Donald Trump: ಅಮೆರಿಕಾ ಅಧ್ಯಕ್ಷೀಯ ಪಟ್ಟದತ್ತ ಮತ್ತೆ ಒಲವು: 2024ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಟ್ರಂಪ್

ಅಮೆರಿಕಾ: 2014ರ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಾಗಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)ಘೋಷಿಸಿದ್ದಾರೆ. ಹೀಗಾಗಿ ಮುಂಬರುವ ಅಧ್ಯಕ್ಷೀಯ ಚುನಾವಣೆ ಬಹಳ ಮಹತ್ವವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: India vs New Zeeland : “ಮೊಸಳೆ ಬೈಕ್”ನಲ್ಲಿ ಬಂದು ಟ್ರೋಫಿ ಅನಾವರಣ ಮಾಡಿದ ಪಾಂಡ್ಯ, ವಿಲಿಯಮ್ಸನ್

ಕಳೆದ ಕೆಲ ದಿನಗಳ ಹಿಂದೆ ಓಹಿಯೋದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಶೀಘ್ರದಲ್ಲೇ ಬಹಳ ದೊಡ್ಡ ಘೋಷಣೆ ಮಾಡುವುದಾಗಿ ಹೇಳಿ ಟ್ರಂಪ್ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದ್ದರು. ಆದರೆ ಇಂದು ಆ ಕುತೂಹಲಕ್ಕೆ ತೆರೆಬಿದ್ದಿದ್ದು, ಮುಂದಿನ ಚುನಾವಣೆಯಲ್ಲಿ ಟ್ರಂಪ್ ಸ್ಪರ್ಧೆ ಅಂತಿಮವಾಗಿದೆ.

2016ರಲ್ಲಿ ಹಿಲರಿ ಕ್ಲಿಂಟನ್ ವಿರುದ್ಧ ಗೆಲುವು ಸಾಧಿಸಿದ್ದ ಅವರು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ್ದರು. ಅದಾದ ಬಳಿಕ 2020ರಲ್ಲಿ ಸತತ 2ನೇ ಬಾರಿ ಅಧ್ಯಕ್ಷರಾಗುವ ಭರವಸೆಯೊಂದಿಗೆ ಮತ್ತೆ ಚುನಾವಣಾ ಕಣಕ್ಕೆ ಧುಮುಕಿದ್ದ ಅವರು ಜೋ ಬೈಡನ್ ಎದುರು ಸೋಲುಂಡಿದ್ದರು. ಹೀಗಾಗಿ ಮುಂದಿನ ಚುನಾವಣೆಯಲ್ಲಿ (2024) ತನ್ನ ಸ್ಪರ್ಧೆ ಬಗ್ಗೆ ಅವರು ಏನನ್ನೂ ಹೇಳಿರಲಿಲ್ಲ. ಕಳೆದ ಚುನಾವಣೆಯಲ್ಲಿ ಸೋತ ನೋವು ಇನ್ನೂ ಮನಸ್ಸಿನಲ್ಲಿ ಉಳಿದಿದ್ದು, ತಾನು ಮತ್ತೆ ಚುನಾವಣಾ ಕಣಕ್ಕಿಳಿಯಲು ಸಿದ್ಧನಿದ್ದೇನೆ ಎಂದು ಟ್ರಂಪ್ ತನ್ನ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ.

ಮುಂದಿನ ಚುನಾವಣೆಗೆ ತಾನು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿರುವ ಟ್ರಂಪ್ ಯುಎಸ್ ಫೆಡರಲ್ ಚುನಾವಣಾ ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಮೂಲಕ ರಿಪಬ್ಲಿಕನ್ ಅಥವಾ ಡೆಮಾಕ್ರಟಿಕ್ ಪಕ್ಷದಿಂದ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಸಲ್ಲಿಸಿದ ಮೊದಲ ಸ್ಪರ್ಧಿ ಟ್ರಂಪ್ ಆಗಿದ್ದಾರೆ.

ಇದನ್ನೂ ಓದಿ: PMV EaS-E : ಜಸ್ಟ್‌ 4.79 ಲಕ್ಷಕ್ಕೆ ಕಾರು! ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾದ ಪಿಎಮ್‌ವಿಯ ಕ್ಯಾಂಪ್ಯಾಕ್ಟ್‌ ಇಲೆಕ್ಟ್ರಿಕ್‌ ಕಾರ್‌ EaS-E

2014ರ ಬೇಸಿಗೆಯ ಸಮಯದಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಲಿದ್ದಾರೆ. ಅತ್ತ ಡೆಮಾಕ್ರಟಿಕ್ ಪಕ್ಷದಿಂದ ಹಾಲಿ ಅಧ್ಯಕ್ಷ ಜೊ ಬೈಡನ್ ಕೂಡಾ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಮುಂದಿನ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ.

Donald Trump: Again leaning towards the US presidency. Trump has announced that he will contest the 2024 election

Comments are closed.