Sabarimala Yatra : ಶಬರಿಮಲೆಯಲ್ಲಿ ಇಂದಿನಿಂದ ಮಂಡಲ ಪೂಜೆ ಪ್ರಾರಂಭ

ಕೇರಳ : ಶಬರಿಮಲೆಯಲ್ಲಿ (Sabarimala Yatra ) ಇಂದಿನಿಂದ ಮಂಡಲ ಪೂಜೆ ಪ್ರಾರಂಭವಾಗುತ್ತಿದೆ. ಶಬರಿಮಲೆ ಶ್ರೀ ಧರ್ಮ ಶಾಸ್ತಾ ದೇವಾಲಯದಲ್ಲಿ ಮಂಡಲ ಪೂಜೆಗಾಗಿ ಬುಧವಾರ ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ ಎನ್‌ ಪರಮೇಶ್ವರನ್‌ ನಂಬೂತಿರಿ ಅವರು ಗರ್ಭಗುಡಿಯನ್ನು ತೆರೆಯಲಿದ್ದಾರೆ.

ಇಂದು ಕೆಲವು ಮೂಲಭೂತ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಭಕ್ತರಿಗೆ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು. ವಾರ್ಷಿಕ ಮಂಡಲ ಪೂಜೆ ಹಾಗೂ ಮಕರ ಸಂಕ್ರಮಣ ತೀರ್ಥಯಾತ್ರೆಯ ಮಾಸ ಪ್ರಾರಂಭವಾಗಿದ್ದು, 41 ದಿನಗಳವರೆಗೆ ನಡೆಯುವ ಮಂಡಲ ಪೂಜೆ ಮಹೋತ್ಸವ ಡಿಸೆಂಬರ್ 27 ರಂದು ಮುಕ್ತಾಯಗೊಳ್ಳುತ್ತದೆ. ಜನವರಿ 14, 2023 ರಂದು ನಡೆಯುವ ಮಕರ ಸಂಕ್ರಮಣ ಪೂಜೆಗಾಗಿ ಡಿಸೆಂಬರ್ 30 ರಂದು ದೇವಾಲಯವನ್ನು ಮತ್ತೆ ತೆರೆಯಲಾಗುತ್ತದೆ. ಜನವರಿ 20 ರಂದು ದೇಗುಲವನ್ನು ಮತ್ತೆ ಮುಚ್ಚಲಾಗುವುದು ಎಂದು ದೇವಳದಿಂದ ವರದಿಯಾಗಿದೆ. ಆನ್‌ಲೈನ್ ಮೋಡ್ ಮೂಲಕ ತಮ್ಮ ದರ್ಶನ ಸ್ಲಾಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗದ ಭಕ್ತರಿಗೆ ಲೈವ್ ಬುಕಿಂಗ್ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಎನ್‌ನಲ್ಲಿ ಕನಿಷ್ಠ 10 ಕೌಂಟರ್‌ಗಳು ತೆರೆಯುತ್ತದೆ.

ಕೇರಳ ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ವಿಶ್ವದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನದ ಐತಿಹಾಸಿಕ ಇತಿಹಾಸವು ಕೇಳಿದರೆ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಭಕ್ತರು ಹದಿನೆಂಟು ಮೆಟ್ಟಿಲೇರಿ ಅಯ್ಯಪ್ಪನ ದರ್ಶನವನ್ನು ಮಾಡಿದರೆ ನಮ್ಮ ಜನ್ಮ ಸಾರ್ಥಕವಾಯಿತು ಎನ್ನುವಷ್ಟು ತೃಪ್ತಿಯನ್ನು ಪಡೆಯುತ್ತಾರೆ. ಕಾರ್ತಿಕ ಮಾಸ ಪ್ರಾರಂಭವಾಗುತ್ತಿದ್ದಂತೆ ಅಯ್ಯಪ್ಪನ ಭಕ್ತರು ಮಾಲೆಯನ್ನು ಧರಿಸುತ್ತಾರೆ. ಚಳಿಗಾಲದ ಈ ಸಂದರ್ಭದಲ್ಲಿ ಹೆಚ್ಚಿನ ಜನರು ಕಠಿಣ ವ್ರತವನ್ನು ಆಚರಣೆ ಮಾಡಿ ಮಕರ ಸಂಕ್ರಮಣ ದಿನ ದಿವ್ಯಜ್ಯೋತಿಯ ನೋಡುವ ಮೂಲಕ ಶಬರಿಮಲೆಯ ಅಯ್ಯಪ್ಪನ ದರ್ಶನವನ್ನು ಪಡೆಯುತ್ತಾರೆ. ಶಬರಿಮಲೆ ಕೇರಳದಲ್ಲಿರುವ ಒಂದು ಹಿಂದೂ ಪುಣ್ಯಕ್ಷೇತ್ರವಾಗಿದೆ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದ್ದು, ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ.

