DK Shivakumar : ಮತ್ತೊಮ್ಮೆ ಸಿಎಂ ಸ್ಥಾನದ ಅಭಿಲಾಷೆ ಹೊರಹಾಕಿದ ಡಿಕೆಶಿ : ಒಕ್ಕಲಿಗರ ಬಳಿ ಆಶೀರ್ವಾದ ಬೇಡಿದ ಕನಕಪುರ ಬಂಡೆ

ಮೈಸೂರು : DK Shivakumar : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಹಲವು ತಿಂಗಳುಗಳು ಬಾಕಿ ಇರುವಾಗಲೇ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ವಿಚಾರಕ್ಕೆ ಈಗಾಗಲೇ ಸಾಕಷ್ಟು ಜಟಾಪಟಿಗಳು ನಡೆದು ಹೋಗಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ ತಾವೇ ಆಗಬೇಕು ಎಂಬ ಅಭಿಲಾಷೆಯನ್ನು ಹೋದಲ್ಲಿ ಬಂದಲ್ಲಿ ಹೊರ ಹಾಕುತ್ತಲೇ ಇದ್ದಾರೆ.


ಮೈಸೂರಿನ ಹುಣಸೂರಿನಲ್ಲಿ ಇಂದು ನಡೆದ ಕೆಂಪೆಗೌಡ ಜಯಂತಿ ಕಾರ್ಯಕ್ರಮದಲ್ಲಿಯೂ ಇದು ಪುನರಾವರ್ತನೆಯಾಗಿದೆ. ಶಾಸಕ ಜಿ.ಟಿ ದೇವೇಗೌಡ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಪಕ್ಷಾತೀತವಾಗಿ ಆಹ್ವಾನ ನೀಡಲಾಗಿತ್ತು.ಒಕ್ಕಲಿಗರ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಹಾಜರಾಗುವ ಡಿಕೆಶಿ ಪಕ್ಷಬೇಧವನ್ನು ಮರೆತು ಈ ಕಾರ್ಯಕ್ರಮದಲ್ಲಿಯೂ ಹಾಜರಾಗುವ ಮೂಲಕ ಒಕ್ಕಲಿಗ ಜನತೆಯ ಎದುರು ತಮ್ಮ ಅಭಿಲಾಷೆಯನ್ನು ಮತ್ತೊಮ್ಮೆ ಹೊರ ಹಾಕಿದ್ದಾರೆ ,


ಈ ಕಾರ್ಯಕ್ರಮಕ್ಕೆ ನನ್ನನ್ನು ಪಕ್ಷಾತೀತವಾಗಿ ಆಹ್ವಾನಿಸಲಾಗಿದೆ. ಇಂತಹ ಒಂದು ಪವಿತ್ರ ಕಾರ್ಯಕ್ರಮದ ಮೂಲಕ ಹುಣಸೂರಿನ ಜನತೆಯನ್ನು ಭೇಟಿಯಾಗಿದ್ದು ನನ್ನ ಭಾಗ್ಯ.ನನ್ನ ಕಷ್ಟ ಕಾಲದಲ್ಲಿ ಮೈಸೂರಿನ ಜನತೆ ನನ್ನ ಜೊತೆಗೆ ನಿಂತು ನನಗೆ ಬೆಂಬಲ ನೀಡಿದ್ದನ್ನು ನಾನು ನೋಡಿದ್ದೇನೆ. ಕಾಂಗ್ರೆಸ್​ ಪಕ್ಷದಲ್ಲಿಯೂ ಇದೀಗ ನನಗೆ ಬಹದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ನನ್ನ ಅಭಿಲಾಷೆ ಈಡೇರಬೇಕು ಅಂದರೆ ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ನಾನು ಯಾವುದೇ ಧರ್ಮ, ಜಾತಿಯ ಭೇದಭಾವ ಮಾಡದೇ ನಿಮ್ಮೆಲ್ಲರ ಸೇವೆ ಮಾಡುತ್ತೇನೆಂದು ಹೇಳಿದ್ದಾರೆ.


ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಒಕ್ಕಲಿಗರ ಸಮಾವೇಶದಲ್ಲಿಯೂ ಡಿಕೆ ಶಿವಕುಮಾರ್​ ಇದೇ ರೀತಿ ಒಕ್ಕಲಿಗರ ಬೆಂಬಲವನ್ನು ಬೇಡಿದ್ದರು. ಎಸ್​ಎಂ ಕೃಷ್ಣ ಬಳಿಕ ಕಾಂಗ್ರೆಸ್​ನಿಂದ ಒಕ್ಕಲಿಗರು ರಾಜ್ಯದ ಸಿಎಂ ಸ್ಥಾನಕ್ಕೆ ಏರಿಲ್ಲ. ಆದರೆ ಇದೀಗ ಆ ದಿನ ಸನ್ನಿಹಿತವಾಗ್ತಿದೆ. ಹೀಗಾಗಿ ಈ ಅವಕಾಶವನ್ನು ನಾವು ಒಕ್ಕಲಿಗರು ಹಾಳು ಮಾಡಿಕೊಳ್ಳುವುದು ಬೇಡ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾನೇ ಸಿಎಂ ಎಂದು ಹೇಳಿಕೊಂಡಿದ್ದರು.

ಇದನ್ನು ಓದಿ : Another jolt to Congress: ಕಾಂಗ್ರೆಸ್​ಗೆ ಮತ್ತಷ್ಟು ಆಘಾತ: ಗುಲಾಂ ನಬಿ ಆಜಾದ್​ ಬೆನ್ನಲ್ಲೇ ಮತ್ತೆ ಐವರು ‘ಕೈ’ ನಾಯಕರಿಂದ ರಾಜೀನಾಮೆ

ಇದನ್ನೂ ಓದಿ : GT Deve Gowda and HD Kumaraswamy : ಜಿಟಿಡಿ – ಹೆಚ್​ಡಿಕೆ ನಡುವಿನ ಮುನಿಸು ಮಾಯ :ಒಂದೇ ವೇದಿಕೆಯಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದ ತೆನೆ ನಾಯಕರು

DK Shivakumar expressed his desire to become CM again

Comments are closed.