Punjab CM : ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಪಂಜಾಬ್ ಆರೋಗ್ಯ ಸಚಿವರನ್ನು ಪಂಜಾಬ್ ಸಿಎಂ ಭಗವಂತ್ ಮಾನ್ ಸಂಪುಟದಿಂದ ವಜಾಗೊಳಿಸಿದ ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ. ಪಂಜಾಬ್ ಸಿಂಗ್ಲಾ ವಿರುದ್ಧ 1 ಪರ್ಸೆಂಟ್ ಕಮಿಷನ್ ಕೇಳಿದ ಆರೋಪ ಎದುರಾಗಿತ್ತು. ದೇಶದ ಇತಿಹಾಸದಲ್ಲಿಯೇ ಮುಖ್ಯಮಂತ್ರಿಯು ಸಂಪುಟದ ಸದಸ್ಯನ ಮೇಲೆ ಈ ರೀತಿಯಾಗಿ ನೇರ ಕ್ರಮ ಕೈಗೊಂಡಿರುವುದು ದೇಶದ ಇತಿಹಾಸದಲ್ಲಿಯೇ ಇದು ಎರಡನೇ ಬಾರಿಯಾಗಿದೆ. 2015ರಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದ ಸಚಿವನನ್ನು ಸಂಪುಟದಿಂದ ವಜಾಗೊಳಿಸಿದ್ದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ರ ಈ ಕ್ರಮವನ್ನು ಪ್ರಶಂಸಿಸಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಕಮಿಷನ್ ಆರೋಪವನ್ನು ಎದುರಿಸುತ್ತಿರುವ ತಮ್ಮದೇ ಸಂಪುಟದ ಸಚಿವರನ್ನು ವಜಾ ಮಾಡಿರುವ ಮಾನ್ ನಡೆಯು ನನ್ನ ಕಣ್ಣಿನಲ್ಲಿ ನೀರು ತರಿಸಿದೆ. ಈ ರೀತಿಯ ಕ್ರಮದಿಂದಾಗಿ ಸಂಪೂರ್ಣ ದೇಶವು ಇಂದು ಆಮ್ ಆದ್ಮಿ ಪಕ್ಷದ ಬಗ್ಗೆ ಹೆಮ್ಮೆ ಪಡುತ್ತಿದೆ ಎಂದು ಹೇಳಿದ್ದಾರೆ.
Proud of you Bhagwant. Ur action has brought tears to my eyes.
— Arvind Kejriwal (@ArvindKejriwal) May 24, 2022
Whole nation today feels proud of AAP https://t.co/glg6LxXqgs
ದೇಶದಲ್ಲಿ ಭ್ರಷ್ಟಾಚಾರ ಹಾಗೂ ಭ್ರಷ್ಟರಿಗೆ ಸ್ಥಾನವಿಲ್ಲದ ಏಕೈಕ ಪಕ್ಷವೆಂದರೆ ಅದು ಆಮ್ ಆದ್ಮಿ ಪಕ್ಷವಾಗಿದೆ. ಭ್ರಷ್ಟಾಚಾರದ ವಿರುದ್ಧ ಕಿರಿಯ ಸಹೋದರ ಭಗವಂತ್ ಮಾನ್ ಅವರ ನಿರ್ಧಾರ ನಮಗೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ .
“ಇಂದು, ಪಂಜಾಬ್ ಸಿಎಂ ಭಗವಂತ್ ಮಾನ್ ರಾಜ್ಯದ ಆರೋಗ್ಯ ಸಚಿವರನ್ನು ವಜಾಗೊಳಿಸಿದ್ದಾರೆ … ಯಾರನ್ನು ಬಂಧಿಸಲಾಗಿದೆ. ಈ ಭ್ರಷ್ಟಾಚಾರದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ, ಮಾಧ್ಯಮಗಳು ಅಥವಾ ಪ್ರತಿಪಕ್ಷಗಳಿಗೂ ಇದರ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಕೇಜ್ರಿವಾಲ್ ಹೇಳಿದರು.
ಇದನ್ನು ಓದಿ : Devanur Mahadeva : ತೀವ್ರಗೊಂಡ ಪಠ್ಯ ಕೇಸರಿಕರಣ ವಿವಾದ : ನನ್ನ ಬರಹ ಕೈಬಿಡಿ ಎಂದು ಸರ್ಕಾರಕ್ಕೆ ದೇವನೂರ ಮಹಾದೇವ ಪತ್ರ
ಇದನ್ನೂ ಓದಿ : Heavy Rain Yellow Alert : ತಮಿಳುನಾಡಲ್ಲಿ ಮೇಲ್ಮೈ ಸುಳಿಗಾಳಿ ಕರ್ನಾಟಕದಲ್ಲಿ ಬಾರೀ ಮಳೆ : ಉಡುಪಿ, ದ.ಕ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್
‘Proud of you Bhagwant, brought tears in my eyes’: Kejriwal heaps praise on Punjab CM for sacking minister