ಇದನ್ನೂ ಓದಿ : Small Tirupati Manjuguni of Karnataka: ಕರ್ನಾಟಕದ ಚಿಕ್ಕ ತಿರುಪತಿ ಮಂಜುಗುಣಿ : ರಥೋತ್ಸವದಂದು ಇಲ್ಲಿಗೆ ಬರುತ್ತಾನೆ ತಿರುಪತಿ ವೆಂಕಟೇಶ್ವರ

ಇದನ್ನೂ ಓದಿ : Chaya Someshwar temple : ಕಂಬದ ನೆರಳು ಸದಾ ಶಿವಲಿಂಗದ ಮೇಲೆ : ಅಪರೂಪದ ಛಾಯಾ ಸೋಮೇಶ್ವರ ದೇವಾಲಯದ ವಿಶೇಷತೆ ನಿಮಗೆ ಗೊತ್ತಾ..?

ನವೆಂಬರ್‌ನಲ್ಲಿ ಕಾರ್ತಿಕ ಮಾಸ ಪ್ರಾರಂಭವಾಗುತ್ತದೆ. ಈ ಕಾರ್ತಿಕ ಮಾಸದಲ್ಲಿ ಅಯ್ಯಪ್ಪನ ಭಕ್ತರು ಮಾಲೆಯನ್ನು ಧರಿಸಿ ವಿಶೇಷವಾಗಿ ಜನವರಿ 14ರ ಮಕರ ಸಂಕ್ರಮಣದವರೆಗೂ ಹೆಚ್ಚಿನ ಭಕ್ತರು ಶಬರಿಮಲೆಯ ತೀರ್ಥಯಾತ್ರೆಯನ್ನು ಮಾಡುತ್ತಾರೆ. ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ. ಅದು ಮೂರು ನಾಲ್ಕು ದಶಕೋಟಿ ಲಕ್ಷದಷ್ಟು ಯಾತ್ರಿಕರನ್ನು ಪ್ರತಿ ವರ್ಷ ಸೆಳೆಯುತ್ತದೆ. ಕೇರಳದ ಅತ್ಯುತ್ತಮ ತೀರ್ಥಯಾತ್ರಾ ಸ್ಥಳ ಶಬರಿಮಲೆ ಆಗಿದೆ. ಶಬರಿಮಲೆ ಯಾತ್ರೆಯು ಹೆಚ್ಚಾಗಿ ನವೆಂಬರ್‌ ಕಾರ್ತಿಕ ಮಾಸದಲ್ಲಿ ಪ್ರಾರಂಭವಾಗಿ, ಜನವರಿ ಚಳಿಗಾಲದ ಸಮಯದಲ್ಲಿ ಕೊನೆಯಾಗುತ್ತದೆ. ಶಬರಿಮಲೆ ಯಾತ್ರೆಗೆ ದೇಶ ವಿದೇಶದಿಂದ ಹಾಗೂ ಸಿನಿಮಾ ಸ್ಟಾರ್‌ ನಟರು ಮಾಲೆ ಧರಿಸಿ ಹೋಗುತ್ತಾರೆ.

Sabarimala Yatra : Mandal Puja starts at Sabarimala from today

Comments are closed.