Rishi Sunak : ಬ್ರಿಟನ್ನಲ್ಲಿ ರಾಜಕೀಯ ಹೈಡ್ರಾಮಾ ಶುರುವಾದಾಗಿನಿಂದಲೂ ಪ್ರಬಲವಾಗಿ ಕೇಳಿ ಬರುತ್ತಿದ್ದ ಹೆಸರು ಅಂದರೆ ರಿಷಿ ಸುನಕ್ . ಜಾನ್ ಬೋರಿಸ್ ಬ್ರಿಟನ್ನ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಬಳಿಕ ಜಾನ್ ಬೋರಿಸ್ ವಿರುದ್ಧ ತಮ್ಮ ಬಂಡಾಯವನ್ನು ಸೂಚಿಸುವ ಸಂಕೇತವಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಜಾನ್ ಬೋರಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೂಡ ನೀಡಿದ್ದರು. ಬೋರಿಸ್ ರಾಜೀನಾಮೆ ಬಳಿಕ ಬ್ರಿಟನ್ನಲ್ಲಿ ಪ್ರಧಾನಿ ಆಯ್ಕೆ ಚಟುವಟಿಕೆ ಜೋರಾಗಿದೆ.
ಬ್ರಿಟನ್ನ ಪ್ರಧಾನಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಐದು ಹಂತದ ಚುನಾವಣೆಯಲ್ಲಿಯೂ ಮುನ್ನಡೆಯನ್ನು ಕಾಯ್ದುಕೊಂಡಿರುವ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಗದ್ದುಗೆಯೇರಲು ಅಣತಿ ದೂರದಲ್ಲಿದ್ದಾರೆ. ಅಂದಹಾಗೆ ಈ ರಿಷಿ ಸುನಕ್ ಇನ್ಪೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರ ಅಳಿಯ.
ಈಗ ಬ್ರಿಟನ್ನಲ್ಲಿ ಪ್ರಧಾನಿ ಸ್ಪರ್ಧೆಯನ್ನು ಎದುರಿಸುತ್ತಿರುವ ರಿಷಿ ಸುನಕ್ ಹಿಂದೊಮ್ಮೆ ನಾರಾಯಣ ಮೂರ್ತಿಯವರ ಅಳಿಯನಾಗಲೂ ಸಹ ಹರಸಾಹಸವನ್ನೇ ಪಟ್ಟಿದ್ದರಂತೆ. ಈ ಬಗ್ಗೆ ಖುದ್ದು ರಿಷಿ ಸುನಕ್ರೇ ಹೇಳಿ ಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ಪರಸ್ಪರ ಪ್ರೀತಿಸಿದ್ದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿ ಅಕ್ಷತಾ ಮೂರ್ತಿ ಹಾಗೂ ರಿಷಿ ಸುನಕ್ರಿಗೆ ಮುಂದಿನ ಹಾದಿ ಅಂದುಕೊಂಡಷ್ಟು ಸುಲಭವಂತೂ ಆಗಿರಲಿಲ್ಲ .
ಅಕ್ಷತಾ ಮೂರ್ತಿ ಪ್ರೀತಿಯ ವಿಚಾರ ತಿಳಿದ ಬಳಿಕ ಮದುವೆಗೆ ನಾರಾಯಣ ಮೂರ್ತಿ ಸುತಾರಾಂ ಒಪ್ಪಿರಲಿಲ್ಲವಂತೆ. ಸ್ಟಾನ್ಫರ್ಡ್ ಯೂನಿವರ್ಸಿಟಿಯಲ್ಲಿ ಅಕ್ಷತಾ ಮೂರ್ತಿಯೊಂದಿಗೆ ವ್ಯಾಸಂಗ ಮಾಡಿದ್ದ ರಿಷಿ ಸುನಕ್ ಏನಾದರಾಗಲಿ ಅಕ್ಷತಾರನ್ನೇ ಮದುವೆಯಾಗೋದು ಅಂತಾ ಡಿಸೈಡ್ ಆಗಿದ್ದರಂತೆ .
ಮೊದಲು ಈ ಪ್ರೇಮಕ್ಕೆ ನಾರಾಯಣಮೂರ್ತಿ ಒಪ್ಪಿಗೆಯನ್ನೇ ನೀಡಿರಲಿಲ್ಲವಂತೆ. ಬಳಿ ರಿಷಿ ಸುನಕ್ರನ್ನು ವೈಯಕ್ತಿಕವಾಗಿ ಭೇಟಿಯಾದ ಮೇಲೆ ಇವರಿಬ್ಬರ ಪ್ರೀತಿಗೆ ಹಸಿರು ನಿಶಾನೆ ದೊರಕಿತ್ತು. ವಿಶೇಷ ಅಂದರೆ ಅಕ್ಷತಾ ಮೂರ್ತಿ ಈಗಲೂ ಕೂಡ ಭಾರತೀಯ ಪ್ರಜೆ.
ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಒಪ್ಪಿಗೆಯನ್ನು ಪಡೆದ ಅಕ್ಷತಾ ಮೂರ್ತಿ ಹಾಗೂ ರಿಷಿ ಸುನಕ್ 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇವರ ದಾಂಪತ್ಯದಲ್ಲಿ ಅನೌಷ್ಕಾ ಹಾಗೂ ಕೃಷ್ಣಾ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಜನಿಸಿದ್ದಾರೆ. ರಿಷಿ ಸುನಕ್ ರಾಜಕೀಯದ ಸಲಹೆಗಳನ್ನು ನಾರಾಯಣ ಮೂರ್ತಿ ಬಳಿಯಲ್ಲಿ ಕೇಳಿದ್ದರಂತೆ.ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ನವೂ ರಿಷಿ ಸುನಕ್ಗೆ ಮಾರ್ಗದರ್ಶನ ನೀಡಿದ್ದು ನಾರಾಯಣ ಮೂರ್ತಿಯಂತೆ.ಇದೀಗ ಭಾರತದ ಅಳಿಯ ಬ್ರಿಟನ್ನಲ್ಲಿ ಗೆಲುವಿನ ರೇಸ್ನಲ್ಲಿದ್ದು ಪ್ರಧಾನಿ ಹುದ್ದೆ ಆದಷ್ಟು ಬೇಗ ಸುನಕ್ರ ಪಾಲಾಗಲಿ ಎನ್ನುವುದು ಭಾರತೀಯರ ಆಶಯ ಕೂಡ ಆಗಿದೆ.
ಇದನ್ನು ಓದಿ : Bank holidays August 2022 : ಬ್ಯಾಂಕ್ ಗ್ರಾಹಕರ ಗಮನಕ್ಕೆ, ಅಗಸ್ಟ್‌ನಲ್ಲಿ 13 ದಿನಗಳ ಕಾಲ ಬ್ಯಾಂಕ್ ಬಂದ್
ಇದನ್ನೂ ಓದಿ : bigg boss : ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಬೇಕೆಂದುಕೊಂಡಿರುವವರಿಗೆ ಕಲರ್ಸ್ ಕನ್ನಡದಿಂದ ಮಹತ್ವದ ಸಂದೇಶ
Rishi Sunak Akshata Murthy Love Story