bigg boss : ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಭಾಗಿಯಾಗಬೇಕೆಂದುಕೊಂಡಿರುವವರಿಗೆ ಕಲರ್ಸ್ ಕನ್ನಡದಿಂದ ಮಹತ್ವದ ಸಂದೇಶ

bigg boss : ಬಿಗ್​ ಬಾಸ್​ ಕನ್ನಡ ರಿಯಾಲಿಟಿ ಶೋ ಆರಂಭವಾಗೋಕೆ ಇನ್ನೇನು ಕೆಲವೇ ವಾರಗಳು ಬಾಕಿ ಉಳಿದಿದೆ. ಬಿಗ್​ ಬಾಸ್​ ಕಾರ್ಯಕ್ರಮದ ತಯಾರಿ ಕುರಿತಂತೆ ನಟ ಕಿಚ್ಚ ಸುದೀಪ ಹಾಗೂ ಕಲರ್ಸ್ ಕನ್ನಡ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ಅಪ್​ಡೇಟ್ಸ್​ಗಳನ್ನು ಶೇರ್​ ಮಾಡ್ತಾನೇ ಇರ್ತಾರೆ. ಪರಮೇಶ್ವರ್​ ಗುಂಡ್ಕಲ್​ ಕೆಲವು ದಿನಗಳ ಹಿಂದಷ್ಟೇ ಬಿಗ್​ ಬಾಸ್​ ಮನೆ ನಿರ್ಮಾಣವಾಗ್ತಿರೋದ್ರ ಬಗ್ಗೆ ಹಾಗೂ ಪ್ರೋಮೋ ಶೂಟ್​ ಬಗ್ಗೆ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಮಾಹಿತಿ ನೀಡಿದ್ರು. ಅದೇ ರೀತಿ ಕಿಚ್ಚ ಸುದೀಪ ಕೂಡ ಪ್ರೋಮೋ ಶೂಟ್​ ವೇಳೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಪ್ರೋಮೋ ಶೂಟ್​ನಲ್ಲಿ ಕಿಚ್ಚ ಲುಕ್​ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

ಈ ಎಲ್ಲದರ ನಡುವೆ ಇದೀಗ ಬಿಗ್​ಬಾಸ್​​ ಕಾರ್ಯಕ್ರಮದ ವಿಚಾರವಾಗಿ ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾ ಮೂಲಕ ವೀಕ್ಷಕರಿಗೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ. ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಸೇರಿಕೊಳ್ಳಲು ಅವಕಾಶ ಕೊಡಿಸುತ್ತೇನೆಂದು ನಂಬಿಸಿ ನಿಮ್ಮಿಂದ ಹಣ ಪೀಕುವವರಿದ್ದಾರೆ . ಇಂತಹ ಆಮೀಷಗಳಿಗೆ ಬಲಿಯಾಗಬೇಡಿ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

ಕಲರ್ಸ್ ಕನ್ನಡದ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ಪೋಸ್ಟ್​ನ್ನು ಹಂಚಿಕೊಳ್ಳಲಾಗಿದ್ದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್‌ ಕನ್ನಡವು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್‌ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಷನ್ ನಡೆಸಲಾಗುತ್ತಿಲ್ಲ. ಬಿಗ್ ಬಾಸ್‌ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದರೂ ನಿಮ್ಮಿಂದ ಹಣ ಕೇಳಿದರೆ ತಕ್ಷಣ ಅಂಥವರು ವಿರುದ್ಧ ಪೊಲೀಸರಿಗೆ ದೂರು ಕೊಡಿ. ಪ್ರವೇಶ ಶುಲ್ಕ, ಠೇವಣಿ, ತರಬೇತಿ ಇಂಥ ಯಾವುದೇ ಹೆಸರಿನಲ್ಲೂ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ ಎಂಬುದು ನೆನಪಿರಲಿ. ಬಿಗ್ ಬಾಸ್ ಕುರಿತು ಮಾಹಿತಿಗೆ ಕಲರ್ಸ್‌ ಕನ್ನಡ ವಾಹಿನಿ ಅಥವಾ ವೂಟ್‌ನ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಮಾತ್ರ ಪರಿಗಣಿಸಿ ಎಂದು ಬರೆಯಲಾಗಿದೆ.


ಬಿಗ್​ಬಾಸ್​ ರಿಯಾಲಿಟಿ ಶೋ ಈ ಬಾರಿ ಎರಡೆರಡು ರೀತಿಯಲ್ಲಿ ಪ್ರಸಾರ ಕಾಣಲಿದೆ. ಒಟಿಟಿಯ ಮೂಲಕವೂ ಬಿಗ್​ ಬಾಸ್​ ಕಾರ್ಯಕ್ರಮವನ್ನು ಪ್ರದರ್ಶಿಸಲು ಕಲರ್ಸ್ ಕನ್ನಡ ಮುಂದಾಗಿದೆ. ಬಿಗ್​ ಬಾಸ್​ ಕನ್ನಡ ರಿಯಾಲಿಟಿ ಶೋ ಅಧಿಕೃತವಾಗಿ ಯಾವಾಗ ಆರಂಭಗೊಳ್ಳುತ್ತೆ ಎನ್ನುವುದನ್ನು ಇನ್ನೇನು ಕೆಲವೇ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿ ರಿವೀಲ್​ ಮಾಡುವ ಸಾಧ್ಯತೆಯಿದೆ.

ಇದನ್ನು ಓದಿ : Paneer Butter Masala Trend: ಟ್ವಿಟರ್ ನಲ್ಲಿ ಟ್ರೆಂಡ್ ಆದ ಪನೀರ್ ಬಟರ್ ಮಸಾಲಾ

ಇದನ್ನೂ ಓದಿ : Bank holidays August 2022 : ಬ್ಯಾಂಕ್‌ ಗ್ರಾಹಕರ ಗಮನಕ್ಕೆ, ಅಗಸ್ಟ್‌ನಲ್ಲಿ 13 ದಿನಗಳ ಕಾಲ ಬ್ಯಾಂಕ್‌ ಬಂದ್‌

extortion in the name of bigg boss a warning message from the channel to the aspirants

Comments are closed.