PFI BAN : ಆರ್‌ಎಸ್‌ಎಸ್‌ಗೆ ಎಚ್ಚರಿಕೆ ಕೊಟ್ಟ ಪಿಎಫ್‌ಐ : ದೂರು ದಾಖಲು

ಮಂಗಳೂರು : ( PFI BAN ) ಕೇಂದ್ರ ಸರಕಾರದ ಕ್ರಮವನ್ನು ಹಲವರು ಸಮರ್ಥಿಸಿಕೊಂಡಿದ್ದಾರೆ. ಇನ್ನೊಂದೆಡೆಯಲ್ಲಿ ಎಎನ್‌ಐ ರಾಜ್ಯದ ಹಲವು ಕಡೆಗಳಲ್ಲಿ ದಾಳಿ ನಡೆಸಿ ಉಗ್ರ ಚಟುವಟಿಕೆಗೆ ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ಹವರು ಪಿಎಫ್‌ಐ ಮುಖಂಡರನ್ನು ಬಂಧಿಸಿದ್ದಾರೆ. ಈ ನಡುವಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್‌ಎಸ್‌ಎಸ್‌ ನಾಯಕರಿಗೆ ಚಡ್ಡಿಗೇ ಎಚ್ಚರ, ಪಿಎಫ್‌ಐ ನಾವು ಮರಳಿ ಬರುತ್ತೇವೆ ಎಂಬ ಸಂದೇಶವನ್ನು ಬರೆಯುವ ಮೂಲಕ ಆರ್‌ಎಸ್‌ಎಸ್‌ಗೆ ಎಚ್ಚರಿಕೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಲತಾಬೆಟ್ಟುವಿನ ಸ್ನೇಹಗಿರಿ ಎಂಬಲ್ಲಿನ ರಸ್ತೆಯಲ್ಲಿ ಕಿಡಿಗೇಡಿಗಳು ʼಚಡ್ಡಿಗಳೇ ಎಚ್ಚರ, ಪಿಎಫ್‌ಐ (PFI BAN ) ನಾವು ಮರಳಿ ಬರುತ್ತೇವೆ ಎಂಬ ಬರಹವನ್ನು ಬರೆಯಲಾಗಿದೆ. ಸದ್ಯ ಈ ಬರಹದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಕುರಿತು ಸ್ಥಳೀಯರು ಪೂಂಜಾಲಕಟ್ಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ : Prime Minister Narendra Modi : ಕಠಿಣ ಉಪವಾಸ, ಹೇಗಿದೆ ಗೊತ್ತಾ ಪ್ರಧಾನಿ ನರೇಂದ್ರ ಮೋದಿ ಅವರ ನವರಾತ್ರಿ ಆಚರಣೆ

ಇದನ್ನೂ ಓದಿ : Bharat Jodo Yatra :ರಾಹುಲ್ ಭಾರತ್​ ಜೋಡೋ ಯಾತ್ರೆ ನಿಮಿತ್ತ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಸೋನಿಯಾ, ಪ್ರಿಯಾಂಕಾ ಗಾಂಧಿ

ಇದನ್ನೂ ಓದಿ : Mallikarjun Kharge : ಕಾಂಗ್ರೆಸ್‌ ಅಧ್ಯಕ್ಷರಾಗ್ತಾರೆ ಮಲ್ಲಿಕಾರ್ಜುನ್‌ ಖರ್ಗೆ : ಭವಿಷ್ಯ ನುಡಿದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ

ಇದನ್ನೂ ಓದಿ : Eshwarappa :‘ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ,ಸಿದ್ದರಾಮಯ್ಯರಂತೆ ಪಕ್ಷಾಂತರಿ ನಾನಲ್ಲ’ : ಈಶ್ವರಪ್ಪ ಗುಡುಗು

ಸುಳ್ಯದಲ್ಲಿ ಪ್ರವೀಣ್‌ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಪಿಎಫ್‌ಐ ಸಂಘಟನೆಯ ವಿರುದ್ದ ಗಂಭೀರ ಆರೋಪ ಕೇಳಿಬಂದಿತ್ತು. ಅಲ್ಲದೇ ಈ ಹಿಂದೆ ನಡೆದಿರುವ ಹಲವರು ಹಿಂದೂ ಯುವಕರ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಕೈವಾಡ ಇದೆ ಎಂಬ ಕುರಿತು ಆರೋಪಿಸಲಾಗಿತ್ತು. ಪ್ರವೀಣ್‌ ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎನ್‌ಐಎ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ, ತನಿಖೆಗೆ ಒಳಪಡಿಸಿದೆ. ಈ ನಡುವಲ್ಲೇ ಕೇಂದ್ರ ಸರಕಾರ ದೇಶದಲ್ಲಿ ಪಿಎಫ್‌ಐ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್‌ ಮಾಡಿ ಆದೇಶ ಹೊರಡಿಸಿದೆ.

ಪಿಎಫ್‌ಐ ಸಂಘಟನೆಯನ್ನು ಬ್ಯಾನ್‌ ಮಾಡಿದ ಬೆನ್ನಲ್ಲೇ ಮುಖಂಡರು ಕೇಂದ್ರ ಸರಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತ ಪಡಿಸಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈ ಬರಹ ಪತ್ತೆಯಾಗಿದ್ದು, ಈ ಬರಹವನ್ನು ಯಾರು ಬರೆದಿದ್ದಾರೆ ಅನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಸ್ತೆಯ ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

After a lot of violence and killing of Hindu youths in the state of Karnataka, the central government banned the Popular Front of India (PFI).

Comments are closed.