Maruti Brezza : ಸ್ಪೆಷಲ್ ಫೀಚರ್ಸ್‌, ಕೇವಲ 11 ಸಾವಿರಕ್ಕೆ ಬುಕ್‌ ಮಾಡಿ ಹೊಸ ಮಾರುತಿ ಬ್ರೆಝಾ

ದೇಶದ ಅತಿದೊಡ್ಡ ವಾಹನ ತಯಾರಕ ಕಂಪೆನಿಯಾಗಿರುವ ಮಾರುತಿ ಸುಜುಕಿ ಹೊಸ ವಿನ್ಯಾಸದ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ವಿಶೇಷ ವಿನ್ಯಾಸದೊಂದಿಗೆ ಮಾರುತಿ ಬ್ರೆಝಾ (Maruti Brezza ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ಲುಕ್‌ನಲ್ಲಿ ಮಾರುತಿ ಬ್ರೆಝಾ ಕಾಂಪ್ಯಾಕ್ಟ್ (Compact) SUV ಯ ನವೀಕರಿಸಿದ ಅವತರಣಿಕೆಯಲ್ಲಿ ಜೂನ್ 30 ರಂದು ಬಿಡುಗಡೆಯಾಗಲಿದೆ. ಸ್ಪೆಷಲ್‌ ಫೀಚರ್ಸ್‌ಗಳನ್ನು ಹೊಂದಿರುವ ಮಾರುತಿ ಸುಝುಕಿ ಕಾರನ್ನು ಕೇವಲ 11,000 ರೂಪಾಯಿ ನೀಡಿ ಮುಂಗಡ ಬುಕ್ಕಿಂಗ್‌ ಮಾಡಬಹುದಾಗಿದೆ. ಈಗಾಗಲೇ ಮುಂಗಡ ಬುಕ್ಕಿಂಗ್‌ ಆರಂಭಗೊಂಡಿದ್ದು, ಸಮೀಪದ ಮಾರುತಿ ಸುಜುಕಿ ಶೋರೂಮ್‌ಗೆ ಭೇಟಿ ನೀಡಿ ಬುಕ್ಕಿಂಗ್‌ ಮಾಡಬಹುದಾಗಿದೆ. ಇಲ್ಲಾ ಆನ್‌ಲೈನ್‌ ಮೂಲಕವೂ ಬುಕ್ಕಿಂಗ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ.

2022 ಮಾಡೆಲ್ ಮಾರುತಿ ಸುಜುಕಿ ಬ್ರೆಝಾ ( New Maruti Brezza) ಮಾದರಿಯು 1.5L NA ಪೆಟ್ರೋಲ್ ಎಂಜಿನ್‌ (Petrol engine) ಜೊತೆಗೆ ಹೊಸ 6-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಮುಂಭಾಗದ ತುದಿಗೆ ಸ್ಟೈಲಿಂಗ್ ಅನ್ನು ಒಳಗೊಂಡಿರುತ್ತದೆ, ಜೊತೆಗೆ ಬದಿಗಳಿಗೆ ಹೊಸ DLO ಒಳಗೊಂಡಿದೆ. ಎಲೆಕ್ಟ್ರಿಕ್ ಸನ್‌ರೂಫ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, HUD ಮತ್ತು ಹೆಚ್ಚಿನ ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ.

