A Laptop Or A Tablet : ವಿದ್ಯಾರ್ಥಿಗಳಿಗೆ ಯಾವುದು ಉತ್ತಮ? ಲ್ಯಾಪ್‌ಟಾಪ್‌ ಅಥವಾ ಟಾಬ್ಲೆಟ್‌!!

ತಂತ್ರಜ್ಞಾನದ (Technology) ವಿಷಯದಲ್ಲಿ ಜಗತ್ತು ಬಹಳ ದೂರ ಸಾಗಿದೆ. ಹಿಂದೆ ಕಂಪ್ಯೂಟರ್‌(Computer) ತುಂಬಾ ದೊಡ್ಡದಾಗಿದ್ದವು. ಈಗ ನಾವು ಕಂಪ್ಯೂಟರ್‌, ಮೊಬೈಲ್‌ಗಳ ಚಿಕ್ಕ ಆವೃತ್ತಿಯನ್ನು ಅಭಿವೃದ್ಧಿಪಡಿಸಿದ್ದೇವೆ (A laptop or A Tablet). ಇವತ್ತಿನ ದಿನಗಳಲ್ಲಿ ನಾಮ್ಮಲ್ಲಿ ಮೊಬೈಲ್‌, ಕಂಪ್ಯೂಟರ್‌, ಲಾಪ್‌ಟಾಪ್‌ ಮತ್ತು ಟಾಬ್ಲೆಟ್‌ ಹೀಗೆ ಯಾವುದಾದರೂ ಕನಿಷ್ಟ ಎರಡು ಗೆಜೆಟ್‌ ಇದ್ದೇ ಇರುತ್ತದೆ. ಕಂಪ್ಯೂಟರ್‌ನ ಒಂದೇ ಒಂದು ನ್ಯೂನ್ಯತೆ ಎಂದರೆ ನಾವು ಅದನ್ನು ಎಲ್ಲಡೆ ಒಯ್ಯಲು ಸಾಧ್ಯವಿಲ್ಲ. ಅದಕ್ಕಾಗಿ ಪರ್ಯಾಯವಾಗಿ ಲಾಪ್‌ಟಾಪ್‌ ಅಥವಾ ಟಾಬ್ಲಟ್‌ ಗಳಂತಹ ಆಯ್ಕೆಗಳನ್ನು ಹೊಂದಲೇ ಬೇಕು.

ಕೋರೋನಾ ಸಾಂಕ್ರಮಿಕ ರೋಗವು ಎಲ್ಲವೂ ಒನ್‌ಲೈನ್‌ ನಲ್ಲಿಯೇ ಆಗುವಂತೆ ಮಾಡಿದೆ. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಆನ್‌ಲೈನ್‌ ಮೂಲಕವೇ ತರಗತಿಗಳಿಗೆ ಹಾಜಾರಾಗುವಂತೆ ಮಾಡಿತ್ತು. ಅಧ್ಯಯನಕ್ಕೆಂದು ಕಂಪ್ಯೂಟರ್‌, ಲಾಪ್‌ಟಾಪ್‌, ಟಾಬ್ಲೆಟ್‌ಗಳ ಮೇಲೆ ಒಲವು ಮೂಡುವಂತೆ ಮಾಡಿತು. ವಿದ್ಯಾರ್ಥಿ ಮತ್ತು ಶಿಕ್ಷಕರ ದೃಷ್ಟಿಕೋನದಿಂದ, ಮೊಬೈಲ್‌ ಫೋನ್‌ಗೆ ಹೋಲಿಸಿದರೆ ಲಾಪ್‌ಟಾಪ್‌ ಅಥವಾ ಟಾಬ್ಲೆಟ್‌ ಸ್ಕ್ರೀನ್‌ಗಳು ಉತ್ತಮವಾಗಿದೆ.

ಇದನ್ನೂ ಓದಿ : WhatsApp Tips And Tricks : WhatsApp ನ ಈ ಸಿಕ್ರೇಟ್‌ ಫೀಚರ್‌ಗಳು ನಿಮಗೆ ಗೊತ್ತಾ?

ಮೊದಲು ಲಾಪ್‌ಟಾಪ್‌ ಮತ್ತು ಟಾಬ್ಲೆಟ್‌ ನಡುವಿನ ವ್ಯತ್ಯಾಸವೇನು ಎಂದು ಅರಿಯೋಣ.

– ಲಾಪ್‌ಟಾಪ್‌ ಕಂಪ್ಯೂಟರ್‌ ನ ಸಣ್ಣ ಆವೃತ್ತಿ. ಇದರ ಅನುಕೂಲವೇನೆಂದರೆ ನಾವು ಇದನ್ನು ಎಲ್ಲಿಗೆ ಬೇಕಾದರೂ ಒಯ್ಯಬಹುದು.
– ಟಾಬ್ಲೆಟ್‌ ಮೊಬೈಲ್‌ನ ದೊಡ್ಡ ಆವೃತ್ತಿಯಾಗಿದೆ.
– ಲಾಪ್‌ಟಾಪ್‌ ಮತ್ತು ಟಾಬ್ಲೆಟ್‌ ಇವೆರಡೂ ಅಧ್ಯಯನದ ಉದ್ದೇಶಕ್ಕೆ ಉತ್ತಮವಾಗಿದೆ. ಆದರೆ ನಾವು ಅವುಗಳನ್ನು ಹೇಗೆ ಬಳಸುತ್ತೇವೆ ಎಂಬುದಕ್ಕೆ ಕೆಲವು ಅಂಶಗಳನ್ನು ಪರಿಗಣಿಸಿಬೇಕು.
– ಬೆಲೆಯಲ್ಲಿಯ ವ್ಯತ್ಯಾಸ. ನಮ್ಮ ಬಜೆಟ್‌ಗೆ ಅನುಕೂಲವಾಗುವಂತೆ ಆಯ್ದುಕೊಳ್ಳುವುದು ಉತ್ತಮ.
– ಸೈಜ್‌ ಅನ್ನು ನಿರ್ಧರಿಸಿ. ನಿಮಗೆ ಎಷ್ಟು ದೊಡ್ಡ ಸ್ಕ್ರೀನ್‌ ಬೇಕು ಎಂಬುದನ್ನು ಮೊದಲು ನಿರ್ಧರಿಸಿ.
– ಫಕ್ಷನಾಲಿಟಿಗಳು . ನೀವು ಕೀಬೋರ್ಡ್‌, ಮೌಸ್‌ ಬಳಸಿ ಉಪಯೋಗಿಸಬೇಕೆಂದುಕೊಂಡದ್ದರೆ ಆಗ ಲಾಪ್‌ಟಾಪ್‌ ಉತ್ತಮ ಆಯ್ಕೆ.

ಅತ್ಯತ್ತಮ ಗ್ಯಾಜೆಟ್‌ ಖಂಡಿತವಾಗಿಯೂ ನೀವು ಅದನ್ನು ಹೇಗೆ ಬಳಸಲು ಬಯಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ :YouTube Shorts ಅನ್ನು ಸುಲಭವಾಗಿ ರಚಿಸುವುದು ಹೇಗೆ ಗೊತ್ತೇ?

(A laptop or A tablet which one is the best option to buy)

Comments are closed.