Another jolt to Congress: ಕಾಂಗ್ರೆಸ್​ಗೆ ಮತ್ತಷ್ಟು ಆಘಾತ: ಗುಲಾಂ ನಬಿ ಆಜಾದ್​ ಬೆನ್ನಲ್ಲೇ ಮತ್ತೆ ಐವರು ‘ಕೈ’ ನಾಯಕರಿಂದ ರಾಜೀನಾಮೆ

ಜಮ್ಮು & ಕಾಶ್ಮೀರ : Another jolt to Congress:  ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಆಘಾತವನ್ನು ಕಾಂಗ್ರೆಸ್​ ಅರಗಿಸಿಕೊಳ್ಳುವುದರ ಒಳಗೆಯೇ ಕಾಂಗ್ರೆಸ್​​ಗೆ ಇಂದು ಮತ್ತಷ್ಟು ಶಾಕ್​ ಎದುರಾಗಿದೆ. ಗುಲಾಂ ನಂಬಿ ಆಜಾದ್​​ಗೆ ಬೆಂಬಲವನ್ನು ಸೂಚಿಸಿ ಜಮ್ಮು & ಕಾಶ್ಮೀರದ ಐವರು ಕಾಂಗ್ರೆಸ್​ ನಾಯಕರು ಹಾಗೂ ಮಾಜಿ ಶಾಸಕರು ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಅಲ್ಲದೇ ರಾಹುಲ್​ ಗಾಂಧಿ ಪಕ್ಷದ ಕಾರ್ಯವಿಧಾನವನ್ನು ಸಂಪೂರ್ಣ ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್​ ನಾಯಕರಾದ ಗುಲಾಂ ಮೊಹಮ್ಮದ್​ ಸರೂರಿ, ಹಾಜಿ ಅಬ್ದುಲ್​ ರಶೀದ್​, ಮೊಹಮ್ಮದ್​ ಅಮಿನ್​ ಭಟ್​, ಗುಲ್ಜಾರ್​​ ಅಹ್ಮದ್​ ವಾನಿ, ಚೌಧರಿ ಅಕ್ರಂ ಮೊಹಮ್ಮದ್​ ಹಾಗೂ ಸಲ್ಮಾನ್​ ನಿಜಾಮಿ ಅವರು ಗುಲಾಂ ನಬಿ ಆಜಾದ್​​ ನಿರ್ಧಾರವನ್ನು ಬೆಂಬಲಿಸಿ ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ .


ಇಂದು ಕಾಂಗ್ರೆಸ್​ ಪಕ್ಷಕ್ಕೆ ದೊಡ್ಡ ಆಘಾತಕಾರಿ ಸುದ್ದಿ ಎಂಬಂತೆ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆಯನ್ನು ನೀಡಿದ್ದಾರೆ. ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದ ಗುಲಾಂ ನಬಿ ಆಜಾದ್​ ತಮ್ಮ ರಾಜೀನಾಮೆಗೆ ರಾಹುಲ್​ ಗಾಂಧಿ ನಡೆಯೇ ಕಾರಣ ಎಂದು ದೂರಿದ್ದರು.


ರಾಜೀನಾಮೆ ಪತ್ರದಲ್ಲಿ ನೇರವಾಗಿ ರಾಹುಲ್​ ಗಾಂಧಿಯ ಹೆಸರನ್ನೇ ಉಲ್ಲೇಖಿಸಿರುವ ಗುಲಾಂ ನಬಿ ಆಜಾದ್​​ ರಾಹುಲ್​ ಗಾಂಧಿಯ ರಿಮೋಟ್​ ಕಂಟ್ರೋಲ್​ ಮಾಡೆಲ್​ ರೀತಿಯ ನಾಯಕತ್ವವು ಕಾಂಗ್ರೆಸ್​ನ ಸಾಂಸ್ಥಿಕ ಸಮಗ್ರತೆಯನ್ನು ಕೆಡವಿದೆ ಹಾಗೂ ಪಕ್ಷದ ನಿರ್ಧಾರಗಳನ್ನು ರಾಹುಲ್​ ಗಾಂಧಿ ಅಥವಾ ಅವರ ಭದ್ರತಾ ಸಿಬ್ಬಂದಿ ಹಾಗೂ ಪಿಎಗಳು ತೆಗೆದುಕೊಳ್ತಿದ್ದಾರೆ ಎಂದು ಆರೋಪಿಸಿದ್ದಾರೆ .

ರಾಹುಲ್​ ಗಾಂಧಿ ಪಕ್ಷದ ಎಲ್ಲಾ ಹಿರಿಯ ಹಾಗೂ ಅನುಭವಿ ನಾಯಕರನ್ನು ಬದಿಗೆ ಸರಿಸಿದ್ದಾರೆ. ಯಾವುದೇ ಅನುಭವವೇ ಇಲ್ಲದ ನಾಯಕರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ರಾಹುಲ್​ ಗಾಂಧಿ ಯುಪಿಎ ಅಧಿಕಾರದ ಅವಧಿಯಲ್ಲಿ ಮಾಧ್ಯಮಗಳ ಎದುರಲ್ಲೇ ಸರ್ಕಾರಿ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ್ದರು. ಇದೇ ಅವರ ಅಪ್ರಬುದ್ಧತೆಯ ಜ್ವಲಂತ ಉದಾಹರಣೆ ಎಂದು ಕುಟುಕಿದ್ದಾರೆ.


ರಾಹುಲ್​ ಗಾಂಧಿಯ ಇಂತಹ ಬಾಲಿಶ ನಡವಳಿಕೆಗಳು ದೇಶದಲ್ಲಿ ಪ್ರಧಾನ ಮಂತ್ರಿ ಹಾಗೂ ಭಾರತ ಸರ್ಕಾರದ ಅಧಿಕಾರವನ್ನು ಸಂಪೂರ್ಣ ಬುಡಮೇಲು ಮಾಡಿತ್ತು. ರಾಹುಲ್​ ಗಾಂಧಿಯ ಈ ಒಂದು ನಡೆ 2014ರಲ್ಲಿ ಯುಪಿಎ ಸರ್ಕಾರ ಸೋಲಲು ಮುಖ್ಯ ಕಾರಣವಾಗಿತ್ತು ಎಂದಿದ್ದಾರೆ.

ಇದನ್ನು ಓದಿ : GT Deve Gowda and HD Kumaraswamy : ಜಿಟಿಡಿ – ಹೆಚ್​ಡಿಕೆ ನಡುವಿನ ಮುನಿಸು ಮಾಯ :ಒಂದೇ ವೇದಿಕೆಯಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದ ತೆನೆ ನಾಯಕರು

ಇದನ್ನೂ ಓದಿ : BIG BREAKING : ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್​ ರಾಜೀನಾಮೆ

Another jolt to Congress: 5 J&K leaders quit after Ghulam Nabi Azad’s resignation

Comments are closed.