• 2022 ಮಾರುತಿ ಸುಜುಕಿ ಬ್ರೆಝಾ ಮುಂಗಡ-ಆರ್ಡರ್‌ಗಳನ್ನು ಈಗ ರೂ 11,000 ಗೆ ಮಾಡಬಹುದು.
• ಅಧಿಕೃತವಾಗಿ ಜೂನ್ 30 ರಂದು ಬಿಡುಗಡೆಯಾಗಲಿದೆ.
• 1.5L ಪೆಟ್ರೋಲ್ ಮೋಟಾರ್, 2 ಗೇರ್ ಬಾಕ್ಸ್ ಹೊಂದಿದೆ . – 5-ಸ್ಪೀಡ್ MT ಮತ್ತು 6-ಸ್ಪೀಡ್ AT ಸೌಕರ್ಯಗಳು ಇವೆ.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಶಶಾಂಕ್ ಶ್ರೀವಾಸ್ತವ ಅವರು ಮಾರುತಿ ಬುಕ್ಕಿಂಗ್‌ ಕುರಿತು ಮಾಹಿತಿ ನೀಡಿದ್ದಾರೆ. 2016 ರಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಬ್ರೆಝಾ ಗ್ರಾಹಕರ ಮನಗೆದ್ದಿದೆ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬೆಸ್ಟ್‌ ಕಾಂಪ್ಯಾಕ್ಟ್ SUVಗಳಲ್ಲಿ ಒಂದಾಗಿದೆ. ಬಹು ಬೇಡಿಕೆಯನ್ನು ಹೊಂದಿರುವ ಬ್ರೇಝಾ ಕಾರು, ಕೇವಲ 6 ವರ್ಷಗಳಲ್ಲಿ ಬರೋಬ್ಬರಿ 7.5 ಲಕ್ಷಕ್ಕೂ ಅಧಿಕ ಕಾರುಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ಎಸ್‌ಯುವಿ ಕಾರುಗಳ ಪೈಕಿ ಪ್ರಬಲ ಮಾರುಕಟ್ಟೆಯನ್ನು ಒಳಗೊಂಡಿದೆ. ಇದೀಗ ಕಂಪೆನಿಯು ಹೊಸ ವಿನ್ಯಾಸದೊಂದಿಗೆ ಮಾರುತಿ ಬ್ರೇಝಾವನ್ನು ಪರಿಚಯಿಸುತ್ತಿದೆ ಎಂದಿದ್ದಾರೆ.

ಹೊಸ ಯುಗದ ತಂತ್ರಜ್ಞಾನದ ವೈಶಿಷ್ಟ್ಯಗಳು, ಕಮಾಂಡಿಂಗ್ ಡ್ರೈವಿಂಗ್ ವಿನ್ಯಾಸದೊಂದಿಗೆ ಬ್ರೇಝಾ ಯುವ ಭಾರತೀಯರ ಮನಗೆಲ್ಲಲಿದೆ. ಆಲ್- ನ್ಯೂ ಹಾಟ್ ಮತ್ತು ಟೆಕ್ಕಿ ಬ್ರೆಝಾ ಒಂದು ಸೊಗಸಾದ ತಂತ್ರಜ್ಞಾನ -ಸಕ್ರಿಯಗೊಳಿಸಿದ ಕಾಂಪ್ಯಾಕ್ಟ್ SUV ಆಗಿದ್ದು ಗ್ರಾಹಕರ ನಿರೀಕ್ಷೆಗಳಿಗೆ ಹೊಂದಿಕೆಯಾಗಲಿದೆ. ಆಲ್-ನ್ಯೂ ಹಾಟ್ ಮತ್ತು ಟೆಕ್ಕಿ ಬ್ರೆಝಾ ಭಾರತೀಯ ರಸ್ತೆಗಳಿಗೆ ಹೊಂದಿಕೆಯಾಗುವುದರ ಜೊತೆಗೆ ಭಾರತೀಯ ಗ್ರಾಹಕರ ಹೃದಯವನ್ನು ಗೆಲ್ಲುವ ವಿಶ್ವಾಸವಿದೆ ಎಂದು ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.

ಇದನ್ನೂ ಓದಿ : Top 5 Bikes : ಭಾರತದ ಟಾಪ್‌ 5 ಗರಿಷ್ಠ ಮೈಲೇಜ್‌ ಕೊಡುವ ಬೈಕ್‌ಗಳಿವು!

ಇದನ್ನೂ ಓದಿ : Big Day in World Cricket : ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟು ಇಂದಿಗೆ 11 ವರ್ಷ

Maruti Brezza 2022 release with special features

Comments are closed.