IND vs PAK Playing XI : ಪಾಕಿಸ್ತಾನ ವಿರುದ್ಧದ ಮೆಗಾ ಮ್ಯಾಚ್‌ಗೆ ಕೌಂಟ್‌ಡೌನ್, ಹೀಗಿರಲಿದೆ ಭಾರತದ ಪ್ಲೇಯಿಂಗ್ XI

ಮೆಲ್ಬೋರ್ನ್ : IND vs PAK Playing XI: ಇಡೀ ಕ್ರಿಕೆಟ್ ಜಗತ್ತಿನಲ್ಲೀಗ ಅದೊಂದು ಪಂದ್ಯದಲ್ಲೇ ಸದ್ದು. ಕ್ರಿಕೆಟ್ ಜಗತ್ತು ಕಾಯುತ್ತಿರುವುದು ಅದೊಂದು ಪಂದ್ಯಕ್ಕಾಗಿ. ಅದು ಭಾರತ ಮತ್ತು ಪಾಕಿಸ್ತಾನ (India Vs Pakistan) ನಡುವಿನ ಟಿ20 ವಿಶ್ವಕಪ್ ಪಂದ್ಯ (T20 World Cup 2022). ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಈ ಹೈವೋಲ್ಟೇಜ್ ಪಂದ್ಯ ಭಾನುವಾರ ಮಧ್ಯಾಹ್ನ 1.30ಕ್ಕೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಆರಂಭವಾಗಲಿದೆ. ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ವಿಶ್ವಕಪ್’ನಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸುವ ನಿರೀಕ್ಷೆಯಲ್ಲಿದೆ.

ಈಗಾಗಲೇ ಅಭ್ಯಾಸ ಪಂದ್ಯದಲ್ಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ, ಪಾಕಿಸ್ತಾನ ವಿರುದ್ಧ ಗೆಲ್ಲುವ ಫೇವರಿಟ್ ಆಗಿ ಕಣಕ್ಕಿಳಿಯಲಿದೆ. ಈ ಮೂಲಕ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಸಿದ್ಧವಾಗಿ ನಿಂತಿದೆ. ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್’ಗಳ ಸೋಲು ಕಂಡಿತ್ತು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತನ್ನ ಬಲಿಷ್ಠಆಟಗಾರರನ್ನೇ ಕಣಕ್ಕಿಳಿಸಲಿದೆ. ಆರಂಭಿಕನಾಗಿ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆ.ಎಲ್ ರಾಹುಲ್, 3ನೇ ಕ್ರಮಾಂಕದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್, 5ನೇ ಕ್ರಮಾಂಕದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, 6ನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕಣಕ್ಕಿಳಿಯಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಯುವ ಮಧ್ಯಮ ವೇಗಿ ಅರ್ಷದೀಪ್ ಸಿಂಗ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಸ್ಪಿನ್ ಕೋಟಾದಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಆಡಲಿದ್ದು, ಮತ್ತೊಂದು ಸ್ಥಾನಕ್ಕೆ ಅನುಭವಿ ಆಫ್’ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ (IND vs PAK Playing XI) ಭಾರತದ ಸಂಭಾವ್ಯ ಪ್ಲೇಯಿಂಗ್ XI

1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯ), 3. ವಿರಾಟ್ ಕೊಹ್ಲಿ, 4. ಸೂರ್ಯಕುಮಾರ್ ಯಾದವ್, 5. ಹಾರ್ದಿಕ್ ಪಾಂಡ್ಯ, 6. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್) 7.ಅಕ್ಷರ್ ಪಟೇಲ್, 8.ಆರ್.ಅಶ್ವಿನ್/ಯುಜ್ವೇಂದ್ರ ಚಹಲ್, 9.ಮೊಹಮ್ಮದ್ ಶಮಿ, 10.ಭುವನೇಶ್ವರ್ ಕುಮಾರ್, 11.ಅರ್ಷದೀಪ್ ಸಿಂಗ್.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಭಾರತ Vs ಪಾಕ್ ಪಂದ್ಯಕ್ಕೆ ಮಳೆಯ ಭೀತಿ
ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಮೆಗಾ ಫೈಟ್’ಗೆ ಕೌಂಟ್’ಡೌನ್ ಶುರುವಾಗಿದ್ದು, ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಮೆಲ್ಬೋರ್ನ್’ನಲ್ಲಿ (Weather forecast in Melbourne) ಶನಿವಾರ ಬೆಳಗ್ಗೆಯಿಂದಲೇ ಸತತ ಆರು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ.

ಮೆಲ್ಬೋರ್ನ್ ಅನಿರೀಕ್ಷಿತ ಹವಾಮಾನಕ್ಕೆ ಖ್ಯಾತಿ ಪಡೆದಿರುವ ಪ್ರದೇಶ. ಅಲ್ಲಿ ಯಾವಾಗ ಮಳೆ ಸುರಿಯುತ್ತದೆ ಎಂಬುದನ್ನು ಊಹಿಸುವುದೇ ಕಷ್ಟ. ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಭಾನುವಾರ ಬೆಳಗ್ಗೆ ಮತ್ತು ಸಂಜೆ ಮೆಲ್ಬೋರ್ನ್’ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದ ಮುನ್ನಾ ದಿನ ನಡೆದ ಸುದ್ದಿಗೋಷ್ಠಿಯಲ್ಲಿ ಮಳೆಯ ಸಾಧ್ಯತೆ ಬಗ್ಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Team India Captain Rohit Sharma) ಕೂಡ ಮಾತನಾಡಿದ್ದಾರೆ. “ನಾನು ಬೆಳಗ್ಗೆ ಎದ್ದು ನೋಡಿದಾಗ ಮೋಡ ಕವಿದ ವಾತಾವರಣವಿತ್ತು. ಈಗ ಸೂರ್ಯನ ಬೆಳಕು ಕಾಣುತ್ತಿದೆ. ನಾವು 40 ಓವರ್’ಗಳ ಪೂರ್ಣ ಪಂದ್ಯದ ನಿರೀಕ್ಷೆಯಲ್ಲಿ ಇಲ್ಲಿಗೆ ಬಂದಿದ್ದೇವೆ. ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದ ವೇಳೆಯೂ ಮಳೆ ಬಂದಿತ್ತು. ಆದರೂ ಅಲ್ಲಿ ನಾವು 8 ಓವರ್’ಗಳ ಪಂದ್ಯವಾಡಿದ್ದೆವು” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ : India Vs Pakistan Melbourne Rain : ಮೆಲ್ಬೋರ್ನ್‌ನಲ್ಲಿ ಸತತ 6 ಗಂಟೆಗಳ ಮಳೆ, ಭಾರತ Vs ಪಾಕಿಸ್ತಾನ ಮ್ಯಾಚ್ ನಡೆಯುತ್ತಾ ?

ಇದನ್ನೂ ಓದಿ : T20 World cup Super 12 : ಅರ್ಹತಾ ಸುತ್ತು ಮುಕ್ತಾಯ, ಸೂಪರ್-12ಗೆ 4 ತಂಡಗಳು, ಇಲ್ಲಿದೆ ಹೊಸ ವೇಳಾಪಟ್ಟಿ

T20 World Cup IND vs PAK India Playing XI for Pakistan match

Comments are closed.