Prime Minister Narendra Modi : ಕಠಿಣ ಉಪವಾಸ, ಹೇಗಿದೆ ಗೊತ್ತಾ ಪ್ರಧಾನಿ ನರೇಂದ್ರ ಮೋದಿ ಅವರ ನವರಾತ್ರಿ ಆಚರಣೆ

ನವದೆಹಲಿ : ನವರಾತ್ರಿ ಆರಂಭಗೊಂಡು ಒಂಬತ್ತು ದಿನಗಳು ಕಳೆದಿದೆ. ಭಾರತೀಯರ ಪಾಲಿಗೆ ನವರಾತ್ರಿ ವಿಶೇಷ ಹಬ್ಬ. ದುರ್ಗಾದೇವಿಯ ಆರಾಧನೆಯ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಅದ್ರಲ್ಲೂ ಅಪ್ಪಟ ಹಿಂದೂವಾಗಿ, ದೈವ ಭಕ್ತರಾಗಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ನವರಾತ್ರಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ದುರ್ಗಾಮಾತೆ ಹಾಗೂ ಕಾಲಭೈರವನ ಆರಾಧಕರಾಗಿರುವ ಮೋದಿ ಅವರು ನವರಾತ್ರಿಯ ಒಂಬತ್ತು ದಿನಗಳ ಕಾಲ ಕಠಿಣ ಉಪವಾಸವನ್ನು ಕೈಗೊಳ್ಳುತ್ತಾರೆ.

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ತಮ್ಮ 41 ನೇ ವರ್ಷದಿಂದಲೇ ನವರಾತ್ರಿಯ ಆಚರಣೆಯನ್ನು ಆರಂಭಿಸಿದ್ದರು. ಒಂಬತ್ತು ದಿನಗಳ ಕಾಲ ಕಟ್ಟುನಿಟ್ಟಿನ ಉಪವಾಸ ವ್ರತವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಮಹಾಲಯ ಅಮಾವಾಸ್ಯೆಯ ದಿನದಿಂದ ಉಪವಾಸವನ್ನು ಶುರು ಮಾಡಿ ನವರಾತ್ರಿಯ ಒಂಭತ್ತು ದಿನಗಳವರೆಗೆ ಆಚರಿಸುತ್ತಾರೆ. ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ದುರ್ಗಾಪೂಜೆ ಹಾಗೂ ಆಯುಧಪೂಜೆಯನ್ನು ಮೋದಿಯವರು ತಪ್ಪಿಸುವುದಿಲ್ಲ. ಇವರು ದೇಶದಲ್ಲಿ ಇರಲಿ ಅಥವಾ ಹೊರದೇಶಗಳ ಪ್ರವಾಸದಲ್ಲಿದ್ದರೂ ಕೂಡ ನವರಾತ್ರಿಯ ಉಪವಾಸವನ್ನು ತಪ್ಪದೇ ಆಚರಿಸುತ್ತಾರೆ. ಇವರು ಒಂಭತ್ತು ದಿನಗಳ ಉಪವಾಸದಲ್ಲಿ ನೀರಾಹಾರವನ್ನು ಸೇವಿಸುತ್ತಾರೆ. ಅಂದರೆ ನಿಂಬೆಹಣ್ಣಿನ ಪಾನಕ ಅಥವಾ ತೆಂಗಿನಕಾಯಿ ನೀರು ಹಾಗೂ ನೀರನ್ನು ಮಾತ್ರ ಸೇವಿಸಿಕೊಂಡು ಇರುತ್ತಾರೆ ಎಂದು ಮೂಲಗಳು ತಿಳಿಸಿವೆ. ಇವರು ನವರಾತ್ರಿಯ ವಿಜಯದಶಮಿಯ ಸಾಯಂಕಾಲದ ಪೂಜೆಯನ್ನು ಮುಗಿಸಿದ ನಂತರವೇ ಮೋದಿಯವರು ಅನ್ನ ಆಹಾರವನ್ನು ಸೇವಿಸುತ್ತಾರೆ.

ಇದನ್ನೂ ಓದಿ : Bharat Jodo Yatra :ರಾಹುಲ್ ಭಾರತ್​ ಜೋಡೋ ಯಾತ್ರೆ ನಿಮಿತ್ತ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಸೋನಿಯಾ, ಪ್ರಿಯಾಂಕಾ ಗಾಂಧಿ

ಇದನ್ನೂ ಓದಿ : DK Sivakumar : ಡಿಕೆಶಿ ಕುತ್ತಿಗೆಗೂ ಸುತ್ತಿಕೊಂಡ ನ್ಯಾಶನಲ್ ಹೆರಾಲ್ಡ್ ಉರುಳು : ಅ.7 ರಂದು ವಿಚಾರಣೆಗೆ ಹಾಜರಾಗಲು ನೊಟೀಸ್

ಇದನ್ನೂ ಓದಿ : Bhavani Revanna:ಹಾಸನದಲ್ಲಿ ಜೆಡಿಎಸ್‌ನಿಂದ ಯಾರಿಗೆ ಟಿಕೆಟ್ ಕೊಟ್ರು ನಾವ್ ಫೈಟ್ ಮಾಡ್ತಿವಿ: ಭವಾನಿ ರೇವಣ್ಣ

ಪ್ರಧಾನಿ ಗುಜರಾತ್‌ ಮುಖ್ಯಮಂತ್ರಿಯಾದ ನಂತರ ಅಥವಾ ದೇಶದ ಪ್ರಧಾನ ಮಂತ್ರಿಯಾದ ನಂತರ ಉಪವಾಸವನ್ನು ಮಾಡುತ್ತಿಲ್ಲ. ಬದಲಾಗಿ ನಾಲ್ಕೂವರೆ ದಶಕಗಳಿಂದಲೂ ಕಠಿಣ ಉಪವಾಸವನ್ನು ಕೈಗೊಳ್ಳುತ್ತಿದ್ದಾರೆ. ಉಪವಾಸ ಸಮಯದಲ್ಲಿ ತಮ್ಮ ಕಾರ್ಯವೈಖರಿ , ಕಾರ್ಯವಿಧಾನ ಅಥವಾ ದಿನಚರಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ದಿನನಿತ್ಯದ ತಮ್ಮ ಎಲ್ಲಾ ಕಾರ್ಯಕ್ರಮದ ಜೊತೆಯಲ್ಲಿಯೇ ಉಪವಾಸವನ್ನು ಮಾಡುತ್ತಾರೆ. ತಮ್ಮ 72 ನೇ ವಯಸ್ಸಿನಲ್ಲೂ ಕಟ್ಟುನಿಟ್ಟಿನ ಉಪವಾಸವನ್ನು ಆಚರಿಸುವುದು ಬಹಳ ವಿಶೇಷವಾಗಿದೆ.

Prime Minister Narendra Modi’s Navratri fast celebration

Comments are closed.