Raveena Tandon: KGF-2 ನಲ್ಲಿ ‘ನಮ್ಮಲ್ಲೂ ಪಡೆಗಳಿವೆ’ ಎಂದ ರವೀನಾ ಟಂಡನ್ ಗೆ ‘ಟೈಗರ್’ ಟ್ರಬಲ್

ಮಧ್ಯಪ್ರದೇಶ : Raveena Tandan ಕೆಜಿಎಫ್-2ನಲ್ಲಿ ರಮಿಕಾ ಸೇನ್ ಪಾತ್ರದ ಮೂಲಕ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿರೋ ಬಾಲಿವುಡ್ ನಟಿ ರವೀನಾ ಟಂಡನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡಿನಲ್ಲಿ ಸಫಾರಿಗೆ ಹೋದಾಗ ಹುಲಿಗೆ ತೊಂದರೆ ಕೊಟ್ಟಿದ್ದಾರೆ ಅನ್ನೋ ಆರೋಪವನ್ನ ರವೀನಾ ಟಂಡನ್ ಎದುರಿಸಿದ್ದಾರೆ.

ಏನಿದು ಪ್ರಕರಣ :  ರವೀನಾ ಟಂಡನ್ ಇತ್ತೀಚೆಗೆ ಅಂದರೆ ನವೆಂಬರ್ 22 ರಂದು ಮಧ್ಯಪ್ರದೇಶದ ಸತ್ಪುರಾ ಜಿಲ್ಲೆಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ರು. ಈ ವೇಳೆ ಹುಲಿ ತನ್ನ ಮರಿಗಳ ಜೊತೆ ಕಾಣಿಸಿಕೊಂಡಿದೆ. ಈ ವೇಳೆ ರವೀನಾ ಟಂಡನ್ ಅವರು ಹುಲಿಯ ಸಮೀಪಿಕ್ಕೆ ಹೋಗಿ ಫೋಟೋಗಳನ್ನ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಮತ್ತು ಫೋಟೋವನ್ನ ರವೀನಾ ಟಂಡನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ. ಈ ವೇಳೆ ಅವರು ನಡೆದುಕೊಂಡ ರೀತಿಯ ಬಗ್ಗೆ ಟೀಕೆ ವ್ಯಕ್ತವಾಗಿದೆ. ಅರಣ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಈ ರೀತಿ ನಡೆದುಕೊಂಡಿದ್ದಕ್ಕಾಗಿ ರವೀನಾ ಟಂಡನ್ ಅವರಿಗೆ ಸಂಕಷ್ಟ ಎದುರಾಗಿದೆ ಜೊತೆಗೆ. ಸಫಾರಿಗೆ ಕರೆದುಕೊಂಡ ಹೋದ ಅರಣ್ಯ ಸಿಬ್ಬಂದಿ ಕೂಡ ವಿಚಾರಣೆಗೆ ಒಳಪಡಬೇಕಿದೆ.

ಇಂಥ ಪ್ರದೇಶಗಳಲ್ಲಿ ಜಬಾವ್ದಾರಿಯಿಂದ ನಡೆದುಕೊಳ್ಳಬೇಕು. ಕಾಡು ಪ್ರಾಣಿಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಆದರೆ ಫೋಟೋ ತೆಗೆಯುವ ಭರದಲ್ಲಿ ರವೀನಾ ಟಂಡನ್​ ಅವರು ತಮ್ಮ ವಾಹನವನ್ನು ಹುಲಿಯ ಸಮೀಪಕ್ಕೆ ತೆಗೆದುಕೊಂಡು ಹೋಗಿದ್ದಾರೆ.ಹುಲಿ ಕಾಣಲು ಸಿಗುವುದು ಅಪರೂಪ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ರವೀನಾ ಟಂಡನ್​ ಅವರು ಕ್ಯಾಮೆರಾ ಹಿಡಿದುಕೊಂಡು ಫೋಟೋ ಮತ್ತು ವಿಡಿಯೋ ಚಿತ್ರಿಸಿಕೊಂಡಿದ್ದಾರೆ. ಈ ವೇಳೆ ಹುಲಿಯ ಅತೀ ಸಮೀಪಕ್ಕೆ ಅವರ ಜೀಪ್​ ಹೋಗಿರುವುದು ತಿಳಿದುಬಂದಿದೆ. ಅವರ ವರ್ತನೆಯಿಂದ ಹುಲಿಗೂ ಕಿರಿಕಿರಿ ಆಗಿದ್ದು, ಅದು ಘರ್ಜಿಸಿ ಮುಂದೆ ಸಾಗಿದೆ.

ರವೀನಾ ಟಂಡನ್​ ಅವರ ಆಪ್ತ ಮೂಲಗಳು ಹೇಳುವ ಪ್ರಕಾರ ಸಫಾರಿ ವೇಳೆ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಸಫಾರಿಗೆ ನಿಗದಿ ಪಡಿಸಿದ ಜಾಗದಲ್ಲೇ ವಾಹನ ಇತ್ತು. ಆದರೆ ಹುಲಿಯೇ ಸಮೀಪ ಬಂದಿದೆ ಎಂದು ಕೂಡ ಹೇಳಲಾಗುತ್ತಿದೆ. ತನಿಖೆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

ಇದನ್ನೂ ಓದಿ : Mutual Funds : ನಿಮಗೆ SIP ಬಗ್ಗೆ ಗೊತ್ತಾ? ಇದರ ಮೂಲಕವು ಲಕ್ಷಗಟ್ಟಲೇ ಹಣ ಗಳಿಸಬಹುದು.

ಇದನ್ನೂ ಓದಿ : SBI Recruitment 2022-2023 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ ಕೂಡಲೇ ಅರ್ಜಿ ಸಲ್ಲಿಸಿ

Raveena Tandon in trouble, probe launched after video shows her safari vehicle near tiger

Comments are closed.