ಗುವಾಹಟಿ : Rahul Gandhi is actually a blessing for BJP : ಕಾಂಗ್ರೆಸ್ ಪಕ್ಷದಲ್ಲಿದ್ದ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು ಪಕ್ಷದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಮ್ಮ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್ ರಾಹುಲ್ ನಡೆಯಿಂದ ಬೇಸರಗೊಂಡು ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಈ ವಿಚಾರವಾಗಿ ಇಂದು ಗುವಾಹಟಿಯಲ್ಲಿ ಪ್ರತಿಕ್ರಿಯಿಸಿದ ಆಸ್ಸಾಂನ ಸಿಎಂ ಹಿಮವಂತ್ ಬಿಸ್ವಾ ಶರ್ಮಾ ರಾಹುಲ್ ಗಾಂಧಿ ಬಿಜೆಪಿ ಪಾಲಿಗೆ ನಿಜಕ್ಕೂ ವರದಾನವಿದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ .
ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿರುವ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಗುಲಾಂ ನಬಿ ಆಜಾದ್ರ ರಾಜೀನಾಮೆ ಪತ್ರ ಹಾಗೂ 2015ರಲ್ಲಿ ನಾನು ಬರೆದ ಪತ್ರಗಳನ್ನು ನೀವು ಓದಿದರೆ ನಿಮಗೆ ಸಾಕಷ್ಟು ಸಾಮ್ಯತೆಗಳು ಕಾಣಬಹುದು. ಕಾಂಗ್ರೆಸ್ನಲ್ಲಿ ರಾಹುಲ್ ಒಬ್ಬ ಅಪ್ರಬುದ್ಧ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಈ ಬಗ್ಗೆ ಸೋನಿಯಾ ಗಾಂಧಿ ಕಾಳಜಿ ವಹಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಮೂಲಕ ಸೋನಿಯಾ ಗಾಂಧಿ ಕೇವಲ ತನ್ನ ಪುತ್ರನಿಗೆ ಪ್ರಚಾರ ನೀಡಲು ಯತ್ನಿಸುತ್ತಿದ್ದಾರೆ . ಆದರೆ ಇದೊಂದು ವ್ಯರ್ಥ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ಈ ರೀತಿ ಮಾಡುತ್ತಿರೋದ್ರಿಂದ ಪಕ್ಷದಲ್ಲಿ ನಿಷ್ಠಾವಂತರು ಒಬ್ಬೊಬ್ಬರಾಗಿಯೇ ತೊರೆಯುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಕೇವಲ ಗಾಂಧಿಗಳು ಮಾತ್ರ ಉಳಿಯುವ ದಿನ ಶೀಘ್ರದಲ್ಲಿಯೇ ಸಮೀಪಿಸಲಿದೆ ಎಂದು ನಾನು ಈ ಹಿಂದೆ ಭವಿಷ್ಯ ನುಡಿದಿದ್ದೆ.ಬಿಜೆಪಿ ಪಾಲಿಗೆ ರಾಹುಲ್ ಗಾಂಧಿ ನಿಜಕ್ಕೂ ಒಂದು ಆಶೀರ್ವಾದವಿದ್ದಂತೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ನ ಎಲ್ಲಾ ಹುದ್ದೆಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್ ಇಂದು ರಾಜೀನಾಮೆ ನೀಡಿದ್ದು ರಾಹುಲ್ ಗಾಂಧಿ ಅಪ್ರಬುದ್ಧ ನಾಯಕತ್ವ ಇದಕ್ಕೆ ಕಾರಣ ಎಂದು ರಾಜೀನಾಮೆ ಪತ್ರದಲ್ಲಿ ಬಹಿರಂಗವಾಗಿ ತಿಳಿಸಿದ್ದಾರೆ.
ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ 5 ಪುಟಗಳ ರಾಜೀನಾಮೆ ಪತ್ರ ಸಲ್ಲಿಸಿರುವ ಗುಲಾಂ ನಬಿ ಆಜಾದ್ ಸೋನಿಯಾ ಗಾಂಧಿ ಕೇವಲ ನಾಮಕಾವಸ್ಥೆಗೆ ಪಕ್ಷದ ಅಧ್ಯಕ್ಷೆಯ ಸ್ಥಾನದಲ್ಲಿದ್ದಾರೆ. ಪಕ್ಷದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ರಾಹುಲ್ ಗಾಂಧಿ ಅಥವಾ ಅವರ ಭದ್ರತಾ ಸಿಬ್ಬಂದಿ ಹಾಗೂ ಪಿಎಗಳು ತೆಗೆದುಕೊಳ್ತಿದ್ದಾರೆ ಎಂದು ಆರೋಪಿಸಿದ್ದರು.
ಇತ್ತ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ನಾಯಕರಾದ ಗುಲಾಂ ಮೊಹಮ್ಮದ್ ಸರೂರಿ, ಹಾಜಿ ಅಬ್ದುಲ್ ರಶೀದ್, ಮೊಹಮ್ಮದ್ ಅಮಿನ್ ಭಟ್, ಗುಲ್ಜಾರ್ ಅಹ್ಮದ್ ವಾನಿ, ಚೌಧರಿ ಅಕ್ರಂ ಮೊಹಮ್ಮದ್ ಹಾಗೂ ಸಲ್ಮಾನ್ ನಿಜಾಮಿ ಅವರು ಗುಲಾಂ ನಬಿ ಆಜಾದ್ ನಿರ್ಧಾರವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ .
ಇದನ್ನು ಓದಿ : BIG BREAKING : ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್ ರಾಜೀನಾಮೆ
ಇದನ್ನೂ ಓದಿ : Another jolt to Congress: ಕಾಂಗ್ರೆಸ್ಗೆ ಮತ್ತಷ್ಟು ಆಘಾತ: ಗುಲಾಂ ನಬಿ ಆಜಾದ್ ಬೆನ್ನಲ್ಲೇ ಮತ್ತೆ ಐವರು ‘ಕೈ’ ನಾಯಕರಿಂದ ರಾಜೀನಾಮೆ
Rahul Gandhi is actually a blessing for BJP: Himanta Biswa on Ghulam Nabi Azad quitting Congress