಎಂದು ಘೋಷಿಸಿದೆ. ಅಲ್ಲದೇ ಡೆಲಿವರಿ ಬಳಿಕ ಕೆಲಸಕ್ಕೆ ಹಾಜರಾಗಲು ವೈದ್ಯರಿಂದ ಅನುಮತಿ ಪಡೆದು ಫಿಟನೆಸ್ ಸರ್ಟಿಫಿಕೇಟ್ ಸಲ್ಲಿಸುವಂತೆ ಹೇಳಿದೆ.
We have issued Notice to Indian Bank for their rule denying joining to pregnant women terming them ‘medically unfit’. Earlier SBI also had to withdraw similar rule after DCW Notice. Also written to RBI now requesting them to fix accountability against misogynistic rules by Banks! pic.twitter.com/ODHWgh3Eg9
— Swati Maliwal (@SwatiJaiHind) June 20, 2022
ಈಗ ಇಂಡಿಯನ್ ಬ್ಯಾಂಕ್ ಈ ನಿಯಮದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಬ್ಯಾಂಕ್ ನೇಮಕಾತಿ ನಿಯಮದ ವಿರುದ್ಧ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಮಾತ್ರವಲ್ಲ ಬ್ಯಾಂಕ್ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೂ ಸಂಘಟನೆಗಳು ಪತ್ರ ಬರೆದು ಆಗ್ರಹಿಸಿದೆ.
ಇದನ್ನೂ ಓದಿ : Fact Checking ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಸತ್ಯ ಪರಿಶೀಲಕರನ್ನು ಹೊಂದಿರುವ ದೇಶ
ಇದನ್ನೂ ಓದಿ : ಗ್ರಾಹಕರಿಗೆ ಗುಡ್‌ನ್ಯೂಸ್ : SBI, ICICI ಬ್ಯಾಂಕ್ FD ಬಡ್ಡಿದರ ಹೆಚ್ಚಳ
Pregnant women cannot apply for work, Indian Bank of India has issued a controversial order