ಸೋಮವಾರ, ಏಪ್ರಿಲ್ 28, 2025
HomeNationalRozgar Mela: 10 ಲಕ್ಷ ಜನರಿಗೆ ಉದ್ಯೋಗ ಒದಗಿಸುವ ರೋಜ್‍ಗಾರ್ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ

Rozgar Mela: 10 ಲಕ್ಷ ಜನರಿಗೆ ಉದ್ಯೋಗ ಒದಗಿಸುವ ರೋಜ್‍ಗಾರ್ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ

- Advertisement -

ನವದೆಹಲಿ: (Rozgar Mela): ದೇಶದ 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ರೋಜ್‍ಗಾರ್ ಮೇಳಕ್ಕೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದರು. ವಿಡಿಯೋ ಆನ್ಫರೆನ್ಸ್ ಮೂಲಕವೇ ಈ ಬೃಹತ್ ಉದ್ಯೋಗ ಅಭಿಯಾನವನ್ನು ಪ್ರಧಾನಿ ಉದ್ಘಾಟಿಸಿದರು. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಸುವಂತೆ ಕೆಲ ತಿಂಗಳುಗಳ ಹಿಂದೆಯೇ ಪ್ರಧಾನಿ ಸೂಚಿಸಿದ್ದರು. ಅದರ ಸಲುವಾಗಿ ಕೇಂದ್ರ ಸರ್ಕಾರ ದೊಡ್ಡ ಉದ್ಯೋಗ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇಂದು ಹುದ್ದೆಗೆ ನೇಮಕಗೊಂಡ 75 ಸಾವಿರ ಜನರಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು.

ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಹಾಗೂ ಯುವಕರ ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಬೃಹತ್ ಉದ್ಯೋಗ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ವಿವಿಧ ಇಲಾಖೆಗಳ ಪರಿಶೀಲನಾ ಸಭೆ ನಡೆಸಿದ್ದ ಪ್ರಧಾನಿ ಮೋದಿ, ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವಂತೆ ನಿದೇಶನ ನೀಡಿದ್ದರು.

ಇಂದು ನಡೆದ ಅಭಿಯಾನ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಮೊದಲ ಹಂತದಲ್ಲಿ ನೇಮಕಗೊಂಡ 75 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಿಸಿದರು. ಯುವಕರಿಗೆ ಉದ್ಯೋಗವನ್ನು ಒದಗಿಸುವ ಮತ್ತು ನಾಗರಿಕರ ಕಲ್ಯಾಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಯುವಕರಿಗೆ ಇಂದು ಮಹತ್ವದ ದಿನ. ಗ್ರಾಮಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಗೆ ಖಾದಿ ಮತ್ತು ಗ್ರಾಮೋದ್ಯೋಗ ಉತ್ತಮ ನಿದರ್ಶನ. ದೇಶದಲ್ಲಿ ಇದೇ ಮೊದಲ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗ 1 ಲಕ್ಷ ಕೋಟಿ ರೂ. ಗಡಿದಾಟಿದೆ. ಇದರಲ್ಲಿ ಮಹಿಳೆಯದ ಪಾಲು ಹೆಚ್ಚಿದೆ ಎಂದರು. ಬಾರತದ ಅಭಿವೃದ್ಧಿಯಲ್ಲಿ ಉದ್ಯಮಿಗಳು, ರೈತರು, ಉತ್ಪಾದನಾ ಸಹವರ್ತಿಗಳ ಪಾತ್ರವೂ ಬಲು ದೊಡ್ಡದು ಎಂದು ಪ್ರಧಾನಿ ಗುಣಗಾನ ಮಾಡಿದರು.

ಕಳೆದ 8 ವರ್ಷಗಳಿಂದ ಉದ್ಯೋಗ, ಸ್ವಉದ್ಯೋಗ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದ್ದು, ಇಂದು ಅದಕ್ಕೆ ಮತ್ತೊಂದು ಕೊಂಡಿ ಸೇರ್ಪಡೆಗೊಂಡಿದೆ. ರೋಜ್‍ಗಾರ್ ಮೇಳವು ಸರ್ಕಾರಿ ಉದ್ಯೋಗ ಸೌಲಭ್ಯವಲ್ಲ. ಬದಲಿಗೆ ಯುವಕರಿಗೆ ಈ ಮೂಲಕ ದೇಶಸೇವೆ ಮಾಡುವ ಅವಕಾಶ ದೊರಕಿದೆ ಎಂದ ಪ್ರಧಾನಿ ಮೋದಿ, ನಾವೀಗ ಸ್ವಾವಲಂಬಿ ಮೆಟ್ಟಿಲುಗಳ ಮೇಲೆ ನಡೆಯುತ್ತಿದ್ದೇವೆ ಎಂದರು.

ಇದನ್ನೂ ಓದಿ: Gujarath Traffic rules: ಈ ರಾಜ್ಯದಲ್ಲಿ 7 ದಿನ ಟ್ರಾಫಿಕ್ ರೂಲ್ಸ್ ಇರಲ್ವಂತೆ.. ವಾಹನ ಸವಾರರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್..!

ಇದನ್ನೂ ಓದಿ: Diwali festival 2022:ಉತ್ತರ ಕನ್ನಡ ಕವಡೀಕೆರೆಯಲ್ಲಿ ಗಂಗಾಷ್ಠಮಿ ಪೂಜೆ : ದೀಪಾವಳಿಯಂದು ನಡೆಯುತ್ತೆ ವಿಶಿಷ್ಟ ಆಚರಣೆ

Rozgar Mela: PM Modi launches employment drive for 10 lakh people

RELATED ARTICLES

Most Popular