Asus Chromebook CX1101 : ವರ್ಕ್ ಫ್ರಂ ಹೋಂ ಮಾಡುವವರಿಗೆ ಕೇವಲ 19,999 ರೂ. ಬೆಲೆಯ ಉತ್ತಮ ಲ್ಯಾಪ್‌ಟಾಪ್ ಇಲ್ಲಿದೆ

ಈ ಕೊರೊನ ಶುರು ಆದ ಮೇಲೆ ಎಲ್ಲರೂ ವರ್ಕ್ ಫ್ರಂ ಹೋಂ (Work From Home) ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಲ್ಯಾಪ್‌ಟಾಪ್ ಇಲ್ಲದೆ ಕೆಲಸವೇ ಆಗುವುದಿಲ್ಲ. ಒಂದೊಂದು ಮನೆಯಲ್ಲೂ ಎರಡು ಅಥವಾ ಹೆಚ್ಚಿನ ಲ್ಯಾಪ್‌ಟಾಪ್ ಇದ್ದೇ ಇರುತ್ತದೆ. ಆನ್ಲೈನ್ ಕ್ಲಾಸ್, ಮೀಟಿಂಗ್ ಹೀಗೆ ಎಲ್ಲದಕ್ಕೂ ಲ್ಯಾಪ್‌ಟಾಪ್ ಬೇಕು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಲ್ಯಾಪ್‌ಟಾಪ್ ಖರೀದಿಸುವವರ ಸಂಖ್ಯೆ ಡಬಲ್ ಆಗಿದೆ. ಹೀಗಾಗಿ ( Asus Chromebook CX1101 ) ಹೊಸ ಕಂಪೆನಿಗಳು ಶುರು ಆಗಿವೆ.

ಈಗಾಗಲೇ ಸ್ಮಾರ್ಟ್, ಬಜೆಟ್ ಫ್ರೆಂಡ್ಲಿ ಹಾಗೂ ಸ್ಟೈಲಿಶ್ ಲೂಕ್‌ಗಳಿಂದ ಫೇಮಸ್ ಆಗಿರುವ ಅಸುಸ್ ಕಂಪೆನಿ ವರ್ಷದ ಕೊನೆಯಲ್ಲಿ ತನ್ನ ಬ್ರಾಂಡ್ ನ್ಯೂ ಕ್ರೋಮ್‌ಬುಕ್‌ CX1101 ( Asus Chromebook CX1101) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಸ್ಪೆಸಿಫಿಕೇಶನ್
ಡಿಸ್ಪ್ಲೇ :ಕ್ರೋಮ್‌ಬುಕ್‌ CX1101 (Asus Chromebook CX1101) 11.6 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 1366×768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 11.6 ಇಂಚಿನ ಆಂಟಿ-ಗ್ಲೇರ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ.

ಕೀ ಬೋರ್ಡ್: ಎಡ್ಜ್-ಟು-ಎಡ್ಜ್ ಸ್ಪಿಲ್-ರೆಸಿಸ್ಟೆಂಟ್ ಕೀಬೋರ್ಡ್ ಹೊಂದಿದೆ. ಪ್ರೊಸೆಸರ್: ಇಂಟೆಲ್‌ Celeron N4020 ಡ್ಯುಯಲ್-ಕೋರ್ ಪ್ರೊಸೆಸರ್‌ ಸಪೋರ್ಟ್ ಇರುವ ಈ ಲ್ಯಾಪ್‌ಟಾಪ್ ಕ್ರೋಮ್ ಒಎಸ್ (Chrome OS) ಅನ್ನು ರನ್ ಮಾಡುತ್ತದೆ. ಸ್ಟೋರೇಜ್ ಕೆಪಾಸಿಟಿ: 4ಜಿಬಿ ರಾಮ್ (RAM) ಮತ್ತು 64 ಜಿಬಿ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೊ ಎಸ್ಡಿ ಬಳಸಿಕೊಂಡು 2 ಟಿಬಿ (TB)ವರೆಗೆ ಸಂಗ್ರಹ ಸಾಮರ್ಥ್ಯವನ್ನು ಎಕ್ಸ್ಟೆಂಡ್ ಮಾಡಲು ಸಾಧ್ಯವಿದೆ.

ಇತರ ವಿಶೇಷತೆ
ಇದು ಗೂಗಲ್ ನ ಟೈಟಾನ್ ಸಿ ಸೆಕ್ಯೂರಿಟಿ ಚಿಪ್ ಇನ್ ಬಿಲ್ಟ್ ಆಗಿ ಬರುತ್ತದೆ. ಅಲ್ಲದೆ ಟ್ರಾಕ್ ಪ್ಯಾಡ್180 ಡಿಗ್ರಿಯಲ್ಲಿ ತೆರೆಯಬಹುದು. ಈ ಲ್ಯಾಪ್ ಟಾಪ್ CX1101 3-ಸೆಲ್ 42Whr ಬ್ಯಾಟರಿಯನ್ನು ಹೊಂದಿದೆ. ಇದು ಒಮ್ಮೆ ಚಾರ್ಜ್ ಮಾಡಿದಲ್ಲಿ 13 ಗಂಟೆಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳುತ್ತದೆ. ಜೊತೆಗೆ ಯುಎಸ್‌ಬಿ (USB-) ಟೈಪ್ ಸಿ ಮೂಲಕ 45 ವಾಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

ಈ ಲ್ಯಾಪ್‌ಟಾಪ್‌ ಇಂಟೆಲ್‌ ( intel HD) ಗ್ರಾಫಿಕ್ಸ್ 600 ಗ್ರಾಫಿಕ್ಸ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಇನ್‌ಬಿಲ್ಟ್ ಮೈಕ್ರೊಫೋನ್, ಗೂಗಲ್ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ.

ಆಸುಸ್‌ ಕ್ರೋಮ್‌ಬುಕ್‌ CX1101 ಡಿಸೆಂಬರ್ 15ರಿಂದ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಆದ ಅಮೇಜನ್, ಫ್ಲಿಪ್ ಕಾರ್ಟ್‌ಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಕ್ರೋಮ್ ಓಎಸ್ ಚಾಲಿತ ಲ್ಯಾಪ್‌ಟಾಪ್ ಕೇವಲ 19,999 ರೂ. ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಕ್ರೋಮ್‌ಬುಕ್‌ CX1101 ರಿಟೇಲ್ ಸೇಲ್‌ನಲ್ಲಿ 18,990 ರೂ.ಗಳ ವಿಶೇಷ ರಿಯಾಯಿತಿ ಪ್ರೈಸ್ ಇರಲಿದೆ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

ಇದನ್ನೂ ಓದಿ: Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

(Asus launched Chromebook lineup with the launch of the all new Chromebook CX1 CX1101

Comments are closed.