Top Selling : ಹಬ್ಬಗಳ ಋತುವಿನಲ್ಲಿ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರವಾಹನಗಳು ಯಾವುದು ಗೊತ್ತಾ?

ಹಬ್ಬಗಳ ಸೀಸನ್‌ ಎಂದರೆ ಹಳೆಯ ವಸ್ತುಗಳ ಬದಲಿಗೆ ಹೊಸ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ. ಅದಕ್ಕೆ ವಾಹನಗಳು ಹೊರತಾಗಿಲ್ಲ. ಈ ವರ್ಷದ ಹಬ್ಬದ ಋತುವಿನಲ್ಲಿಯೂ ವಾಹನಗಳ ಮಾರಾಟ ಮತ್ತು ನೋಂದಣಿ ಹೆಚ್ಚಾಗಿಯೇ ನಡೆದಿತ್ತು. ಅದೇ ರೀತಿ ಅಕ್ಟೋಬರ್‌ ತಿಂಗಳಿನಲ್ಲಿ ಹೀರೋ ಮೊಟೊಕಾರ್ಪ್‌ (Hero MoroCorp) ದ್ವಿಚಕ್ರ ವಾಹನಗಳ (2W) ನೋಂದಣಿಗಳ ಪಟ್ಟಿಯಲ್ಲಿ 5,31,774 ಯುನಿಟ್‌ಗಳೊಂದಿಗೆ (ಮೋಟಾರ್‌ಸೈಕಲ್‌ಗಳು+ಸ್ಕೂಟರ್‌ಗಳು) ಮತ್ತೆ ಅಗ್ರಸ್ಥಾನಕ್ಕೇರಿದೆ (Top Selling). ಕಳೆದ ವರ್ಷ ಕಂಪನಿಯು ನವೆಂಬರ್‌ನ ದೀಪಾವಳಿ ತಿಂಗಳಲ್ಲಿ 5,35,894 ಯುನಿಟ್‌ಗಳನ್ನು ನೋಂದಾಯಿಸಿತ್ತು.

ಹೀರೋ ದ್ವಿಚಕ್ರವಾಹನಗಳ ಖರೀದಿಯು ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚಿನ ಪ್ರಗತಿ ಸಾಧಿಸಿದೆ. ಗ್ರಾಮೀಣ ಭಾರತದ ಜನರು ಹೀರೋ ಮೊಟಾರ್‌ ಬೈಕ್‌ಗಳ ಮೇಲೆ ಹೆಚ್ಚು ಆಸಕ್ತರಾಗಿರುವುದು ವಿಶೇಷ. ಹಬ್ಬದ ಋತು ಒಟ್ಟಾರೆ ಮಾರಾಟದ ಅಂಕಿಅಂಶಗಳನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳಿಲ್ಲಿ ರಿಟೇಲ್‌ ಖರೀದಿಯು ಹೆಚ್ಚುತ್ತದೆ. ಹಬ್ಬದ ದಿನಗಳು ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳುಗಳಲ್ಲಿಯೇ ಬರುವುದರಿಂದ ಅಂಕಿಅಂಶಗಳಲ್ಲಿ ಹೆಚ್ಚಳ ಕಾಣಿಸುತ್ತದೆ, ಆದರೆ ಇದನ್ನು ಹಿಂದಿನ ವರ್ಷಗಳಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ.

ಇಲೆಕ್ಟ್ರಿಕ್‌ ದ್ವಿಚಕ್ರವಾಹನ ಮಾರಾಟದಲ್ಲಿ Ola ಎಲೆಕ್ಟ್ರಿಕ್‌ಗೆ ಅಗ್ರಸ್ಥಾನ:

ಓಲಾ ಎಲೆಕ್ಟ್ರಿಕ್ ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್ ಆಗಿದೆ. ಅದು 15,752 ಯುನಿಟ್‌ಗಳೊಂದಿಗೆ ಒಂದೇ ತಿಂಗಳಲ್ಲಿ ಅತಿ ಹೆಚ್ಚು ನೋಂದಾಯಿಸಿದ ಎಲೆಕ್ಟ್ರಿಕ್ ಸ್ಕೂಟರ್‌ ಆಗಿದೆ.

ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ತನ್ನ ಅತ್ಯಂತ ಆರ್ಥಿಕ ಎಲೆಕ್ಟ್ರಿಕ್ ಸ್ಕೂಟರ್ S1 ಏರ್ ಅನ್ನು ಭಾರತದಲ್ಲಿ ಪರಿಚಯಿಸಿತ್ತು. ಇದರ ಬೆಲೆ 79,999 ರೂ. ಗಳಾಗಿದೆ. ಓಲಾ S1 ಆಕರ್ಷಕ ಲುಕ್ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದೆ. ಇದನ್ನು ಬೇರೆ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್ ನೀಡುವುದಿಲ್ಲ ಎಂದು ಚಾಂಡೆಲ್ ಅಭಿಪ್ರಾಯಪಟ್ಟಿದ್ದಾರೆ.

ಈ ದೀಪಾವಳಿ ತಿಂಗಳಲ್ಲಿ ಓಕಿನಾವಾ 13,332 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೋಂದಣಿಮಾಡಿಕೊಂಡಿದೆ. ಆದರೆ, ಹೀರೋ ಎಲೆಕ್ಟ್ರಿಕ್ ಈ ದೀಪಾವಳಿಯಲ್ಲಿ 8,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾತ್ರ ನೋಂದಾಯಿಸಿಕೊಂಡಿದೆ. ಹೀರೋ ಮೊಟೊಕಾರ್ಪ್ ಬೆಂಬಲಿತ ಅಥರ್ ಎನರ್ಜಿ ಅಕ್ಟೋಬರ್‌ನಲ್ಲಿ 7,135 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೋಂದಾಯಿಸಿಕೊಳ್ಳುವುದರ ಮೂಲಕ 13.71% ತಿಂಗಳಿನಿಂದ ತಿಂಗಳಿಗೆ ಬೆಳವಣಿಗೆಯನ್ನು ದಾಖಲಿಸಿದೆ.

ಇದನ್ನೂ ಓದಿ : WhatsApp : ಭಾರತದಲ್ಲಿ 26 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸ್‌ಅಪ್‌

ಇದನ್ನೂ ಓದಿ : KSRTC conductor Death:ಬಸ್ಸಿನಲ್ಲೇ ಕೆಎಸ್‌ಆರ್‌ ಟಿಸಿ ಕಂಡಕ್ಟರ್‌ ಹೃದಯಾಘಾತದಿಂದ ಸಾವು

(Top Selling Hero MotoCorp on top, Ola electric on top of electric two wheeler sale)

Comments are closed.