Provident Fund Facility : 10 ಕೋಟಿ ಉದ್ಯೋಗಿಗಳು ಇಪಿಎಫ್‌ಒ ವ್ಯಾಪ್ತಿಗೆ : ಸಚಿವ ಭೂಪೇಂದರ್ ಯಾದವ್

ನವದೆಹಲಿ : (Provident Fund Facility) ದೇಶದಲ್ಲಿರುವ 6.5 ಕೋಟಿ ಕಾರ್ಮಿಕರನ್ನು ಭವಿಷ್ಯನಿಧಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ವ್ಯಾಪ್ತಿಯನ್ನು 10 ಕೋಟಿಗೆ ಏರಿಕೆ ಮಾಡಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ. ಕಾರ್ಮಿಕರ ಭವಿಷ್ಯ ನಿಧಿ(Provident Fund Facility) ಸಂಘಟನೆಯ (ಇಪಿಎಫ್‌ಒ) 70ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಸಚಿವರು ಇಪಿಎಫ್‌ಒ ವಿಷನ್ 2047 ಡಾಕ್ಯುಮೆಂಟ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ್ದಾರೆ.

ಕಾರ್ಮಿಕರ ಭವಿಷ್ಯನಿಧಿ(Provident Fund Facility)ಯ ವ್ಯಾಪ್ತಿಯನ್ನು ವಿಸ್ತರಣೆ ಮಾಡುವುದು EPFO ​​ನ ದೊಡ್ಡ ಜವಾಬ್ದಾರಿಯಾಗಿದೆ. “ನಾವು 29 ಕಾರ್ಮಿಕ ಕಾನೂನುಗಳನ್ನು ಕೋಡ್‌ ಗಳಿಗೆ ಒಳಪಡಿಸಿದ್ದೇವೆ. ಈ ಕಾರ್ಮಿಕ ಕಾನೂನು ಕೋಡ್‌ಗಳು ಇಪಿಎಫ್‌ಒ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸಲು ಸಹಾಯ ಮಾಡುತ್ತವೆ ಎಂದಿದ್ದಾರೆ.

ಇದನ್ನೂ ಓದಿ : Somalia Bomb Attack: ಸೊಮಾಲಿಯಾದ ಶಿಕ್ಷಣ ಇಲಾಖೆ ಕಚೇರಿ ಬಳಿ 2 ಕಾರು ಬಾಂಬ್ ಬ್ಲಾಸ್ಟ್: 100ಕ್ಕೂ ಅಧಿಕ ಮಂದಿ ಬಲಿ

ಇದನ್ನೂ ಓದಿ : Elon Musk: ಎಲೋನ್‌ ಮಸ್ಕ್‌ ಟ್ವಿಟರ್‌ ನ ಹೊಸ ಮಾಲಿಕ; ಸಿಇಓ ಪರಾಗ್‌ ಅಗರ್ವಾಲ್‌ ವಜಾ

ಕಳೆದ ವರ್ಷಗಳಲ್ಲಿ ಇಪಿಎಫ್‌ಒ ಬೆಳೆದಿರುವ ರೀತಿ ಮತ್ತು ಸದಸ್ಯರ ಉಳಿತಾಯದ ದೊಡ್ಡ ಸಂಗ್ರಹವನ್ನು ನಿರ್ವಹಿಸುತ್ತಿರುವ ಬಗ್ಗೆ ಸಚಿವರ ಸಂತಸ ವ್ಯಕ್ತಪಡಿಸಿದ್ದಾರೆ. ಇಪಿಎಫ್ಓ ವಿಷನ್ 2047 ರಲ್ಲಿ ದೇಶದಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಹೇಳಿದ್ದಾರೆ.

ಇದನ್ನೂ ಓದಿ : Elon Musk: ಎಲೋನ್‌ ಮಸ್ಕ್‌ ಟ್ವಿಟರ್‌ ನ ಹೊಸ ಮಾಲಿಕ; ಸಿಇಓ ಪರಾಗ್‌ ಅಗರ್ವಾಲ್‌ ವಜಾ

ಅಂಚೆ ಇಲಾಖೆಯ ಸಹಯೋಗದಲ್ಲಿ ಸಂಸ್ಥೆಯ 70 ವರ್ಷಗಳ ಸ್ಮರಣಾರ್ಥ ವಿಶೇಷ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ.ಸಂಸ್ಥಾಪನಾ ದಿನವಾಗಿ ನಡೆದ ಸಮಾರಂಭದಲ್ಲಿ ಯಾದವ್ ಅವರು ‘ಇಪಿಎಫ್‌ಒ @70 – ದಿ ಜರ್ನಿ’ ಹೆಸರಿನ ಪ್ರದರ್ಶನವನ್ನು ಉದ್ಘಾಟಿಸಿದರು. ಪುಣೆಯಲ್ಲಿ ಪ್ರಾದೇಶಿಕ ಕಚೇರಿ ಕಟ್ಟಡದ ಶಂಕುಸ್ಥಾಪನೆ ಮತ್ತು ರಾಂಚಿಯಲ್ಲಿ ಪ್ರಾದೇಶಿಕ ಕಚೇರಿ ಕಟ್ಟಡವನ್ನು ವರ್ಚುವಲ್ ಮೋಡ್‌ನಲ್ಲಿ ಉದ್ಘಾಟಿಸಿದರು

(Provident Fund Facility) 6.5 crore workers in the country are availing provident fund facility. Union Labor Minister Bhupender Yadav said that this scope will be increased to 10 crores. The minister released the EPFO Vision 2047 document at a function held as part of the 70th foundation day of the Employee

Comments are closed.