Baby Bo Shehri : ಖಾಸಗಿ ವಿಡಿಯೋ ಪೋಸ್ಟ್‌ : ಖ್ಯಾತ ನಟಿ ಹಾಗೂ ಸ್ನೇಹಿತ ಅರೆಸ್ಟ್‌

ಕುವೈತ್ : ಅರಬ್‌ ರಾಷ್ಟ್ರಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವುದು ಅಪರಾಧ. ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡಿದ ಹಿನ್ನೆಲೆಯಲ್ಲಿ ಖ್ಯಾತ ನಟಿ (Baby Bo Shehri) ಮತ್ತು ಆಕೆಯ ಗೆಳೆಯನನ್ನು ಕುವೈತ್ ಪೊಲೀಸರು ಬಂಧಿಸಿದ್ದಾರೆ.

ಧಾರಾವಾಹಿ ನಟಿ ಬೇಬಿ ಬುಶೆಹ್ರಿ ಹಾಗೂ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಆರೋಪ ಇದೀಗ ಕೇಳಿಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಬಂಧಿಸುವಂತೆಯೂ ಆಗ್ರಹಿಸಿದ್ದರು. ಕುರಿತು ಕುವೈತ್ ಪಬ್ಲಿಕ್ ಪ್ರಾಸಿಕ್ಯೂಷನ್ ಇಬ್ಬರನ್ನು ಬಂಧಿಸುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದ್ದು, ವಿಚಾರಣೆಯನ್ನು ನಡೆಸಲಾಗುತ್ತಿದೆ.

ನಟಿ ಬೀಬಿ ಬುಶೆಹ್ರಿ ಈ ಹಿಂದೆ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್‌ ಮಾಡಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಕುವೈತ್‌ನಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್‌ ಮಾಡುವ ಸೆಲೆಬ್ರಿಟಿಗಳ ವಿರುದ್ದ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

ಇದನ್ನೂ ಓದಿ : Rachita Ram : Expose ಬಳಿಕ ಎಣ್ಣೆ ಹಾಡು : ಡಿಂಪಲ್ ಕ್ವೀನ್ ಅವತಾರಕ್ಕೆ ಮೆಚ್ಚಿದ ಫ್ಯಾನ್ಸ್

ಇದನ್ನೂ ಓದಿ : ದುಬೈ ಈಜುಕೊಳದಲ್ಲಿ ಶ್ರೀಲಂಕಾ ಸುಂದರಿ : ಜಾಕ್ವಲಿನ್ ಹಾಟ್ ಪೋಟೋಗೆ ಮರುಳಾದ ಫ್ಯಾನ್ಸ್

(Private Video Post : Kuwait Famous actress Baby Bo Shehri and friend Arrest )

Comments are closed.